ಮನಸ್ಸು ಮತ್ತು ಶರೀರ ರಿಲ್ಯಾಕ್ಸ್‌ ಮಾಡಿಕೊಳ್ಳಲು ಕರ್ನಾಟಕದ ಈ ತಾಣಗಳ ಪ್ರವಾಸ ಬೆಸ್ಟ್‌ !!

Tourist Places: ಕರ್ನಾಟಕ ರಾಜ್ಯ ತನ್ನ ಆಚಾರ -ವಿಚಾರ, ಹಬ್ಬಗಳ ಆಚರಣೆ, ಪ್ರಾಕೃತಿಕ ಸೌಂದರ್ಯ, ಪಚ್ಚ ಪಸಿರನ್ನು ಹೊದ್ದ ವನ್ಯ ಸಂಪತ್ತು, ವಿಭಿನ್ನ ಭೌಗೋಳಿಕತೆ, ಸಸ್ಯ ರಾಶಿಗಳ ನಡುವೆ ಮೌನವಾಗಿ ಧುಮ್ಮಿಕ್ಕುವ ಜಲಧಾರೆ, ಸರೋವರ, ಐತಿಹಾಸಿಕ ಪರಂಪರೆ ಸಾರುವ ಸಂಸ್ಕೃತಿಯ ಬಿಂಬಿಸುವ ಪುರಾತನ ದೇವಾಲಯಗಳು ನಡುವೆ ಅದೆಷ್ಟೋ ನಯನ ಮನೋಹರ ತಾಣಗಳನ್ನು ಒಳಗೊಂಡಿದೆ.

ಇಂದಿನ ಒತ್ತಡಯುತ ಜೀವನ ಶೈಲಿಯಲ್ಲಿ ಕೊಂಚ ಮಟ್ಟಿಗೆ ಬ್ರೇಕ್ ಪಡೆದುಕೊಳ್ಳುವ ನಿಟ್ಟಿನಲ್ಲಿ ವೀಕೆಂಡ್ ಬಂದರೆ ಸಾಕಪ್ಪ ಎಂದು ಜಾತಕಪಕ್ಷಿಯಂತೆ ಕಾಯುವ ಮಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಮಂದಿ ಪ್ರವಾಸ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ನೀವು ವಾರಂತ್ಯದಲ್ಲಿ (Weekend) ಪಾರ್ಕ್ (Park), ಬೀಚ್ ( Beach), ದೇವಸ್ಥಾನ (Temple) ಜಲಪಾತ (Falls), ಝೂ (Zoo), ಪ್ರವಾಸಿ ತಾಣಗಳನ್ನೂ (Tourist Places) ಗಮನಿಸಿದರೆ ಪ್ರವಾಸಿಗರು (Tourists)ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಾರೆ.

ಪ್ರವಾಸ (Tourist Places)ಎಂದರೇ ಸಾಕು ಮೈಮನ ವೆಲ್ಲ ಪುಳಕ ಗೊಳ್ಳುವ ಜೊತೆಗೆ ಮನಸ್ಸು ರಿಲ್ಯಾಕ್ಸ್‌ ಆಗಿ ಮನೆಯವರ, ಸ್ನೇಹಿತರ ಜೊತೆಗೆ ಖುಷಿಯಾಗಿ ಕಾಲ ಕಳೆಯುವ ಸುಮಧುರ ಅನುಭವಗಳ ಸರಮಾಲೆಯನ್ನು ನೆನಪಿನ ಬುತ್ತಿಯಲ್ಲಿ ಕೂಡಿಡಲು ಅವಕಾಶ ದೊರೆಯುತ್ತದೆ. ವಾರಪೂರ್ತಿ ಮನೆ, ಆಫೀಸ್(Office) ಸಂಸಾರ ಜಂಜಾಟದ ನಡುವೆ ಕೊಂಚ ರಿಲೀಫ್ ಪಡೆಯಲು ಬಯಸುವವರು ವೀಕೆಂಡ್ ನಲ್ಲಿ ಮೋಜು,ಮಸ್ತಿ ಜೊತೆಗೆ ಫ್ಯಾಮಿಲಿ ಪೂರ್ತಿ ಒಟ್ಟಾಗಿ ಟ್ರಿಪ್ ಹೋಗುವ ಯೋಜನೆ ಹಾಕಿ ಎಲ್ಲಿಗೆ ಹೋಗೋದು ಎಂದು ಯೋಚಿಸುತ್ತಿದ್ದರೆ, ನಿಮಗಾಗಿ ಕೆಲ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿ ನೀಡಲಾಗಿದೆ.

ಮೈಂಡ್ ಫ್ರೆಶ್ (Mind Fresh) ಒತ್ತಡ, ಕಿರಿಕಿರಿ ಎಲ್ಲಕ್ಕೂ ಬ್ರೇಕ್ ನೀಡಿ ನಿಮ್ಮ ಮೈ ಮನ ಸೆಳೆಯುವ ಪ್ರವಾಸಿ ತಾಣಗಳ ಲಿಸ್ಟ್ ಇಲ್ಲಿದೆ ನೋಡಿ.
ಚಿಕ್ಕಮಗಳೂರು(Chikkamagaluru)
ಹಚ್ಚ ಹಸಿರಿನ ವನಸಿರಿಯ ಮಡಿಲಲ್ಲಿ ಮೈಮನ ಹಗುರವಾಗುವ ಪ್ರಶಾಂತ ವಾತಾವರಣದಲ್ಲಿ ಕಾಲ ಕಳೆಯಲು ಯಾರು ತಾನೇ ಬಯಸಲ್ಲ ಹೇಳಿ!! ಇಂತಹ ಸುಂದರ ಅನುಭವ ನೀಡುವ ತಾಣಗಳಲ್ಲಿ ಚಿಕ್ಕಮಗಳೂರು ಕೂಡ ಒಂದು.‘
ಕಾಫಿ ನಾಡು’ ಎಂದೇ ಪ್ರಖ್ಯಾತಿ ಪಡೆದ ಚಿಕ್ಕಮಗಳೂರು ಕರ್ನಾಟಕದ ಪಶ್ಚಿಮ ಭಾಗದಲ್ಲಿರುವ ಸುಂದರವಾದ ಜಿಲ್ಲೆಯಾಗಿದ್ದು ಕಣ್ಮನ ಸೆಳೆಯುವ ಆಕರ್ಷಣೀಯ ಗಿರಿಧಾಮಗಳನ್ನೂ ಒಳಗೊಂಡಿದೆ. (Chikkamagaluru) ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ತೋಟಗಳು( Coffe plants) ನೋಡುಗರ ಚಿತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮಲೆನಾಡು, ಅರೆಮಲೆನಾಡು ಹಾಗೂ ಬಯಲು ಸೀಮೆಗಳನ್ನೊಳಗೊಂಡಿರುವ ಚಿಕ್ಕಮಗಳೂರಿನ ಪ್ರಾಕೃತಿಕ ಸೌಂದರ್ಯ ನೋಡುಗರ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಐತಿಹಾಸಿಕ ದೇವಾಲಯವಾದ ಶೃಂಗೇರಿ ಶಾರದಾಂಬ ದೇವಾಲಯ, ಮುಳ್ಳಯ್ಯನಗಿರಿ ಶಿಖರ ಜಲಪಾತಗಳನ್ನೊಳಗೊಂಡು ಪ್ರಾಕೃತಿಕ ವೈಭವವನ್ನು ಒಳಗೊಂಡ ಚಿಕ್ಕಮಗಳೂರು ಮೈಂಡ್ ರಿಫ್ರೆಶ್‌ ಮಾಡಿಕೊಳ್ಳಲು ಉತ್ತಮ ಸ್ಥಳವಾಗಿದೆ.

ಕೆಮ್ಮಣ್ಣುಗುಂಡಿ( Kemmangundi )
ಕರ್ನಾಟಕದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ನಿಮ್ಮ ಒತ್ತಡ ಮಾಡಲು ಹೇಳಿ ಮಾಡಿಸಿದ ಜಾಗ ಎಂದರೇ ಕೆಮ್ಮಣ್ಣು ಗುಂಡಿ.
ಇದು ಬೆಂಗಳೂರಿನಿಂದ ಸುಮಾರು 250 ಕಿ.ಮೀ ದೂರದಲ್ಲಿದ್ದು, ಝಡ್‌ ಪಾಯಿಂಟ್, ರಾಕ್‌ ಗಾರ್ಡನ್‌, ರಾಜೇಂದ್ರ ಬೆಟ್ಟ, ಶಾಂತಿ ಜಲಪಾತಗಳನ್ನೂ ಕೂಡ ಒಳಗೊಂಡಿದೆ. ಸಾಹಸಿಗಳಿಗೆ ಕೆಮ್ಮಣ್ಣುಗುಂಡಿ ಹಲವಾರು ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದು, ಟ್ರೆಕ್ಕಿಂಗ್‌(Trucking), ಪ್ರಕೃತಿಯ ನಡಿಗೆ, ಪಿಕ್ನಿಕ್‌ ಮಾಡಲು ಬಯಸುವವರಿಗೆ ರಮಣೀಯ ದೃಶ್ಯವನ್ನು ಕಣ್ತುಂಬಿ ಕೊಳ್ಳುವ ಜೊತೆಗೆ ಮೈ ಮನವೆಲ್ಲ ರಿಲೀಫ್ ಆಗೋದು ಗ್ಯಾರಂಟಿ.

ಜೋಗ ಜಲಪಾತ(Jog Falls)
ಸಾಯೋ ಮೊದಲು ಒಮ್ಮೆ ನೋಡು ಜೋಗ ಗುಂಡಿ ಎಂಬ ಜನಪ್ರಿಯ ಹಾಡೆ ಜೋಗ ಜಲಪಾತದ ಸೊಬಗನ್ನು ವಿವರಿಸುತ್ತದೆ. ನಮ್ಮ ಕರ್ನಾಟಕದ ಜೋಗ್‌ ಜಲಪಾತ, ಭಾರತದ ಎರಡನೇ ಅತಿ ಎತ್ತರದ ಜಲಪಾತ ಎಂಬ ಬಿರುದು ಹೊಂದಿದ್ದು, ಮಳೆಗಾಲದಲ್ಲಿ ಧುಮ್ಮಿಕ್ಕುವ ಜಲಧಾರೆಯ ಸೊಬಗು ಸವಿಯಲು ಅಲ್ಲಿಗೆ ಭೇಟಿ ನೀಡಬೇಕು.ಪ್ರಕೃತಿಯ ಮಡಿಲಲ್ಲಿ ಜೋಗ್ ಜಲಪಾತ ರಾಜ, ರೋರರ್, ರಾಕೆಟ್‌ ಮತ್ತು ರಾಣಿ ಎಂಬ ನಾಲ್ಕು ಭಾಗಗಳನ್ನು ಒಳಗೊಂಡಿದ್ದು, ಎತ್ತರದಿಂದ ಧರೆಗೆ ಜಾರುವ ಜಲಧಾರೆಯ ನೋಡುವುದೇ ಚೆಂದ. ಒಮ್ಮೆ ನೀವು ಜೋಗದ ಗುಂಡಿಗೆ ಭೇಟಿ( Visit)ಮಾಡಿದರೆ ಮೈ ಮನ ಸೆಳೆಯುವುದು ಮಾತ್ರವಲ್ಲ ರಿಲಾಕ್ಸ್ (Relax) ಆಗೋದು ಖಂಡಿತ.

ನಂದಿ ಬೆಟ್ಟ( Nandi Hills)
ನಂದಿ ಬೆಟ್ಟ ಬೆಂಗಳೂರು ನಗರದಿಂದ 45 ಕಿ.ಮೀ ಮತ್ತು ಚಿಕ್ಕಬಳ್ಳಾಪುರದಿಂದ 10 ಕಿ.ಮೀ ದೂರದಲ್ಲಿದೆ.ಭಾರತದ 2 ನೇ ಅತ್ಯಂತ ದೊಡ್ಡ ಬೆಟ್ಟ ಎಂಬ ಹೆಗ್ಗಳಿಕೆ ಪಡೆದಿರುವ ನಂದಿ ಬೆಟ್ಟ ಸಮುದ್ರಮಟ್ಟದಿಂದ ಸುಮಾರು 4831 ಅಡಿ ಎತ್ತರದಲ್ಲಿದೆ. ಇಲ್ಲಿನ ಪ್ರಶಾಂತವಾದ ವಾತಾವರಣ ನಿಮ್ಮ ಗಮನ ಸೆಳೆಯುವ ಜೊತೆಗೆ ಅಲ್ಲಿನ ಸೌಂದರ್ಯದ ಸೊಬಗಿಗೆ ಮಾರು ಹೋಗುವಂತೆ ಮಾಡುತ್ತದೆ. ಅದರಲ್ಲಿಯೂ ಪಟ್ಟಣದಲ್ಲಿರುವ ಮಂದಿ ಒತ್ತಡದ ನಡುವೆ ಮೈಂಡ್ ರಿಫ್ರೆಶ್ ಆಗಬೇಕು ಅಂದುಕೊಂಡರೆ ಮೊದಲು ನಂದಿ ಬೆಟ್ಟಕ್ಕೆ ಭೇಟಿ ನೀಡಿ.

ಕೊಡಗು (Coorg)
ಎಲ್ಲ ಸಮಯದಲ್ಲಿಯೂ ಭೇಟಿ ನೀಡಬಹುದಾದ ತಾಣ ಎಂದರೆ ಕೊಡಗು ಇಲ್ಲವೇ ಕೂರ್ಗ್ (Coorg) ಚುಮು ಚುಮು ಚಳಿಯ ವಾತಾವರಣದ ನಡುವೆ ಪ್ರಾಕೃತಿಕ ವೈಭವವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಕಾವೇರಿಯ ಉಗಮ ಸ್ಥಳ ತಲಕಾವೇರಿ ಕೂಡ ಇಲ್ಲಿನ ಪೌರಾಣಿಕ ಐತಿಹಾಸಿಕ ಪರಂಪರೆ ಸಾರುವ ದೇವಾಲಯಗಳನ್ನು ಒಳಗೊಂಡಿದೆ. ಇಲ್ಲಿ ಎತ್ತ ಕಣ್ಣು ಹಾಯಿಸಿದರೂ ಕಂಡುಬರುವ ಪಚ್ಚ ಪಸಿರ ಹೊದ್ದುಕೊಂಡ ವನ್ಯ ಸಂಪತ್ತು, ಕಾನನದ ನಡುವೆ ಇರುವ ಜಲಪಾತಗಳು, ನೋಡುಗರಿಗೆ ರೋಮಾಂಚನ ನೀಡುವ ಜೊತೆಗೆ ನಿಮ್ಮ ಟೆನ್ಶನ್ ರಿಲೀಫ್ ಮಾಡುವ ಬೆಸ್ಟ್ ಪ್ಲೇಸ್ ಗಳಲ್ಲಿ ಕೊಡಗು ಕೂಡ ಒಂದು. ಹಾಗಿದ್ರೆ, ನೀವು ಕೂಡ ಪಿಕ್ನಿಕ್, ಟೂರ್ ಹೋಗಬೇಕು ಅಂದುಕೊಂಡಿದ್ದರೆ ನಿಮ್ಮ ಮನಸ್ಸು ಹಗುರವಾಗಿ ರಿಫ್ರೆಶ್ ಆಗಲು ಈ ಮೇಲೆ ತಿಳಿಸಿದ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.

Leave A Reply

Your email address will not be published.