Himalayan Bikes : ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ಬೈಕ್‌ ಹಿಂಪಡೆಯುವಿಕೆ! ಇಲ್ಲಿದೆ ಪ್ರಮುಖ ಕಾರಣ!!!

Himalayan Bikes: ಮಾರುಕಟ್ಟೆಗೆ ಹಲವು ನೂತನ ಬೈಕ್ ಗಳು ಎಂಟ್ರಿ ಕೊಡುತ್ತಿವೆ. ಆದರೆ ರಾಯಲ್ ಎನ್‌ಫೀಲ್ಡ್ (royal enfield) ಕಂಪನಿಯು ತನ್ನ ಹಿಮಾಲಯನ್ ಬೈಕ್‌ ಗಳನ್ನು (Himalayan Bikes) ಹಿಂಪಡೆಯುತ್ತಿದೆ. ಸದ್ಯ ಅಮೆರಿಕಾದಲ್ಲಿ ಈ ಬೈಕ್ ಮಾರಾಟವಾಗುತ್ತಿದೆ. ಆದರೆ ಕಂಪನಿ ರೀಕಾಲ್ ಘೋಷಿಸಿದೆ ಯಾಕೆ? ಕಾರಣ‌ ಏನು? ಎಂಬುದರ ಮಾಹಿತಿ ಇಲ್ಲಿದೆ.

 

ಮಾರ್ಚ್ 1, 2017 ಮತ್ತು ಫೆಬ್ರವರಿ 28, 2021 ರ ನಡುವೆ ತಯಾರಿಸಲಾದ ಹಿಮಾಲಯನ್ ಬೈಕ್ ‌ಗಳನ್ನು ಮಾತ್ರ ಹಿಂಪಡೆಯಲಾಗುತ್ತದೆ ಎಂದು ಕಂಪನಿ ತಿಳಿಸಿದೆ. ಈ ಅವಧಿಯಲ್ಲಿ ಸುಮಾರು 4,891 ಬೈಕ್‌ಗಳು ಯುಎಸ್‌ನಲ್ಲಿ ಮಾರಾಟ ಆಗಿದೆ. ಈ 4,891 ಹಿಮಾಲಯನ್ ಬೈಕ್‌ಗಳಿಗೆ ಕಂಪನಿ ರೀಕಾಲ್ ಘೋಷಿಸಿದೆ.

ಕಾರಣ ಏನಂದ್ರೆ, ಅಮೆರಿಕ (America) ಮಾರುಕಟ್ಟೆಯಲ್ಲಿ ಹಿಮಾಲಯನ್ ಬೈಕ್ ಬಳಸುವವರು ತುಂಬಾನೇ ಅಪಾಯಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಬೈಕ್ ನ ಬ್ರೇಕ್ ಕ್ಯಾಲಿಪರ್ ಗಳಲ್ಲಿ ಸಮಸ್ಯೆ ಇರುವುದು ಕಂಡುಬಂದಿದ್ದು, ಬ್ರೇಕ್ ಸಿಗದೇ ಇರುವುದು. ಬ್ರೇಕ್ ಹಾಕಿದಾಗ ಹೆಚ್ಚು ಶಬ್ದ ಬರುವುದು, ಸುಟ್ಟ ವಾಸನೆ ಬರುವುದು ಹೀಗೆ ನಾನಾ ಸಮಸ್ಯೆಗಳು ಈ ಬೈಕ್ ನಲ್ಲಿ ಎದುರಾಗಿದೆ. ಈ ಕಾರಣದಿಂದಾಗಿ ಬೈಕ್‌ನಲ್ಲಿನ ಅಪಾಯಕಾರಿ ದೋಷಗಳನ್ನು ಸರಿಪಡಿಸುವ ಸಲುವಾಗಿ ಹಿಮಾಲಯನ್ ಬೈಕ್‌ಗಳಿಗೆ ರೀಕಾಲ್ ಘೋಷಿಸಿದೆ.

ಬೈಕ್ ಗಳನ್ನು ಹಿಂಪಡೆಯುವುದು ಕೇವಲ US ಗೆ ಮಾತ್ರ ಅನ್ವಯಿಸುತ್ತದೆ. ಕರ್ನಾಟಕ ಅಥವಾ ಭಾರತದ ಇತರ ರಾಜ್ಯಗಳಿಗೆ ಇದು ಅನ್ವಯಿಸುವುದಿಲ್ಲ. ಆ ಅವಧಿಯಲ್ಲಿ ಬೇರೆ ದೇಶಗಳಲ್ಲಿ ಮಾರಾಟವಾದ ಬೈಕ್‌ಗಳಿಗೆ ಯಾವುದೇ ಅಪಾಯವಿಲ್ಲ ಎಂದು ಕಂಪನಿ ಹೇಳಿದೆ. ಈ ಹಿಂದೆಯೂ ಬ್ರಿಟನ್ (britan), ದಕ್ಷಿಣ ಕೊರಿಯಾ ಮತ್ತು ಯುರೋಪ್‌ನಂತಹ ದೇಶಗಳಲ್ಲಿ ಬೈಕ್ ನಲ್ಲಿ ಇದೇ ರೀತಿಯ ಕ್ಯಾಲಿಪರ್ ತುಕ್ಕು ಸಮಸ್ಯೆ ಉಂಟಾಗಿದ್ದು, ಈ ವೇಳೆ ರಾಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನಗಳನ್ನು ಹಿಂಪಡೆಯಲಾಗಿತ್ತು.

ಇದೀಗ ದೇಶೀಯ ಮಾರುಕಟ್ಟೆಯಲ್ಲಿ ಈ ಹಿಮಾಲಯನ್ ಬೈಕ್ ನ ಎಕ್ಸ್‌ ಶೋರೂಂ ಬೆಲೆ ರೂ. 1.83 ಲಕ್ಷದಿಂದ ರೂ. 2.24 ಲಕ್ಷದವರೆಗೆ ಇದೆ. ಇದರ ಎಂಜಿನ್ ಗರಿಷ್ಠ 24.3 bhp ಮತ್ತು 32 Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. ಶೀಘ್ರದಲ್ಲೇ ಇದರ ನವೀಕೃತ ಮಾದರಿಯನ್ನು ಕಂಪನಿ ಬಿಡುಗಡೆ ಮಾಡಲಿದೆ.

ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಸುಧಾರಿತ ಲಿಕ್ವಿಡ್-ಕೂಲ್ಡ್, 450 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್, ಎಂಜಿನ್ ಸುಮಾರು 45bhp ಗರಿಷ್ಠ ಪವರ್ ಮತ್ತು 50Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸಲಿದೆ. ಮುಂಭಾಗದಲ್ಲಿ ದೊಡ್ಡ 21-ಇಂಚಿನ ವೀಲ್‌ಗಳನ್ನು ಮತ್ತು ಹಿಂಭಾಗದಲ್ಲಿ ಪ್ರಮಾಣಿತ 17-ಇಂಚಿನ ವೀಲ್‌ ಇರಲಿದ್ದು, ಮುಂಬರುವ ಹಿಮಾಲಯನ್ 450 ಗೆ ಸುಮಾರು 3 ಲಕ್ಷ ರೂ, ಎಕ್ಸ್ ಶೋರೂಂ ಬೆಲೆ ಇರಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಬಜಾಜ್‌ನ ಅತ್ಯಂತ ಜನಪ್ರಿಯ ಪಲ್ಸರ್‌ ಶ್ರೇಣಿಯ NS 160, NS 200 ಬೈಕ್‌ ಶೀಘ್ರ ಬದಲಾವಣೆ!

Leave A Reply

Your email address will not be published.