Nail Cutting Astro Tips : ಈ ಮೂರು ದಿನ ಅಪ್ಪಿ ತಪ್ಪಿಯೂ ಉಗುರು ಕತ್ತರಿಸಬೇಡಿ!
Nail Cutting : ನಮ್ಮ ಹಿರಿಯರು ಕಾರಣ ಇಲ್ಲದೆ ಯಾವುದೇ ವಿಚಾರವನ್ನು ಹೇಳುವುದಿಲ್ಲ. ಪ್ರತಿಯೊಂದರ ಹಿಂದೆ ಒಂದೊಂದು ಕಾರಣವಿರುತ್ತದೆ. ಉದಾಹರಣೆಗೆ (example ) ತಲೆ ಬಾಚುವುದು, ಉಗುರು ಕತ್ತರಿಸುವುದು (Nail Cutting) ಮುಂತಾದವು. ಮುಖ್ಯವಾಗಿ ಶಾಸ್ತ್ರ ಪ್ರಕಾರ, ಕೆಲವೊಂದು ವಾರದಲ್ಲಿ ನಿಮ್ಮ ಉಗುರು ಕತ್ತರಿಸಬಾರದು ಎನ್ನಲಾಗುತ್ತದೆ.
ಜ್ಯೋತಿಷಿಗಳ ಪ್ರಕಾರ, ವಾರದ ಎಲ್ಲಾ ದಿನಗಳು ವಿವಿಧ ಗ್ರಹಗಳೊಂದಿಗೆ ನೇರ ಸಂಬಂಧವನ್ನು ಹೊಂದಿವೆ. ಮಂಗಳವಾರ (Tuesday) , ಗುರುವಾರ (Thursday)ಮತ್ತು ಶನಿವಾರದಂದು (Saturday) ನಾವು ಉಗುರುಗಳನ್ನು ಕತ್ತರಿಸಿದರೆ, ಅದು ಗ್ರಹ ದೋಷಗಳನ್ನು ಉಂಟುಮಾಡುತ್ತದೆ. ಈ ಕಾರಣಕ್ಕಾಗಿಯೇ ಈ 3 ದಿನಗಳಲ್ಲಿ ಉಗುರುಗಳನ್ನು ಕತ್ತರಿಸಬೇಡಿ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರ ಮಂಗಳ ಗ್ರಹಕ್ಕೆ ಸಂಬಂಧಿಸಿದ್ದು ಎಂದು ಪರಿಗಣಿಸಲಾಗಿದೆ. ಮಂಗಳವು ರಕ್ತಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ ಮಂಗಳವಾರ ಉಗುರುಗಳನ್ನು ಕತ್ತರಿಸುವುದರಿಂದ ರಕ್ತ ಸಂಬಂಧಿತ ಅಸ್ವಸ್ಥತೆಗಳು ಉಂಟಾಗಬಹುದು. ಆದ್ದರಿಂದ, ಈ ದಿನ ಉಗುರುಗಳು, ಕೂದಲು ಮತ್ತು ಗಡ್ಡವನ್ನು ಕತ್ತರಿಸುವುದನ್ನು ತಪ್ಪಿಸಬೇಕು.
ಗುರುವಾರವನ್ನು ದೇವ ಗುರು ಬೃಹಸ್ಪತಿಯ ಆರಾಧನೆಯ ದಿನ ಎಂದು ಕರೆಯಲಾಗುತ್ತದೆ. ಬುದ್ಧಿ, ಜ್ಞಾನ, ವಿದ್ಯೆ ಮತ್ತು ಶುಭ ಕಾರ್ಯಗಳಿಗೆ ಅವನು ಕಾರಣ. ಗುರುವಾರದಂದು ಅಪ್ಪಿತಪ್ಪಿಯೂ ಉಗುರುಗಳನ್ನು ಕತ್ತರಿಸಬಾರದು ಎಂಬುದು ನಂಬಿಕೆ. ಇದರೊಂದಿಗೆ ಕೂದಲು ಕತ್ತರಿಸುವುದು ಮತ್ತು ಶೇವಿಂಗ್ ಮಾಡುವುದನ್ನು ತಪ್ಪಿಸಬೇಕು. ಹೀಗೆ ಮಾಡುವುದರಿಂದ ಜನರು ಹಣದ ನಷ್ಟವನ್ನು ಎದುರಿಸಬೇಕಾಗಬಹುದು.
ಜ್ಯೋತಿಷ್ಯದಲ್ಲಿ, ಶನಿಯ ಸಂಬಂಧವನ್ನು ಮನುಷ್ಯನ ಮೂಳೆಗಳು, ಸ್ನಾಯುಗಳು ಮತ್ತು ಕಫಗಳೊಂದಿಗೆ ಹೇಳಲಾಗುತ್ತದೆ. ಶನಿವಾರದಂದು ಉಗುರುಗಳು, ಕೂದಲು ಮತ್ತು ಗಡ್ಡವನ್ನು ಕತ್ತರಿಸುವವರು ಶನಿ ದೋಷವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.
ಇದರ ಹೊರತು ಸಂಜೆಯ ನಂತರ ಯಾವುದೇ ಕಾರಣಕ್ಕೂ ಉಗುರು ಕತ್ತರಿಸಬಾರದು ಎಂದು ತಿಳಿಸಲಾಗಿದೆ . ರಾತ್ರಿ ಉಗುರು ಕತ್ತರಿಸುವುದರಿಂದ ಲಕ್ಷ್ಮಿಗೆ ನಿಮ್ಮ ಮೇಲೆ ಕೋಪ ಬರುತ್ತದೆ. ಇದರಿಂದ ಆರ್ಥಿಕ ಸಮಸ್ಯೆ ಹೆಚ್ಚಾಗುತ್ತದೆ. ಬಡತನ ಸಹ ನಿಮ್ಮನ್ನ ಕಾಡಬಹುದು. ಅಲ್ಲದೇ ಸಂಜೆ ಸೂರ್ಯ ಮುಳುಗುವ ಸಮಯದಲ್ಲಿ ಲಕ್ಷ್ಮಿ ಮನೆ ಪ್ರವೇಶಿಸುತ್ತಾಳೆ.
ಇನ್ನು ಶಾಸ್ತ್ರದ ಪ್ರಕಾರ, ಉಗುರು ಕಚ್ಚುವ ಅಭ್ಯಾಸವನ್ನು ದಾರಿದ್ರ್ಯದ ಪ್ರತಿರೂಪ ಎನ್ನಲಾಗುತ್ತೆ. ಉಗುರು ಕಚ್ಚುವವರ ಬಳಿ ಲಕ್ಷ್ಮೀ ನೆಲೆಸುವುದಿಲ್ಲ ಹಾಗೂ ಅವರ ಬಳಿ ಹಣ ನಿಲ್ಲುವುದಿಲ್ಲ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಉಗುರುಗಳನ್ನು ಕತ್ತರಿಸುವುದು ಸೂಕ್ತ.