Sleeping Rules : ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿ, ನಿಮ್ಮ ಅದೃಷ್ಟ ಬೆಳಗುತ್ತೆ!

Sleeping Rules: ಜೀವನದಲ್ಲಿ (life ) ನಿದ್ದೆ (sleep ) ಕೂಡ ಒಂದು ಪ್ರಮುಖ ಭಾಗವಾಗಿದೆ. ದಿನದಲ್ಲಿ ಕನಿಷ್ಠ 7 ಗಂಟೆ ಕಾಲ ನಿದ್ದೆ ಮಾಡಲೇಬೇಕು. ಆರೋಗ್ಯ (health) ದೃಷ್ಟಿಯಿಂದಲೂ ನಿದ್ದೆ ಎನ್ನುವುದು ಅತೀ ಅಗತ್ಯ. ಹಾಗೆಯೇ ಶಾಸ್ತ್ರಗಳಲ್ಲೂ ಕೂಡ ನಿದ್ರೆಗೆ ಸಂಬಂಧಿಸಿದಂತೆ ಒಂದಿಷ್ಟು ನಿಯಮಗಳನ್ನು (Sleeping rules) ತಿಳಿಸಲಾಗುತ್ತದೆ. ಶಾಸ್ರಗಳ ಪ್ರಕಾರ, ನಾವು ಮಲಗುವ ಮುನ್ನ ಕೆಲವು ಕೆಲಸಗಳನ್ನು ಮಾಡುವಂತೆ ಸೂಚಿಸಲಾಗಿದೆ.

 

ಪಾದಗಳನ್ನು ಚೆನ್ನಾಗಿ ತೊಳೆದುಕೊಂಡು ಮಲಗಿರಿ :
​ರಾತ್ರಿ ಮಲಗುವ ಮೊದಲು ನಿಮ್ಮ ಪಾದಗಳನ್ನು ಚೆನ್ನಾಗಿ ತೊಳೆದುಕೊಳ್ಳಿ, ನಂತರ ಅವುಗಳನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿ ನಂತರ ಮಲಗಲು ಹೋಗಿ. ಕೊಳೆಯಾದ ಪಾದಗಳು ಅಥವಾ ಒದ್ದೆಯಾದ ಪಾದಗಳೊಂದಿಗೆ ಮಲಗಲು ಹೋಗುವುದು ಜೀವನದಲ್ಲಿ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು. ಪಾದಗಳನ್ನು ತೊಳೆಯದೇ ಮಲಗುವುದರಿಂದ ನಕಾರಾತ್ಮಕತೆಯು ನಿಮ್ಮತ್ತ ಆಕರ್ಷಿತವಾಗುತ್ತದೆ ಮತ್ತು ಲಕ್ಷ್ಮಿ ದೇವಿಯೂ ನಿಮ್ಮ ಮೇಲೆ ಕುಪಿತಗೊಳ್ಳುತ್ತಾಳೆ.

ಮಲಗುವ ಸ್ಥಳ (place) :
ನೀವು ಮಲಗುವ ಸ್ಥಳ ಆರಾಮದಾಯಕ ಮತ್ತು ನೆಚ್ಚಿನದಾಗಿರಬೇಕು. ಹಾಗಿರುವಾಗ ನೀವು ಉತ್ತಮ ನಿದ್ರೆಯನ್ನು ಪಡೆಯಲು ಸಾಧ್ಯವಾಗುತ್ತದೆ. ನಮಗೆ ಇಷ್ಟವಿಲ್ಲದ ಸ್ಥಳದಲ್ಲಿ ಮಲಗುವುದರಿಂದ ನಿದ್ರೆಗೆ ಅಡ್ಡಿಯಾಗುತ್ತದೆ. ಹಾಗಾಗಿ ಮಲಗುವ ಹಾಸಿಗೆಯ ಬಗ್ಗೆ ನಿಮ್ಮ ಗಮನವಿರಲಿ.

​ಕರ್ಪೂರವನ್ನು ಉರಿಸಿ:​
ಮಲಗುವ ಮುನ್ನ ನೀವು ಮಲಗುವ ಕೋಣೆಯಲ್ಲಿ ಕರ್ಪೂರವನ್ನು ಉರಿಸಿ. ಇದು ಪರಿಸರವನ್ನು ಶುದ್ಧೀಕರಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ದೂರವಿಡುತ್ತದೆ. ಇದು ಉತ್ತಮ ನಿದ್ರೆಗೆ ಕಾರಣವಾಗುತ್ತದೆ.

​ದೇವರ ಧ್ಯಾನ:​
ಮಲಗುವ ಮುನ್ನ ನಿಮಗೆ ಪ್ರಿಯವಾದ ದೇವರನ್ನು ಅಥವಾ ಹನುಮಂತನ ಧ್ಯಾನವನ್ನು ಮಾಡಿ ಮಲಗಬೇಕು. ಇದರಿಂದಾಗಿ ನೀವು ಮಲಗುವ ಕೋಣೆಯಲ್ಲಿ ಧನಾತ್ಮಕ ಶಕ್ತಿಯು ನೆಲೆಸಲು ಪ್ರಾರಂಭಿಸುತ್ತದೆ. ಮಲಗುವ ಮುನ್ನ ಯಾವುದೇ ನಕಾರಾತ್ಮಕ ಆಲೋಚನೆಗಳನ್ನು ತಲೆಯಿಂದ ತೆಗೆದು ಹಾಕಬೇಕು. ನಿಮ್ಮ ಗುರಿಯ ಬಗ್ಗೆ ಸಕಾರಾತ್ಮಕ ಆಲೋಚನೆಗಳನ್ನು ಮಾತ್ರ ಇಟ್ಟುಕೊಳ್ಳಬೇಕು.

​ಪಾದಗಳು ಈ ದಿಕ್ಕಿನಲ್ಲಿರಲಿ:​
ನಿದ್ದೆ ಮಾಡುವಾಗ, ನಿಮ್ಮ ಪಾದಗಳು ಯಾವಾಗಲೂ ಬಾಗಿಲಿನಿಂದ ವಿರುದ್ಧ ದಿಕ್ಕಿನಲ್ಲಿರಬೇಕು ಎಂಬುದನ್ನು ನೆನಪಿನಲ್ಲಿಡಿ. ನೀವು ಇದನ್ನು ಮಾಡದಿದ್ದರೆ, ನಿಮ್ಮ ಆರೋಗ್ಯದ ಸ್ಥಿತಿ ಹದಗೆಡಬಹುದು ಅಥವಾ ನಕಾರಾತ್ಮಕ (negative) ಶಕ್ತಿಗಳು (power) ನಿಮ್ಮ ಮೇಲೆ ಪ್ರಭಾವ ಬೀರಬಹುದು.

ಭೋಜನ ನಂತರ ಚಟುವಟಿಕೆ :​
​ ಭೋಜನವು ಸರಳ ಮತ್ತು ಹಗುರವಾಗಿರಬೇಕು. ಇದರ ನಂತರ, ನಿಮ್ಮ ಬಳಿ ಸಾಧ್ಯವಾದರೆ ಯೋಗಾಸನಗಳನ್ನು ಮಾಡಬಹುದು. ಇದರ ನಂತರ ದೇವರ ಮಂತ್ರಗಳನ್ನು ಪಠಿಸಬೇಕು. ಯಾವುದಾದರೂ ಒಂದೆರೆಡು ಮಂತ್ರಗಳನ್ನು ಪಠಿಸಿ ಮಲಗಬೇಕು. ಮಂತ್ರಗಳ ಪಠಣವು ನಿಮ್ಮ ಮನಸ್ಸನ್ನು ಶುದ್ಧವಾಗಿಡುತ್ತದೆ.

ಹಾಲಿನ ಪಾತ್ರೆ:
ಶಾಸ್ತ್ರಗಳಲ್ಲಿ ಹಾಲನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಹೀಗಿರುವಾಗ ರಾತ್ರಿ ಮಲಗುವ ಮೊದಲು, ಹಾಲಿನ ಪಾತ್ರೆಯನ್ನು ಎಂದಿಗೂ ತೆರೆದಿಡಬೇಡಿ ಎಂಬುದನ್ನು ನೆನಪಿನಲ್ಲಿಡಿ. ಹಾಲಿನ ಪಾತ್ರೆಯನ್ನು ಯಾವಾಗಲೂ ಮುಚ್ಚಿಡಬೇಕು. ಹಾಲಿನ ಪಾತ್ರೆ ತೆರೆದಿಟ್ಟಲ್ಲಿ ಅದು ಹಣದ ನಷ್ಟಕ್ಕೆ ಕಾರಣವಾಗುತ್ತದೆ.

ಹಣದ ಲೆಕ್ಕಾಚಾರ :
ರಾತ್ರಿ ಮಲಗುವ ಮುನ್ನ ಹಣವನ್ನು ಎಣಿಸಬಾರದು ಅಥವಾ ಲೆಕ್ಕ ಹಾಕಬಾರದು. ರಾತ್ರಿಯಲ್ಲಿ ಹಣವನ್ನು ಎಣಿಸುವುದು ಹಣದ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರಿಂದ ತಾಯಿ ಲಕ್ಷ್ಮಿ ಕೂಡ ಮುನಿಸಿಕೊಂಡು ಮನೆಯಿಂದ ಹೊರ ಹೋಗುತ್ತಾಳೆ.

ದೀಪಗಳನ್ನು ಉರಿಸುವಿಕೆ :
ಸಾಮಾನ್ಯವಾಗಿ ರಾತ್ರಿ ಮಲಗುವ ಮುನ್ನ ಎಲ್ಲಾ ದೀಪಗಳನ್ನು ಆಫ್ (light off) ಮಾಡಿ ಮಲಗುತ್ತಾರೆ. ರಾತ್ರಿ ವೇಳೆ ಮನೆಯಲ್ಲಿ ಸಂಪೂರ್ಣ ಕತ್ತಲು ಆವರಿಸಿದರೆ ತಾಯಿ ಲಕ್ಷ್ಮಿ ಮನೆ ಬಿಟ್ಟು ಹೋಗುತ್ತಾಳೆ.

ಬಟ್ಟೆ ಧರಿಸುವಿಕೆ :
ರಾತ್ರಿ ಮಲಗುವಾಗ ಸ್ವಚ್ಚವಾದ ಬಟ್ಟೆ ಧರಿಸಿ. ಹಗಲಿನಲ್ಲಿ ಧರಿಸುವ ಬಟ್ಟೆ ಧರಿಸಿ ಎಂದಿಗೂ ಮಲಗಬಾರದು. ಇದಲ್ಲದೆ, ಬಟ್ಟೆ ಇಲ್ಲದೆ ಅಥವಾ ಬೆತ್ತಲೆಯಾಗಿ ಮಲಗಬೇಡಿ ಎಂಬುದನ್ನು ಸಹ ನೆನಪಿನಲ್ಲಿಡಿ. ಇದನ್ನು ಮಾಡುವುದರಿಂದ ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ.

ಈ ಮೇಲಿನಂತೆ ನೀವು ಮಲಗುವ ಮುನ್ನ ಕೆಲವು ನಿಯಮಗಳನ್ನು ಪಾಲಿಸುವಂತೆ ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ :High Cholesterol: ಇವು ಹೈಕೊಲೆಸ್ಟ್ರಾಲ್‌ನ ಲಕ್ಷಣ! ನಿರ್ಲಕ್ಷ್ಯ ಮಾಡದಿರಿ, ಹಾರ್ಟ್‌ಅಟ್ಯಾಕ್‌ನಿಂದ ಬಚಾವಾಗಿರಿ!

Leave A Reply

Your email address will not be published.