Mango Tree: 300 ಬಗೆಯ ಮಾವಿನ ಹಣ್ಣನ್ನು ಬಿಡುವ ಭಾರತದ ಒಂದೇ ಒಂದು ವಿಶೇಷ ಮರ ಎಲ್ಲಿದೆ ಗೊತ್ತಾ?

Mango Tree: ಎಲ್ಲ ಸೀಸನ್ ನಲ್ಲಿಯೂ ಜನರು ಮೆಚ್ಚಿಕೊಂಡು ಬಾಯಿ ಚಪ್ಪರಿಸಿಕೊಂಡು ಸವಿಯುವ ಹಣ್ಣು ಎಂದರೆ ಅದು ಮಾವಿನ ಹಣ್ಣು. ಮಾವಿನ ಹಣ್ಣು ಎಂದರೆ ಸಾಕು!! ಎಲ್ಲರ ಬಾಯಲ್ಲೂ ನೀರೂರುವುದು ಸಹಜ. ಮಾವಿನ ಹಣ್ಣು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ!! ಮಾವಿನ ಹಣ್ಣಿನಲ್ಲಿಯು ಕೂಡ ವಿಭಿನ್ನ ತಳಿಗಳಿವೆ. ಆದರೆ ಅವೆಲ್ಲ ಒಂದೇ ಕಡೆ ಸಿಕ್ಕರೆ ಹೇಗಿರಬಹುದು?? ನಿಧಿ ಸಿಕ್ಕಿದಷ್ಟು ಖುಷಿ ಆಗುತ್ತೆ ಅಲ್ವಾ!!

 

ಎಷ್ಟೋ ಬಾರಿ ನಮ್ಮ ಕಣ್ಣ ಮುಂದೆ ನಡೆಯುವ ಅದೆಷ್ಟೋ ಅದ್ಭುತ ವಿಷಯಗಳ ಬಗ್ಗೆ ನಮಗೆ ಅರಿವೇ ಇರುವುದಿಲ್ಲ. ಹೌದು!! ಇಲ್ಲೊಂದು ಮಾವಿನ ಹಣ್ಣಿನ ಮರವಿದೆ. ಇದರ ವಿಶೇಷತೆಯ ಬಗ್ಗೆ ತಿಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಅಂತಹದ್ದೇನು ವಿಶೇಷ ಅಂತೀರಾ?

 

ಒಂದೇ ಮರದಲ್ಲಿ ವಿಭಿನ್ನ ತಳಿಯ ಮಾವಿನ ಹಣ್ಣಿನ ಮರ(Mango Tree) ಭಾರತದಲ್ಲೇ(India) ಇದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಜಗತ್ತಿನಲ್ಲಿ ಈ ರೀತಿಯ ವೈಶಿಷ್ಟ್ಯದ ಎಷ್ಟೋ ಮರಗಳಿದ್ದರು ಕೂಡ ಭಾರತದಲ್ಲಿ ಈ ವಿಶೇಷವಾದ ಮರ ಇರುವುದು ಒಂದೇ ಎಂಬುದು ಮತ್ತೊಂದು ಅಚ್ಚರಿ. ಅಷ್ಟಕ್ಕೂ ಈ ಒಂದೇ ಮರದಲ್ಲಿ ಬರೋಬ್ಬರಿ 300ಕ್ಕೂ(300 variety) ಹೆಚ್ಚು ಬಗೆಯ ಮಾವಿನ ಹಣ್ಣನ್ನು ಬೆಳೆಯಲಾಗುತ್ತದೆ.

ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡುತ್ತದೆ. ಹಾಗಿದ್ರೆ ಒಂದೇ ಮರದಲ್ಲಿ ಇಷ್ಟು ವಿಭಿನ್ನ ತಳಿಯ ಹಣ್ಣುಗಳು ಒಂದೇ ರುಚಿ(Taste) ಹೊಂದಿರುತ್ತವೆಯೇ ಎಂಬ ಅನುಮಾನ ಕಾಡದಿರದು.ಈ ಒಂದು ಮಾವಿನ ಮರದಲ್ಲಿ ವಿಭಿನ್ನ ಮಾವುಗಳನ್ನು ಬೆಳೆಯಲಾಗಲಿದ್ದು, ಎಲ್ಲಾ ಮಾವಿನಹಣ್ಣುಗಳ ಬಣ್ಣ (Color), ಆಕಾರ(Shape), ರುಚಿಯಲ್ಲಿ ಒಂದಕ್ಕೊಂದು ಭಿನ್ನವಾಗಿರುತ್ತವಂತೆ.

ದೇಶಾದ್ಯಂತ ಮಾವಿನ ಮನುಷ್ಯ ಎಂಬ ಖ್ಯಾತಿ ಪಡೆದ 83 ವರ್ಷದ ಹಾಜಿ ಕಲೀಂ ಉಲ್ಲಾಕ್ ಖಾನ್ ಅವರು ಈ ವಿಶೇಷವಾದ ಮಾವಿನ ಮರದ ಅನ್ವೇಷಣೆಯಲ್ಲಿ(Invention) ತೊಡಗಿದ್ದು, ಓದು ಬರಹದ ಮೇಲೆ ಅಸಕ್ತಿ ಇರದ ಹಿನ್ನೆಲೆ ಬಾಲ್ಯದಲ್ಲೇ ನರ್ಸರಿಯಲ್ಲಿ ತೊಡಗಿಸಿಕೊಂಡರು. ತಮ್ಮ 17 ನೇ ವಯಸ್ಸಿನಲ್ಲಿ, ಅವರು ಮೊದಲು ಕಸಿ ಮಾಡುವ ಮೂಲಕ ಮರವನ್ನು ಬೆಳೆಸಿದರಂತೆ. ಈ ವೇಳೆ, ಮರದಲ್ಲಿ 7 ರೀತಿಯ ಮಾವಿನ ಹಣ್ಣುಗಳನ್ನು ಉತ್ಪಾದಿಸಿದ್ದರು. ಈ ಬಳಿಕ , ಭಾರೀ ಮಳೆಯ ಪರಿಣಾಮ ಮರಕ್ಕೆ ಹಾನಿಯಾದರಿಂದ ಮತ್ತೆ ಅದೇ ರೀತಿಯ ಮತ್ತೊಂದು ಮರವನ್ನು 1987ರಲ್ಲಿ ಹಾಜಿ ಕಲೀಂ ಉಲ್ಲಾಕ್ ಖಾನ್ ಬೆಳೆಸಿದರು. ಈ ಮರದಲ್ಲಿ ಪ್ರಥಮ ಬಾರಿಗೆ 13 ಬಗೆಯ ಮಾವು ಒಟ್ಟಿಗೆ ಆಗಿತ್ತಂತೆ.ಈಗ ಹಲವಾರು ವರ್ಷಗಳಿಂದ 300 ಕ್ಕೂ ಹೆಚ್ಚು ವಿಧದ ಮಾವಿನಹಣ್ಣುಗಳನ್ನು(Mangoes) ಅದೇ ಮರದಲ್ಲಿ ಬೆಳೆಯಲಾಗುತ್ತಿದೆ.

ಈ ವಿಶಿಷ್ಟ ಮರವು ಎಲ್ಲಿದೆ ಗೊತ್ತಾ? ಇದು ನಾಲ್ಕು ಎಕರೆ ಪ್ರದೇಶದಲ್ಲಿ ಮಾವಿನ ತೋಟದಲ್ಲಿ ಉತ್ತರ ಪ್ರದೇಶದ (Uttar Pradesh) ಲಕ್ನೋದಿಂದ( Lucknow)ಸ್ವಲ್ಪ ದೂರದಲ್ಲಿರುವ ಮಲಿಹಾಬಾದ್ ಚೌಕದಲ್ಲಿದೆ. ಈ ಮರವು ತಿಂಗಳ ಅಂತ್ಯದ ವೇಳೆಗೆ ಅರಳಲಿದ್ದು, ಜುಲೈ(July) ವೇಳೆಗೆ ಈ ಮರದಲ್ಲಿ ಮಾವು (Mango)ಉತ್ಪತ್ತಿಯಾಗಲಿದೆ. ಈ ಮರಗಳ ಮಾವು ಮಾರಾಟ (Not For Sale)ಮಾಡುವುದಿಲ್ಲ ಬದಲಿಗೆ ಈ ಮಾವುಗಳನ್ನು ಜನರಿಗೆ ಹಂಚಲಾಗುತ್ತದೆ.

ತಮ್ಮ ವಿಶೇಷ ಸಾಧನೆಗೆ ಗೌರವವಾಗಿ 2008ರಲ್ಲಿ ಹಾಜಿ ಕಲೀಂ ಉಲ್ಲಾಕ್ ಖಾನ್ ಪದ್ಮಶ್ರೀ ಪ್ರಶಸ್ತಿಯನ್ನು ಕೂಡ ಪಡೆದಿದ್ದರು. ಈ ವರ್ಷ 20-25 ಹೊಸ ರೀತಿಯ ಮಾವಿನ ಹಣ್ಣುಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿದ್ದು, ಈ ಮಾವಿನ ಮರವನ್ನು ಅಧ್ಯಯನ ಮಾಡುವ ಯೋಜನೆ ಹಾಕಿರುವ ಹಾಜಿಯವರು, ಈ ಮರದ ಸಂಶೋಧನೆ ನಡೆಸಿದರೆ ಏಡ್ಸ್, ಕ್ಯಾನ್ಸರ್ (Cancer)ನಂತಹ ಕಾಯಿಲೆಗಳಿಗೂ ಈ ಮರದ ಮಾವಿನ ಹಣ್ಣಿನಿಂದ ಚಿಕಿತ್ಸೆ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.