Home latest Nepal: ಆಪರೇಷನ್ ಮಾಡಿದ ವೈದ್ಯರಿಗೆ ಕಾದಿತ್ತು ಅಚ್ಚರಿ! ವ್ಯಕ್ತಿಯ ಹೊಟ್ಟೆಯೊಳಗಿತ್ತು ‘ವೋಡ್ಕಾ ಬಾಟ್ಲಿ’!

Nepal: ಆಪರೇಷನ್ ಮಾಡಿದ ವೈದ್ಯರಿಗೆ ಕಾದಿತ್ತು ಅಚ್ಚರಿ! ವ್ಯಕ್ತಿಯ ಹೊಟ್ಟೆಯೊಳಗಿತ್ತು ‘ವೋಡ್ಕಾ ಬಾಟ್ಲಿ’!

Nepal

Hindu neighbor gifts plot of land

Hindu neighbour gifts land to Muslim journalist

Nepal : ಆತ ಗೆಳೆಯರ ಜೊತೆ ಸೇರಿ ಭರ್ಜರಿಯಾಗಿ ಪಾರ್ಟಿ ಮಾಡಿದ್ದಾನೆ. ಪಾರ್ಟಿ ಮುಗಿಸಿ ಮನೆಗೆ ಬಂದ ಬಳಿಕ ಮರುದಿನದಿಂದ ಹೊಟ್ಟೆ ನೋವು ಶುರುವಾಗಿದೆ. ಒಂದೆರೆಡು ದಿನದಲ್ಲಿ ಮುಖ, ಹೊಟ್ಟೆ ಊದಿಕೊಳ್ಳಲು ಆರಂಭಿಸಿದೆ. ಬಗೆ ಬಗೆಯ ಬಾದೆ ತಾಳಲಾರದೆ ಕೊನೆಗೆ ಆಸ್ಪತ್ರೆ ದಾಖಲಾದ. ಇವನನ್ನು ಚೆಕ್ ಮಾಡಿದ ಡಾಕ್ಟರ್(Doctor), ಸಮಸ್ಯೆಯ ಕಾರಣ ತಿಳಿಯದೆ ಆಪರೇಷನ್ ಮಾಡಲು ಮುಂದಾಗಿದ್ದಾರೆ. ಆದರೆ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ವೈದ್ಯರಿಗೆ ದೊಡ್ಡ ಅಚ್ಚರಿ ಕಾದಿತ್ತು. ಯಾಕೆಂದರೆ ಈ ಪುಣ್ಯಾತ್ಮನ ಹೊಟ್ಟೆಯಲ್ಲಿ ವೋಡ್ಕಾ(Vodka) ಮದ್ಯದ ಬಾಟಲಿ ಪತ್ತೆಯಾಗಿತ್ತಿದೆ.

ಹೌದು, ನೇಪಾಳ(Nepal) ದ ರೌಹತಾಹತ್(Rautahat) ಜಿಲ್ಲೆಯ ಗುಜಾರ(Gujara) ಮುನ್ಸಿಪಾಲಿಟಿ ವಲಯದಲ್ಲಿ ಇಂಥದೊಂದು ಘಟನೆ ನಡೆದದ್ದು, 26 ವರ್ಷದ ನುರ್ಸಾದ್ ಮನ್ಸೂರಿ(Nursad Mansuri) ಎಂಬಾತನ ಹೊಟ್ಟೆಯಲ್ಲಿ ಈ ವೋಡ್ಕಾ ಬಟಲಿ ಪತ್ತೆಯಾಗಿದೆ. ಅಲ್ಲದೆ ಈ ಬಾಟ್ಲಿ ಆತನ ಹೊಟ್ಟೆ ಸೇರಿದ್ದೇ ಒಂದು ವಿಚಿತ್ರ ಅನ್ಬೋದು. ಕಾರಣ ಕೇಳಿದರೆ ನಿಮಗೂ ಶಾಕ್ ಆಗುತ್ತೆ.

ಈ ನುರ್ಸಾದ್, ತನ್ನ ಗೆಳೆಯರಾದ ಶೇಕ್ ಸಮೀಮ್(Shek Sameem) ಸೇರಿದಂತೆ ಹಲವರ ಜೊತೆ ಭರ್ಜರಿ ಪಾರ್ಟಿ ಮಾಡಿದ್ದಾನೆ. ಅಲ್ಲಿ ಕಂಠಪೂರ್ತಿ ಕುಡಿದ್ದಾನೆ. ಬಗಳಿ ಗೆಳೆಯರೆಲ್ಲರೂ ಸೇರಿ ಈತನಿಗೆ ವಿಪರೀತ ಕುಡಿಸಿದ್ದಾರೆ. ಇದರೊಂದಿಗೆ ಒಂದೆರೆಡು ಬ್ರ್ಯಾಂಡ್ ಮಿಕ್ಸ್ ಮಾಡಿ ಕೊಟ್ಟಿದ್ದಾರೆ. ಕುಡಿದು ಕುಡಿದು ಕಿಕ್ಕೇರಿ ನಶೆಯಲ್ಲಿದ್ದ ಈತನಿಗೆ ಏನಾಗುತ್ತಿದೆ ಎಂಬ ಪರಿಜ್ಞಾನವೇ ಇರಲಿಲ್ಲ. ಇವನ ಈ ಪರಿಸ್ಥಿತಿಯನ್ನು ಅಡ್ವಾಂಟೇಜ್ ಆಗಿ ತಗೊಂಡ ಈತನ ಗೆಳೆಯರು ಮಜಾ ಮಾಡುವ ಸಲುವಾಗಿ ಆತನ ಗುದದ್ವಾರದಿಂದ ಬಾಟಲಿಯನ್ನು ಆತನ ಹೊಟ್ಟೆ ಒಳಗೆ ಸೇರಿಸಿ ವಿಕೃತಿ ಮೆರೆದಿದ್ದಾರೆ.

ನಂತರ ಹೇಗೋ ಮನೆಗೆ ಬಂದ ನುರ್ಸಾದ್ ಮರುದಿನ ಅಸ್ವಸ್ಥನಾಗಿದ್ದಾನೆ. ತೀವ್ರ ಹೊಟ್ಟೆನೋವಿನಿಂದ ಬಳಲಿದ್ದಾನೆ. ಬಳಿಕ ಆಸ್ಪತ್ರೆ ಸೇರಿದ್ದಾನೆ. 5 ದಿನಗಳ ಹಿಂದೆ ಆಸ್ಪತ್ರೆ ದಾಖಲಾದ ನುರ್ಸಾದ್ ಪರಿಶೀಲಿಸಿದ ವೈದ್ಯರಿಗೆ ಹೊಟ್ಟೆಯ ಕೆಳಭಾಗದಲ್ಲಿ ವಸ್ತು ಸೇರಿಕೊಂಡಿರುವುದು ಪತ್ತೆಯಾಗಿದೆ. ಬಳಿಕ ನುರಿತ ವೈದ್ಯರ ತಂಡ ಸತತ ಎರಡೂವರೆ ಗಂಟೆಗಳ ಕಾಲ ಶಸ್ತ್ರಚಿಕ್ತಿತ್ಸೆ ಮಾಡಿ, ಹೊಟ್ಟೆಯ ಕೆಳಭಾಗದಲ್ಲಿ ಸೇರಿಕೊಂಡಿದ್ದ ವೋಡ್ಕಾ ಮದ್ಯದ ಬಾಟಲಿಯನ್ನು ತೆಗೆದಿದ್ದಾರೆ.

ಇನ್ನು ಈ ಬಾಟ್ಲಿ ಹೇಗೆ ನುರ್ಸಾದ್ ಹೊಟ್ಟೆ ಸೇರಿತೆಂದು ವೈದ್ಯರು ವಿವರಿಸಿದ್ದಾರೆ. ನುರ್ಸಾದ್ ಮನ್ಸೂರ್ ನ ಬಾಯಿಯ ಮೂಲಕ ಇದು ಹೊಟ್ಟೆ ಸೇರಿಲ್ಲ. ಬದಲಿಗೆ ಈತನಿಗೆ ಕಂಠಪೂರ್ತಿ ಕುಡಿಸಿದ ಗೆಳೆಯರು, ವೋಡ್ಕಾ ಬಾಟಲಿಯನ್ನು ಗುದದ್ವಾರದ ಮೂಲಕ ತುರುಕಿದ್ದಾರೆ. ಕುಡಿದ ಅಮಲಿನಲ್ಲಿ ನುರ್ಸಾದ್‌ಗೆ ಯಾವುದು ಗೊತ್ತೆ ಆಗಿಲ್ಲ. ಆದರೆ ಮದ್ಯದ ಬಾಟಲಿ ತುರುಕಿದ ಘಟನೆಯಿಂದ ಯಾವುದೇ ಗಾಯಗಳಾಗಿಲ್ಲ. ಹೀಗಾಗಿ ನುರ್ಸಾದ್ ಬದುಕುಳಿದಿದ್ದಾನೆ. ನುರ್ಸಾದ್ ಆಸ್ಪತ್ರೆ ದಾಖಲಾಗುವುದು ವಿಳಂಬವಾದರೂ ಜೀವಕ್ಕೆ ಅಪಾಯವಿತ್ತು. ಆದರೀಗ ಆಪರೇಷನ್ ಮಾಡಿ ಬಾಟ್ಲಿ ತೆಗೆದಿದ್ದು, ಆತ ಆರೋಗ್ಯವಾಗಿದ್ದಾನೆ ಎಂದು ಹೇಳಿದ್ದಾರೆ.

ವೈದ್ಯರು ಈ ಹೇಳಿಕೆ ನೀಡುತ್ತಿದ್ದಂತೆ ನೇಪಾಳ ಪೊಲೀಸರು ಈ ಕುರಿತು ಪ್ರಕರಣವನ್ನು ದಾಖಸಿಕೊಂಡಿದ್ದಾರೆ. ನುರ್ಸಾದ್ ಗೆಳೆಯ ಶೇಕ್ ಸಮೀಮ್ ಸೇರಿದಂತೆ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಮತ್ತಷ್ಟು ಗೆಳೆಯರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ನುರ್ಸಾದ್ ದೊಡ್ಡ ಗೆಳೆಯರ ಬಳಗ ಹೊಂದಿದ್ದಾನೆ. ಹೀಗಾಗಿ ಪ್ರತಿಯೊಬ್ಬರನ್ನು ವಿಚಾರಣೆಗೆ ಒಳಡಿಸಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.