New Luggage Rules : ಬಂದಿದೆ ನೋಡಿ ಹೊಸ ಲಗ್ಗೇಜ್ ರೂಲ್ಸ್ – ರೈಲ್ವೇ ಇಲಾಖೆಯಿಂದ ಹೊಸ ನಿಯಮ
New Luggage Rules: ಈಗಾಗಲೇ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ರೈಲ್ವೆ ಪ್ರಯಾಣಿಕರು ಗಮನಿಸಬೇಕಾದ ಮುಖ್ಯ ಮಾಹಿತಿ ನೀಡಲಾಗಿದೆ. ನೀವೇನಾದರೂ ರೈಲಿನಲ್ಲಿ ಹೆಚ್ಚಾಗಿ ಪ್ರಯಾಣ ಮಾಡುವವರಾದರೆ ಈ ಮಾಹಿತಿ ತಿಳಿದಿರುವುದು ಅವಶ್ಯ. ಇಲ್ಲ ಎಂದಾದರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಫಿಕ್ಸ್!!
ಹೌದು!! ನೀವು ರೈಲಿನಲ್ಲಿ ಪ್ರಯಾಣ ಬೆಳೆಸುವಾಗ ಹೆಚ್ಚು ಲಗೇಜ್ ಒಯ್ಯುವ ಅಭ್ಯಾಸ ರೂಡಿಸಿಕೊಂಡಿದ್ದರೆ ಇಂದೇ ಬಿಟ್ಟು ಬಿಡಿ!! ಯಾಕಂದ್ರೆ, ರೈಲ್ವೆ ಇಲಾಖೆ ಹೊಸ ಲಗೇಜ್ ನಿಯಮವನ್ನು(New Luggage Rules) ಜಾರಿಗೆ ತಂದಿದ್ದು, ಹೀಗಾಗಿ ನೀವು ಹೆಚ್ಚುವರಿ ಲಗ್ಗೇಜ್ ಒಯ್ದರೆ ಭಾರತೀಯ ರೈಲ್ವೆಗೆ ಭಾರಿ ದಂಡ ಕಟ್ಟಬೇಕಾಗುತ್ತದೆ.
ವಿಮಾನ ಪ್ರಯಾಣದಂತೆ, ರೈಲು ಪ್ರಯಾಣಿಕರು( Railway Passengers)ಹೆಚ್ಚುವರಿ ಲಗೇಜ್ ಶುಲ್ಕವನ್ನು ಪಾವತಿಸಬೇಕಾಗಿದ್ದು, ಈ ಕುರಿತು ಹೊಸ ನೀತಿಯನ್ನು (IRCTC) ಭಾರತಿಯ ರೈಲ್ವೆ ಪ್ರಕಟಿಸಲಾಗಿದೆ. ವಿಮಾನ ಪ್ರಯಾಣದಂತೆ, ರೈಲು ಪ್ರಯಾಣಿಕರು ಹೆಚ್ಚುವರಿ ಲಗೇಜ್ ಶುಲ್ಕವನ್ನು(Extra Luggage Charges) ಪಾವತಿಸಬೇಕಾಗುತ್ತದೆ. ಹೀಗಾಗಿ, ರೈಲ್ವೇ ಸಚಿವಾಲಯವು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮುಖಾಂತರ ರೈಲ್ವೇ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಲಗೇಜ್‌ನೊಂದಿಗೆ ರೈಲುಗಳಲ್ಲಿ ಪ್ರಯಾಣಿಸದಂತೆ ಸಲಹೆ ನೀಡಿದೆ.
‘ಪ್ರಯಾಣದ ಸಮಯದಲ್ಲಿ ನಿಮ್ಮೊಂದಿಗೆ ಹಲವಾರು ವಿಷಯಗಳಿದ್ದರೆ, ಪ್ರಯಾಣದ ಸಂತೋಷ ಅರ್ಧದಷ್ಟು! ಹೆಚ್ಚು ಲಗೇಜ್ ಇಟ್ಟುಕೊಂಡು ರೈಲಿನಲ್ಲಿ ಪ್ರಯಾಣಿಸಬೇಡಿ. ಜಾಸ್ತಿ ಇದ್ದರೆ ಪಾರ್ಸೆಲ್ ಆಫೀಸ್ಗೆ ಹೋಗಿ ಲಗೇಜ್ ಬುಕ್ ಮಾಡಿ’ ಎಂದು ರೈಲ್ವೇ ಸಚಿವಾಲಯ ಟ್ವೀಟ್ ಮಾಡಿದೆ.
ಹೊಸ ಮಾರ್ಗಸೂಚಿಗಳ ಅನುಸಾರ, ಯಾವುದೇ ರೈಲ್ವೇ ಪ್ರಯಾಣಿಕರು ಹೆಚ್ಚುವರಿ ಮತ್ತು ಕಾಯ್ದಿರಿಸದ ಸಾಮಾನು ಸರಂಜಾಮುಗಳನ್ನು ಸಾಗಿಸಿದರೆ ಬರೋಬ್ಬರಿ ಬ್ಯಾಗೇಜ್‌ನ ಮೌಲ್ಯದ ಆರು ಪಟ್ಟು ಶುಲ್ಕ(Fine) ವಿಧಿಸಲಾಗುತ್ತದೆ. ಅಂದರೆ, ಒಬ್ಬ ಪ್ರಯಾಣಿಕ 40 ಕೆಜಿ ಹೆಚ್ಚುವರಿ ಲಗೇಜ್‌ನೊಂದಿಗೆ 500 ಕಿಮೀ ಪ್ರಯಾಣಿಸುತ್ತಿದ್ದರೆ ಪ್ರಯಾಣಿಕರು ಅದನ್ನು ಲಗೇಜ್ ವ್ಯಾನ್‌ನಲ್ಲಿ ರೂ.109 ಕ್ಕೆ ಬುಕ್ ಮಾಡಬಹುದು. ಆದರೆ ಪ್ರಯಾಣದ ವೇಳೆ ಹೆಚ್ಚುವರಿ ಲಗೇಜ್‌ನೊಂದಿಗೆ ಪ್ರಯಾಣಿಕರು ಸಿಕ್ಕಿಬಿದ್ದಲ್ಲಿ, ಅವರು ರೂ.654 ದಂಡವನ್ನು ಪಾವತಿ ಮಾಡಬೇಕಾಗುತ್ತದೆ.
ಹಾಗಿದ್ರೆ ಲಗೇಜ್ ಬುಕ್ ಮಾಡುವುದು ಹೇಗೆ ಎಂಬ ಪ್ರಶ್ನೆ ಸಹಜವಾಗಿ ನಿಮ್ಮನ್ನು ಕಾಡಬಹುದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ!
ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲಿ ತಮ್ಮ ಲಗೇಜ್ ಅನ್ನು ಮೊದಲೇ ಬುಕ್ ಮಾಡಬಹುದಾಗಿದೆ. ಇದಲ್ಲದೆ, ಪ್ರಯಾಣಿಕರು ಪ್ರಯಾಣಿಸುವ ರೈಲು (Train)ಹೊರಡುವ ಸಮಯಕ್ಕಿಂತ ಕನಿಷ್ಠ 30 ನಿಮಿಷಗಳ ಮೊದಲು ಬುಕಿಂಗ್ ಸ್ಟೇಷನ್‌ನಲ್ಲಿರುವ ಲಗೇಜ್ ಕಚೇರಿಯಲ್ಲಿ ಕ್ಯಾರಿ-ಆನ್ ಲಗೇಜ್ (Carry-On- Luggage)ಅನ್ನು ಹಾಜರುಪಡಿಸಬೇಕಾಗುತ್ತದೆ.
ಒಂದು ವೇಳೆ, ನೀವು ಪ್ರಥಮ ದರ್ಜೆ ಎಸಿಯಲ್ಲಿ ಪ್ರಯಾಣಿಸುತ್ತಿದ್ದರೆ, 70 ಕೆಜಿ ವರೆಗೆ ಉಚಿತವಾಗಿ ಒಯ್ಯಲು ಅವಕಾಶವಿದೆ. ಎಸಿ 2-ಟೈಯರ್‌ನ ಮಿತಿ 50 ಕೆಜಿ, ಎಸಿ 3-ಟೈರ್ ಸ್ಲೀಪರ್, ಎಸಿ ಚೇರ್ ಕಾರ್ ಮತ್ತು ಸ್ಲೀಪರ್ ಕ್ಲಾಸ್‌ಗಳಲ್ಲಿ 40 ಕೆಜಿಯವರೆಗಿನ ಬ್ಯಾಗೇಜ್ ಅನ್ನು ಒಯ್ಯಲು ಅವಕಾಶವಿದೆ. ಒಂದು ವೇಳೆ, ನೀವು ಎರಡನೇ ತರಗತಿಯಲ್ಲಿ ಪ್ರಯಾಣಿಸುತ್ತಿದ್ದರೆ, ಈ ಮಿತಿಯು 25 ಕೆಜಿ ವರೆಗೆ ಇರುತ್ತದೆ. ಸಾಮಾನು ಸರಂಜಾಮುಗಳಿಗೆ ಕನಿಷ್ಠ ಶುಲ್ಕ 30 ರೂ. 70-80 ಕೆಜಿ ವರೆಗೆ ಹೆಚ್ಚುವರಿ ಲಗೇಜ್ ಸಾಗಿಸಲು, ಪ್ರಯಾಣಿಕರು ಈಗ ತಮ್ಮ ಬ್ಯಾಗೇಜ್ ಅನ್ನು ಕಾಯ್ದಿರಿಸಬೇಕಾಗುತ್ತದೆ. ಹೀಗಾಗಿ, ನೀವು ರೈಲಿನಲ್ಲಿ ಪ್ರಯಾಣಿಸುವುದಾದರೆ ಈ ಮಾಹಿತಿ ಅರಿತು ಪ್ರಯಾಣಿಸುವುದು ಒಳ್ಳೆಯದು. ಇಲ್ಲ ಎಂದಾದರೆ ದಂಡ ಕಟ್ಟಲು ರೆಡಿಯಿರಬೇಕಾಗುತ್ತದೆ.