Maruti Swift Car : ಅತಿ ಹೆಚ್ಚು ಮೈಲೇಜ್ , ಸೂಪರ್ ಲುಕ್ ನಿಂದ ಸೆಳೆಯೋ ಈ ಮಾರುತಿಗೆ ಕೇವಲ 1 ಲಕ್ಷ ಕೊಟ್ಟು ಖರೀದಿಸಿ!!!

Maruti swift car : ಭಾರತೀಯ ಮಾರುಕಟ್ಟೆಯಲ್ಲಿ 2023 ಹೊಸ ವರ್ಷದ ಆರಂಭ ತಿಂಗಳು, ಜನವರಿಯಲ್ಲಿ ಅಂಕಿ ಅಂಶ ಪ್ರಕಾರ ಮಾರುತಿ ಸ್ವಿಫ್ಟ್ (maruti swift car) ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ. ಅದಲ್ಲದೆ ಭಾರತೀಯ (india ) ಮಾರುಕಟ್ಟೆಯಲ್ಲಿ ಸಾಮಾನ್ಯ ಜನರ ನೆಚ್ಚಿನ ಕಾರು ಮಾರುತಿ ಸುಜುಕಿ ಕಂಪನಿಯ ಸ್ವಿಫ್ಟ್ ಅನ್ನುವುದರಲ್ಲಿ ಸಂಶಯವಿಲ್ಲ.

 

ಮುಖ್ಯವಾಗಿ ಕಳೆದ ವರ್ಷ ಈ ಕಾರಿನ ಸಿಎನ್​ಜಿ ವೆರಿಯಂಟ್​ ಕೂಡ ಲಾಂಚ್​ ಆಗಿದ್ದು, ನೀವು ಕೂಡ ಸ್ವಿಫ್ಟ್​ ಖರೀದಿ ಮಾಡುವ ಯೋಚನೆ ಮಾಡಿದಲ್ಲಿ ಭರ್ಜರಿ ಆಫರ್ ಲಭ್ಯವಿದೆ. ಕೇವಲ ​ 1 ಲಕ್ಷ ರೂಪಾಯಿ ಕೊಟ್ಟು ಈ ಕಾರನ್ನು ನೀವು ಮನೆಗೆ ತೆಗೆದುಕೊಂಡು ಹೋಗಬಹುದು.

ಆದರೆ ಈ ಕಾರಿನ ಬೆಲೆ 1 ಲಕ್ಷ ಅಲ್ಲ. ನೀವು ಒಂದು ಲಕ್ಷ ಡೌನ್​ ಪೇಮೆಂಟ್​ ಮಾಡಿ ಈ ಕಾರನ್ನು ಮನೆಗೆ ತೆಗೆದುಕೊಂಡು ಹೋಗಬಹುದು. ನಂತರ ಇಎಂಐ ರೂಪದಲ್ಲಿ ನೀವು ಉಳಿದ ಹಣವನ್ನು ಕಟ್ಟಬಹುದು.

ಮಾರುತಿ ಸ್ವಿಫ್ಟ್​ ಅನ್ನು Lxi, Vxi, Zxi ಮತ್ತು Zxi+ ಎಂಬ 4 ಟ್ರಿಮ್​ಗಳ 11 ವೆರಿಯಂಟ್​ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇವುಗಳ ಎಕ್ಸ್​ ಶೋ ರೂಮ್​ ಬೆಲೆ 6 ಲಕ್ಷ ರೂಪಾಯಿಗಳಿಂದ ಆರಂಭವಾಗಿ, 8.98 ಲಕ್ಷ ರೂಪಾಯಿಗಳವರೆಗೂ ಇದೆ. ಈ ಹ್ಯಾಚ್​ಬ್ಯಾಕ್​ ಕಾರಿನಲ್ಲಿ 1197 ಸಿಸಿಯ ಪೆಟ್ರೋಲ್​ ಎಂಜಿನ್​ ಅಳವಡಿಸಲಾಗಿದೆ.

ಇನ್ನು ಮಾರುತಿ ಸುಜುಕಿ ಸ್ವಿಫ್ಟ್​ LXI ವೆರಿಯಂಟ್​ನ ಎಕ್ಸ್​ ಶೋ ರೂಮ್​ ಬೆಲೆ 6 ಲಕ್ಷ ರೂಪಾಯಿ. ಆನ್​ ರೋಡ್​ ಬೆಲೆ 6,58,298 ರೂಪಾಯಿಗಳಾಗಿದೆ. ಈ ಕಾರನ್ನು ನೀವು ಒಂದು ಲಕ್ಷ ರೂಪಾಯಿ ಡೌನ್​ ಪೇಮೆಂಟ್ ಮಾಡಬಹುದು. ಉಳಿದ 5,58,298 ರೂಪಾಯಿಗಳನ್ನು ಲೋನ್​ ಸೌಲಭ್ಯ ಪಡೆಯಬೇಕಾಗುತ್ತೆ. ಈ ಮೊತ್ತಕ್ಕೆ ನೀವು 5 ವರ್ಷಗಳ ಅಂಧರೆ 60 ಕಂತುಗಳಲ್ಲಿ ಪ್ರತಿ ತಿಂಗಳು 11,600 ರೂಪಾಯಿ ಇಎಮ್​ಐ ಮೂಲಕ ಕಟ್ಟಬೇಕಾಗುತ್ತದೆ.

ಸದ್ಯ ಹೆಚ್ಚಿನ ಮಾರಾಟ ಆಗುತ್ತಿರುವ ​ ಕಾರುಗಳಲ್ಲಿ ಮಾರುತಿ ಸ್ವಿಫ್ಟ್​​ ಕೂಡ ಒಂದಾಗಿದ್ದು, ಮೈಲೇಜ್​ ಕಾರಣದಿಂದ ಸಾಮಾನ್ಯ, ಜನರಿಗೆ ಬಹಳ ಇಷ್ಟವಾಗಬಹುದು.

Leave A Reply

Your email address will not be published.