Half Day Schools: ಈ ರಾಜ್ಯದ ಮಕ್ಕಳಿಗೆ ಗುಡ್ ನ್ಯೂಸ್!! ಕೇವಲ ಒಂದು ಹೊತ್ತಿನ ಶಾಲೆ ನಡೆಸಲು ತೀರ್ಮಾನ!!!
Half Day Schools : ಎಲ್ಲೆಲ್ಲೂ ಬಿಸಿಲೋ ಬಿಸಿಲು! ಬಿಸಿಲಿನ ಝಳವನ್ನೂ ತಡೆಯೋಕೆ ಸಾಧ್ಯವೇ ಇಲ್ಲ ಎಂಬಷ್ಟು ಮೈಸುಡುವ ಬಿಸಿಲಿನ ಜೊತೆಗೆ ಸೆಕೆಯ ಬೇಗೆಗೆ ಜನರು ತತ್ತರಿಸಿ ಹೋಗಿದ್ದಾರೆ. ಅದರಲ್ಲಿಯೂ ಕರಾವಳಿಯ ಜನತೆಯ ಪಾಡು ಹೇಳುವುದೇ ಬೇಡ. ಆದರೆ, ಒಂದೆಡೆ ಕರಾವಳಿಯ ಜನತೆ ಬಿಸಿಲಿನ ಧಗೆಗೆ ಹೈರಾಣಾಗಿದ್ದರೆ ಬೆಂಗಳೂರು ಮತ್ತೆ ಕೆಲ ಕಡೆಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಬೆಳಗ್ಗೆ ಮತ್ತು ರಾತ್ರಿ ತಂಪು ವಾತಾವರಣದ ಮೋಡ ಕವಿದ ವಾತಾವರಣ (Weather)ಕಂಡುಬರುತ್ತಿದೆ. ಈ ನಡುವೆ ಈ ಹವಾಮಾನದ ಪರಿಣಾಮ ಅನಾರೋಗ್ಯ ಸಮಸ್ಯೆಗಳು ಹೆಚ್ಚು ಕಂಡುಬರುತ್ತಿವೆ. ಈ ಹಿನ್ನೆಲೆ ಈ ರಾಜ್ಯದ ಮಕ್ಕಳ ಹಿತ ದೃಷ್ಟಿಯನ್ನು ಗಮನದಲ್ಲಿರಿಸಿ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.
ಒಂದೆಡೆ ಮೈ ಸುಡುವ ಬಿಸಿಲಿನ ಶಾಖ ಮತ್ತೊಂದೆಡೆ ಎಚ್3ಎನ್2 ವೈರಸ್(H3N2 Virus) ಹರಡುವಿಕೆ ಹೆಚ್ಚಾಗುತ್ತಿದ್ದು, ಎರಡು ಮಂದಿ ಬಲಿಯಾಗಿದ್ದು, ಹೀಗಾಗಿ ಸಹಜವಾಗಿ ಜನರಲ್ಲಿ ಆತಂಕ ಎದುರಾಗಿದೆ. ಈ ನಡುವೆ,ಶಿಕ್ಷಣ ಇಲಾಖೆ ವೈರಸ್ ಲಕ್ಷಣವಿರುವ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದಂತೆ ಪೋಷಕರಿಗೆ ಸೂಚಿಸಿದೆ. ಹೆಚ್ಚುತ್ತಿರುವ ಬಿಸಿಲಿನ( Hot Weather) ಧಗೆಯ ಜೊತೆಗೆ ಹೆಚ್ಚಿನ ಕಡೆಗಳಲ್ಲಿ ಆರೋಗ್ಯ ಸಮಸ್ಯೆ( Health Issues)ಕೂಡ ಕಂಡು ಬರುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳನ್ನು (Students)ಕಾಪಾಡುವ ಸಲುವಾಗಿ ದಿನದ ಒಂದು ಅವಧಿ(Half Day Schools) ಮಾತ್ರ ಶಾಲೆ ನಡೆಸುವ ಕುರಿತು ಕ್ರಮ ಕೈಗೊಳ್ಳಲು ಈ ರಾಜ್ಯ ಮುಂದಾಗಿದೆ. ಹಾಗಿದ್ರೆ, ಈ ಕ್ರಮ ಕೈಗೊಳ್ಳಲು ಮುಂದಾಗಿರುವ ರಾಜ್ಯ ಯಾವುದು ಅಂತೀರಾ?
ಇತ್ತೀಚೆಗೆ ತೆಲಂಗಾಣದಲ್ಲಿ ದಿನದ ಒಂದು ಹೊತ್ತು ಮಾತ್ರ(Half Day Schools) ಶಾಲೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದ್ದು, ಮಾರ್ಚ್ 15 ರಿಂದ ಒಂದೇ ಹೊತ್ತು ಶಾಲೆಗಳನ್ನು ನಡೆಸಲು ತೆಲಂಗಾಣ (Telangana)ಸರ್ಕಾರ ಮುಂದಾದ ಬೆನ್ನಲ್ಲೇ ಆಂದ್ರಪ್ರದೇಶ (Andra Pradesh)ಕೂಡ ಬಿರು ಬಿಸಿಲಿನ ಬೇಗೆಗೆ ಮಕ್ಕಳ ಆರೋಗ್ಯ ಸಮಸ್ಯೆ ಉಂಟಾಗುವ ಭೀತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ(Precaution Measures) ತೆಲಂಗಾಣದಂತೆ ಈ ಹೊಸ ನಿಯಮವನ್ನೂ ಅನುಸರಿಸಲು ಅಣಿಯಾಗಿದೆ.ಬಿರು ಬಿಸಿಲಿಗೆ ಮಕ್ಕಳಿಗೆ ತೊಂದರೆಯಗಬಾರದು ಎಂಬ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಆದರೆ ಈ ಶಾಲೆಗಳನ್ನು ಯಾವಾಗ ತೆರೆಯಲಾಗುತ್ತದೆ ಎಂಬ ಬಗ್ಗೆ ಆಂಧ್ರಪ್ರದೇಶದ ಶಾಲೆಗಳಲ್ಲಿ ನಿಖರ ಮಾಹಿತಿ ನೀಡಲಾಗಿಲ್ಲ.
ಮಾರ್ಚ್ 15ರಿಂದ ತೆಲಂಗಾಣದಲ್ಲಿ ಶಾಲೆಗಳು(School) ಆರಂಭವಾಗಲಿದ್ದು, ಆಂದ್ರದಲ್ಲೂ ಇದೇ ದಿನ ಆರಂಭವಾಗಲಿದೆ ಎಂದು ಹಲವರು ಅಂದಾಜಿಸಿದ್ದಾರೆ. ಆದರೆ, ಇದಕ್ಕೆ ನಿಖರ ಉತ್ತರ ಲಭ್ಯವಾಗದೇ ಇದ್ದರೂ ಕೂಡ ಈ ವರ್ಷ ಕೂಡ ಕಳೆದ ವರ್ಷದಂತೆ ಏಪ್ರಿಲ್ 04ರಿಂದ ಒಂದು ದಿನದ ತರಗತಿ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : Horticulture Training: ರೈತರಿಗೆ, ರೈತರ ಮಕ್ಕಳಿಗೆ ತೋಟಗಾರಿಕಾ ತರಬೇತಿಯ ಕುರಿತ ಮುಖ್ಯ ಮಾಹಿತಿ ಪ್ರಕಟ