FASTag Balance Check : ಫಾಸ್ಟ್ ಟ್ಯಾಗ್ ನಲ್ಲಿ ಎಷ್ಟು ಹಣವಿದೆ ಎಂಬುವುದನ್ನು ಹೀಗೆ ಚೆಕ್ ಮಾಡಿ!

FASTag Balance Check: ಈಗಾಗಲೇ ಹೆದ್ದಾರಿಗಳಲ್ಲಿ ಸಾರ್ವಜನಿಕ ಮತ್ತು ವಾಣಿಜ್ಯ ವಾಹನಗಳ ಟೋಲ್ ಸಂಗ್ರಹಕ್ಕಾಗಿ ಫಾಸ್ಟ್‌ಟ್ಯಾಗ್‌ ಗಳನ್ನು ಕಡ್ಡಾಯ ಮಾಡಲಾಗಿದ್ದು, ಇನ್ನುಮುಂದೆ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಆರಂಭಿಸಿದ ಪ್ರಕ್ರಿಯೆ ಇದಾಗಿದ್ದು ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ (Highway Toll Plaza) ಎಲೆಕ್ಟ್ರಾನಿಕ್ ಸಂಗ್ರಹಣೆಯ ರೂಪದಲ್ಲಿ ಇದು ಕಾರ್ಯನಿರ್ವಹಿಸುತ್ತದೆ.

ಮುಖ್ಯವಾಗಿ ಫಾಸ್ಟ್​ಟ್ಯಾಗ್​ ಬಳಸಲು ನೀವು ಮೊದಲು ಅದನ್ನು ರೀಚಾರ್ಜ್ ಮಾಡಬೇಕು. ಕೆಲವೊಮ್ಮೆ ಅದರಲ್ಲಿ ಎಷ್ಟು ಹಣ ಉಳಿದಿದೆ ಎಂದು ಈ ಕೆಳಗಿನಂತೆ ಪರಿಶೀಲಿಸಬಹುದು:

ಬ್ಯಾಂಕ್ ನೀಡುವ ಫಾಸ್ಟ್​ಟ್ಯಾಗ್​ ಬ್ಯಾಲೆನ್ಸ್ ಪರಿಶೀಲಿಸಲು (FASTag Balance Check) ನೀವು ಆನ್‌ಲೈನ್‌ನಲ್ಲಿ ಮೀಸಲಾದ ಪೋರ್ಟಲ್‌ಗೆ ಭೇಟಿ ನೀಡಬಹುದು.

ನೀವು ಬ್ಯಾಂಕ್ ಖಾತೆಗೆ ಲಾಗಿನ್ ಆಗಬೇಕು
ಇಲ್ಲಿ ಬಾಕಿ ಪರಿಶೀಲಿಸಲು ಮುಖಪುಟದಿಂದ ಫಾಸ್ಟ್​ಟ್ಯಾಗ್​ ಆಯ್ಕೆಗೆ ಹೋದರೆ ಆಯ್ಕೆ ಸಿಗುತ್ತದೆ. ಅಲ್ಲದೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ ‘My FASTag’ ಅಪ್ಲಿಕೇಶನ್‌ ಡೌಲ್​ಲೋಡ್ ಮಾಡಿ ನೋಡಬಹುದು.

ಮೊದಲಿಗೆ My FASTag ಖಾತೆಯನ್ನು ಲಾಗ್ ಇನ್ ಮಾಡಿ. ನೀವು ಮೊದಲ ಬಾರಿಗೆ ಅಪ್ಲಿಕೇಶನ್ ಬಳಸುತ್ತಿದ್ದರೆ ನೀವು ನೋಂದಾಯಿಸಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಲಾಗಿನ್ ಯಶಸ್ವಿಯಾದ ನಂತರ, ಲಭ್ಯವಿರುವ ಬ್ಯಾಲೆನ್ಸ್ ಅನ್ನು ನೀವು ಕಾಣಬಹುದು.

ಇನ್ನು ಮಿಸ್ಡ್ ಕಾಲ್ ಮೂಲಕ ಫಾಸ್ಟ್​ಟ್ಯಾಗ್​ ಬ್ಯಾಲೆನ್ಸ್ ಪರಿಶೀಲಿಸಬಹುದು. ಎನ್‌ಎಚ್‌ಎಐ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಪರಿಶೀಲಿಸಲು ಸಂಖ್ಯೆಯನ್ನು ಒದಗಿಸುತ್ತದೆ, ಇದನ್ನು ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಪರಿಶೀಲಿಸಲು ಬಳಸಬಹುದು. ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ನಿಮ್ಮ NHAI ಪ್ರಿಪೇಯ್ಡ್ ವಾಲೆಟ್ ಅನ್ನು ನೀವು ಲಿಂಕ್ ಮಾಡಿದ್ದರೆ ನಂತರ ನೀವು NHAI ಮೂಲಕ ಬ್ಯಾಲೆನ್ಸ್ ಚೆಕ್ ಮಾಡಬಹುದು. ಇದಕ್ಕಾಗಿ, ಮೊದಲು ನೀವು +91 8884333331 ಗೆ ಮಿಸ್ಡ್ ಕಾಲ್ ನೀಡಬೇಕು. ಈ ಎಸ್​ಎಮ್​ಎಸ್​ನಲ್ಲಿ ನಿಮ್ಮ ಸಂಖ್ಯೆಗೆ ಬರುತ್ತದೆ ಮತ್ತು ನಿಮ್ಮ ಫಾಸ್ಟ್​ಟ್ಯಾಗ್​ ಬ್ಯಾಲೆನ್ಸ್ ಅನ್ನು ಆ ಎಸ್​ಎಮ್​ಎಸ್​ನಲ್ಲಿ ತೋರಿಸಲಾಗುತ್ತದೆ.

ಮುಖ್ಯವಾಗಿ ರೇಡಿಯೋ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್(ಆರ್ ಎಫ್‍ಐಡಿ) ಆಧಾರಿತ ಫಾಸ್ಟ್‌ಟ್ಯಾಗನ್ನು (FASTag) ನಿಮ್ಮ ವಾಹನದ ಮುಂಭಾಗದ ಗಾಜಿಗೆ ಅಂಟಿಸಲಾಗಿರುತ್ತದೆ. ಈ ಟ್ಯಾಗ್ ರೇಡಿಯೋ ಫ್ರೀಕ್ವೆನ್ಸಿ ಮೂಲಕ ಸ್ಕ್ಯಾನ್ ಆಗಲಿದ್ದು, ನಂತರ ಪ್ರಿಪೇಯ್ಡ್ ಅಥವಾ ಉಳಿತಾಯ ಖಾತೆಯಿಂದ ಹಣ ಕಡಿತವಾಗುತ್ತದೆ. ಈ ರೀತಿಯಾಗಿ ಫಾಸ್ಟ್​ಟ್ಯಾಗ್​ ಬ್ಯಾಲೆನ್ಸ್ ನಿರ್ವಹಣೆ ಮಾಡಬಹುದಾಗಿದೆ.‌

ಇದನ್ನೂ ಓದಿ : ಮಂಗಳೂರಿನ ಏರ್‌ಲೈನ್ಸ್ ನಲ್ಲಿ ಪದವಿ ಆದವರಿಗೂ ಇದೆ ಉದ್ಯೋಗವಕಾಶ

Leave A Reply

Your email address will not be published.