Toyota Qalis : ಗ್ರಾಹಕರ ಕಣ್ಮನ ಸೆಳೆಯೋದಕ್ಕೆ, ಮಾಡಿಫೈ ಮಾಡಿಕೊಂಡು, ಆಕರ್ಷಕ ಲುಕ್‌ನೊಂದಿಗೆ ಬಂದಿದೆ ಟೊಯೊಟಾ ಕ್ವಾಲಿಸ್‌!!!

Toyota Qalis: ಟೊಯೊಟಾ ಕ್ವಾಲಿಸ್‌ಗಳು ಒಂದು ಕಾಲದಲ್ಲಿ ಜಬರ್ದಸ್ ಆಗಿ ರಸ್ತೆಯಲ್ಲಿ ಓಡಾಡುತ್ತಿದ್ದವು. ಅಲ್ಲದೆ ಟೊಯೊಟಾ ಕ್ವಾಲಿಸ್ ತನ್ನ ವಿಭಾಗದಲ್ಲಿ ಮಹೀಂದ್ರಾ ಬೊಲೆರೊ ಮತ್ತು ಟಾಟಾ ಸುಮೊಗಳೊಂದಿಗೆ ಸ್ಪರ್ಧಿಸುತ್ತಿತ್ತು. ಈ ಕಾರು ವಿಶಾಲವಾದ ಕ್ಯಾಬಿನ್, ಪ್ರೀಮಿಯಂ ನೋಟ ಮತ್ತು ಅತ್ಯಂತ ವಿಶ್ವಾಸಾರ್ಹ ಎಂಜಿನ್ ಹೊಂದಿರುವುದು ಆಗಿನ ಕಾಲಕ್ಕೆ ಹಲವರ ಮನಗೆದ್ದಿತ್ತು. ಆದರೆ ಇತ್ತೀಚೆಗೆ ಟೊಯೋಟಾ ಕ್ವಾಲಿಸ್‌ಗಳು ( Toyota Qalis) ವಾಹನ ಸ್ಥಗಿತಗೊಂಡರು ಮಾಲೀಕರು ನವೀಕರಣಗೊಳಿಸಿ ಓಡಿಸುತ್ತಿದ್ದಾರೆ. ಇಂದಿಗೂ ಸಹ, ಉತ್ತಮವಾಗಿ ನಿರ್ವಹಿಸಲಾದ ಟೊಯೋಟಾ ಕ್ವಾಲಿಸ್‌ಗಳನ್ನು ಅಲ್ಲಲ್ಲಿ ನೋಡಬಹುದು. ಆದರೆ ಇತ್ತೀಚೆಗೆ ಇಂತಹದೇ ಕ್ವಾಲಿಸ್ ಆಕರ್ಷಕ ಲುಕ್‌ನಲ್ಲಿ (Attractive Look )ನವೀಕರಣಗೊಳಿಸಿರುವುದು ಇಲ್ಲಿ ನೋಡೋಣ.

 

ಮುಖ್ಯವಾಗಿ ಟೊಯೋಟಾ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ನೀಡಿದ ಮೊದಲ ಉತ್ಪನ್ನವೆಂದರೆ ಕ್ವಾಲಿಸ್ MPV. ಇದನ್ನು 2000 ರಲ್ಲಿ ಬಿಡುಗಡೆ ಮಾಡಿ 2004 ರವರೆಗೆ ಮಾರಾಟಕ್ಕೆ ಲಭ್ಯವಿರಿಸಲಾಗಿತ್ತು. ಕ್ವಾಲಿಸ್ ಕಡಿಮೆ ಸಮಯದಲ್ಲಿ ಗ್ರಾಹಕರಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದಿತ್ತು.

ಇದೀಗ ಸೂಪರ್ ಆಗಿ ಮಾಡಿಫೈಗೊಳಿಸಿರುವ ಕ್ವಾಲಿಸ್ MPV ವಿಡಿಯೋವನ್ನು ದಾಜಿಶ್.ಪಿ ಎಂಬುವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಕ್ವಾಲಿಸ್ MPV ಕಾರನ್ನು ಸಂಪೂರ್ಣವಾಗಿ ಫ್ಯಾಕ್ಟರಿ ಸ್ಥಿತಿಗೆ ಮರುಸ್ಥಾಪಿಸಲಾಗಿದೆ. MPV ಯಲ್ಲಿನ ಹೆಡ್‌ಲ್ಯಾಂಪ್‌ಗಳನ್ನು ಬದಲಾಯಿಸಲಾಗಿದ್ದು, ಸ್ಟಾಕ್‌ಗಳು ಹಳದಿ ಬಣ್ಣವನ್ನು ಹೊಂದಿವೆ. ಹ್ಯಾಲೊಜೆನ್ ಹೆಡ್‌ ಲೈಟ್ ಸೆಟಪ್ ಹೊಂದಿದ್ದು, ಕ್ಲಿಯರ್ ಲೆನ್ಸ್ ಇಂಡಿಕೇಟರ್‌ಗಳನ್ನು ನೀಡಲಾಗಿದೆ.

ಸೈಡ್ ಪ್ರೊಫೈಲ್‌ನಲ್ಲಿ ಈ MPV ಸ್ಟಾಕ್ 14 ಇಂಚಿನ ಸ್ಟೀಲ್ ರಿಮ್‌ಗಳನ್ನು ಆಫ್ಟರ್‌ಮಾರ್ಕೆಟ್‌ನಲ್ಲಿ ಪಡೆದ 15 ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಬದಲಾಯಿಸಲಾಗಿದೆ. ಮುಂಭಾಗದ ಗ್ರಿಲ್, ಟೈಲ್‌ಗೇಟ್, ORVM ಗಳ ಮೇಲಿನ ಕ್ರೋಮ್ ಸಾಕಷ್ಟು ಆಕರ್ಷಕವಾಗಿ ಕಾಣುತ್ತದೆ.

ಹಾಗೆಯೇ ಹೆಚ್ಚು ಆಕರ್ಷಣೀಯವಾಗಿ ಕಾಣಲು ಹೆಡ್‌ಲ್ಯಾಂಪ್ ಮೇಲೆ ಆಫ್ಟರ್‌ಮಾರ್ಕೆಟ್ LED DRL ಅನ್ನು ಸೇರಿಸಿದ್ದಾರೆ. MPV ಯ ಮುಂಭಾಗದ ಬಂಪರ್ ಪ್ಲಾಸ್ಟಿಕ್‌ನಿಂದ ಮಾಡಿದ ಕಂಪನಿ ಅಳವಡಿಸಿದ ಬುಲ್‌ಬಾರ್ ಅನ್ನು ನೋಡಬಹುದು. ಇದನ್ನು ಡೀಲರ್‌ಶಿಪ್‌ಗಳಿಂದ ಅಕ್ಸೆಸೊರಿಯಾಗಿ ಪಡೆಯಲಾಗಿದೆ.

ಕ್ವಾಲಿಸ್‌ನಲ್ಲಿರುವ ಫ್ಯಾಬ್ರಿಕ್ ಸೀಟ್‌ಗಳನ್ನು ಕಸ್ಟಮ್ ಫಿಟ್ ಲೆಥೆರೆಟ್ ಅಪ್ಹೋಲ್ಸ್ಟರಿಯೊಂದಿಗೆ ಬದಲಾಯಿಸಲಾಗಿದ್ದು, ಪ್ರೀಮಿಯಂ ಆಗಿ ಕಾಣಲು ಕಂದು ಬಣ್ಣದ ಸೀಟ್‌ಗಳನ್ನು ಹಾಕಿಸಿದ್ದಾರೆ. ಸ್ಟೀರಿಂಗ್ ವೀಲ್, ಡ್ಯಾಶ್‌ ಬೋರ್ಡ್, ಸೆಂಟರ್ ಕನ್ಸೋಲ್ ಮತ್ತು ಡೋರ್‌ನಲ್ಲಿರುವ ಎಲ್ಲಾ ಮೂಲ ಬಟನ್‌ಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಹಾಗೆಯೇ ಮೂಲ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸ್ಟಾಕ್ ಆಗಿಯೇ ಉಳಿದಿದೆ.

ಇನ್ನು ಎರಡನೇ ಸಾಲಿನ ಪ್ರಯಾಣಿಕರಿಗೆ ಎರಡು ಮೀಸಲಾದ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ಗಳಿವೆ. ಎರಡನೇ ಸಾಲಿನಲ್ಲಿ ಈಗ ಕ್ಯಾಪ್ಟನ್ ಸೀಟ್‌ಗಳಿವೆ.

IRVM ಒಂದು ಆಫ್ಟರ್ ಮಾರ್ಕೆಟ್ ಘಟಕವಾಗಿದ್ದು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೆನ್ಸರ್‌ಗಳಿಂದ ಫೀಡ್ ಅನ್ನು ಸಹ ತೋರಿಸುತ್ತದೆ. ಈ ವಿಡಿಯೋದಲ್ಲಿ ಕಾಣುವ ಕ್ವಾಲಿಸ್ 2 ಲಕ್ಷ ಕಿ.ಮೀ ಓಡಿದೆ, ಆದರೆ ಟೊಯೊಟಾಗೆ ಇದು ದೊಡ್ಡ ಸಂಖ್ಯೆಯೇನಲ್ಲ. ಏಕೆಂದರೆ ಈ ಎಂಜಿನ್‌ಗಳು ದೀರ್ಘಕಾಲ ಬಾಳಿಕೆ ಬರುತ್ತವೆ.

ಬುಲ್‌ಬಾರ್‌ನ ಕೆಳಗೆ ದೊಡ್ಡ ಫಾಗ್ ಲ್ಯಾಂಪ್ ಘಟಕವಿದೆ. ಹಾಗೆಯೇ ಪ್ರೀಮಿಯಂ ಆಗಿ ಕಾಣಲು ಬಾನೆಟ್ ಮೇಲೆ ಟೊಯೋಟಾ ಲೋಗೋವನ್ನು ಸ್ಥಾಪಿಸಲಾಗಿದೆ. ಮಾಲೀಕರು ಸೌದಿ ಅರೇಬಿಯಾದಿಂದ ಇದನ್ನು ಖರೀದಿಸಿರುವುದಾಗಿ ತಿಳಿಸಿದ್ದಾರೆ.

ಈ ಕ್ವಾಲಿಸ್‌ನ ಮಾಲೀಕರು ಕಾರನ್ನು ಅದರ ಮೂಲ ಹಸಿರು ಮತ್ತು ಸಿಲ್ವರ್ ಡ್ಯುಯಲ್-ಟೋನ್‌ನಲ್ಲಿ ಪುನಃ ರೀಪೇಂಟ್ ಮಾಡಿಸಿದ್ದು, ಕೊಚ್ಚಿಯ ಗ್ಯಾರೇಜ್‌ನಲ್ಲಿ ಪೇಂಟಿಂಗ್ ಕೆಲಸ ಮಾಡಲಾಗಿದೆ ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ.

Leave A Reply

Your email address will not be published.