Cricketers: ಬದ್ಧವೈರಿಗಳಾದ ಕ್ರಿಕೆಟರ್ಸ್ ‘ಶೇಕ್ ಹ್ಯಾಂಡ್’ ಕೊಟ್ಟ ಬಳಿಕ ಈ ಕೆಲಸ ಮಾಡ್ತಾರೆ ; ಸಖತ್ ವೈರಲ್ ಆಯ್ತು ಪೋಸ್ಟ್!!

Cricketers: 2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ (LLC 2023) ಮೂರನೇ ಆವೃತ್ತಿಯು ಶುಕ್ರವಾರ, ಮಾರ್ಚ್ 10ರಂದು ಕತಾರ್‌ನ ದೋಹಾದಲ್ಲಿ (Doha) ಪ್ರಾರಂಭವಾಗಿದೆ. ಕಳೆದ ಬಾರಿಯಂತೆ ಇಂಡಿಯಾ ಮಹಾರಾಜಸ್ (india maharajas), ಏಷ್ಯಾ ಲಯನ್ಸ್ ಮತ್ತು ವರ್ಲ್ಡ್ ಜೈಂಟ್ಸ್ ಮೂರು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ. ಹಾಗೆಯೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೂ (Cricketers) ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಪಾಕಿಸ್ತಾನದ ಮಾಜಿ ನಾಯಕ ಹಾಗೂ ಆಲ್‌ರೌಂಡರ್ ಶಾಹಿದ್ ಅಫ್ರಿದಿ (Shahid Afridi) ಏಷ್ಯಾ ಜೈಂಟ್ಸ್ ತಂಡದ ನಾಯಕರಾಗಿದ್ದಾರೆ.

 

ಭಾರತದ ಮಾಜಿ ಬ್ಯಾಟರ್ ಗೌತಮ್ ಗಂಭೀರ್ (Gautam Gambhir) ಇಂಡಿಯಾ ಮಹಾರಾಜಸ್ ತಂಡದ ನಾಯಕರಾಗಿದ್ದಾರೆ. ಮೊದಲನೇ ಪಂದ್ಯವು ಗೌತಮ್ ಗಂಭೀರ್ ತಂಡ ಇಂಡಿಯಾ ಮಹಾರಾಜಸ್ ಮತ್ತು ಶಾಹಿದ್ ಅಫ್ರಿದಿ ತಂಡ ಏಷ್ಯಾ ಲಯನ್ಸ್ ನಡುವೆ ನಡೆದಿದೆ. ಗೌತಮ್ ಗಂಭೀರ್ ಅವರ 39 ಎಸೆತಗಳಲ್ಲಿ 54 ರನ್ ಗಳಿಸಿದೆ. ಆದರೆ ಭಾರತ ತಂಡವು 9 ರನ್‌ಗಳಿಂದ ಪಂದ್ಯವನ್ನು ಕಳೆದುಕೊಂಡಿದ್ದು, 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ಹೋಗಿದ್ದು, ಒಟ್ಟು 156 ರನ್ ಗಳಿಸಿದೆ.

ಆದರೆ ಕ್ರಿಕೆಟ್ ಅಭಿಮಾನಿಗಳಿಗೆ, ಸೋಷಿಯಲ್ಸ್ ಗಳ ಕಣ್ಣಿಗೆ ಬಿದ್ದಿರುವ ವಿಚಾರ, ಪಂದ್ಯಕ್ಕಿಂತ ಹೆಚ್ಚು ವೈರಲ್ ಆದ ವಿಚಾರವೊಂದಿದೆ. ಏನದು? ಗೌತಮ್ ಗಂಭೀರ್ ಮತ್ತು ಶಾಹಿದ್ ಅಫ್ರಿದಿ ಈ ಬದ್ಧ ವೈರಿಗಳು ಶೇಕ್ ಹ್ಯಾಂಡ್ ಮಾಡಿಕೊಂಡಿದ್ದು, (Gautam Gambhir and Shahid Afridi Shake Hand) ಈ ಸುದ್ದಿ ಸಖತ್ ವೈರಲ್ ಆಗಿದೆ.

ಸದ್ಯ ಇವರಿಬ್ಬರ ಶೇಕ್ ಹ್ಯಾಂಡ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಫೋಟೋದಲ್ಲಿ ಗಂಭೀರ್ ಗಂಭೀರವಾಗೇ ಇದ್ದು, ಸದ್ಯ ಸೋಷಿಯಲ್ಸ್ ಈ ಪೋಸ್ಟ್ಗೆ ಸಖತ್ ಟ್ರೋಲ್ ಮಾಡಿದ್ದಾರೆ. ಇವರಿಬ್ಬರು ಶೇಕ್ ಹ್ಯಾಂಡ್ ಮಾಡಿದ ಬಳಿಕ ಓಡಿಹೋಗಿ ಕೈ ತೊಳೆದುಕೊಳ್ಳಬಹುದು ಎಂದು ತಮಾಷೆ ರೀತಿಯ ಪೋಸ್ಟ್ ಹರಿಬಿಟ್ಟಿದ್ದಾರೆ. ಇದಕ್ಕೆ ನೆಟ್ಟಿಗರು ವಿವಿಧ ರೀತಿಯ ಫನ್ನಿ ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ : Rakshith Shetty : ಮಿಥುನ್‌ ರೈ ಹೇಳಿಕೆಗೆ ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ ಸ್ಟ್ರಾಂಗ್‌ ಆಗಿ ತಿರುಗೇಟು!!!

 

Leave A Reply

Your email address will not be published.