Luxury Cabin Car : ಅತ್ಯಂತ ಕಡಿಮೆ ಬೆಲೆಯಲ್ಲಿ, ಕೈಗೆಟಕುವ ದರದಲ್ಲಿ ನಿಮಗೆ ದೊರೆಯಲಿದೆ ಈ ಐಷರಾಮಿ ಕ್ಯಾಬಿನ್ ಹೊಂದಿರುವ ಕಾರುಗಳು!
Luxury Cabin car : ಭಾರತ ಮಾರುಕಟ್ಟೆಯಲ್ಲಿ (market )ಗ್ರಾಹಕರು ಬಜೆಟ್ ಗೆ ತಕ್ಕಂತೆ ಉತ್ತಮ ಕ್ಯಾಬಿನ್ ಹೊಂದಿರುವ ಕಾರುಗಳನ್ನು ಆಯ್ಕೆ ಮಾಡುತ್ತಾರೆ. ಅದೇ ರೀತಿ ಗ್ರಾಹಕರ ಅನುಗುಣಕ್ಕೆ ತಕ್ಕಂತೆ ಹಲವಾರು ಐಷರಾಮಿ (luxury) ಕಾರುಗಳನ್ನು ಕಂಪನಿಗಳು (company ) ಮಾರಾಟ ಮಾಡುತ್ತಿದೆ.
ಸದ್ಯ ಪ್ರಸಿದ್ಧ ಕಂಪನಿಗಳಾದ ಟಾಟಾ ಮೋಟಾರ್ಸ್ , ಮಹೀಂದ್ರಾ ಹಾಗೂ ಹ್ಯುಂಡೈ ಅಂತಹ ಕಾರುಗಳು ಮಾರಾಟ ಮಾಡುತ್ತಿದೆ. ಭಾರತದ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ರೂ.15 ಲಕ್ಷದೊಳಗೆ ಖರೀದಿಗೆ ಲಭ್ಯವಿರುವ ಟಾಪ್ 5 ಮಾದರಿಗಳ (Luxury Cabin car) ಬಗ್ಗೆ ಇಲ್ಲಿ ತಿಳಿಸಲಾಗಿದೆ.
• ಟಾಟಾ ಪಂಚ್:
ಇದು ಗ್ಲೋಬಲ್-NCAPಯಿಂದ 5 ಸ್ಟಾರ್ ರೇಟಿಂಗ್ ಪಡೆದಿದ್ದು, ಆಕರ್ಷಕ ಸ್ಟೇರಿಂಗ್ ವೀಲ್ಸ್, 17.78 ಸೆಮೀ ಇನ್ಫೋಟೈನ್ಮೆಂಟ್ ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 7-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ಮ್ ಹಾಗೂ ಕನೆಕ್ಟೆಡ್ ಕಾರ್ ತಂತ್ರಜ್ಞಾನವನ್ನು ಹೊಂದಿದೆ. ಇದು ಕ್ರಾಶ್ ಅಲರ್ಟ್ ಸೇರಿದಂತೆ ಹೆಚ್ಚಿನ ಮಾಹಿತಿ ಒದಗಿಸಲಿದೆ.
ಇನ್ನು ಈ ಕಾರು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 86 PS ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಅಥವಾ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಹೊಂದಿದೆ. CNG ಕಿಟ್ ಹೊಂದಿರುವ ಕಾರು, 77 PS ಪವರ್ ಹಾಗೂ 97 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 18.8-20.09 kmpl ಮೈಲೇಜ್ ನೀಡಲಿದೆ.
ಸದ್ಯ ಟಾಟಾ ಪಂಚ್ ಐಷಾರಾಮಿ ಕ್ಯಾಬಿನ್‌ನೊಂದಿಗೆ ಕೈಗೆಟುಕುವ ಬೆಲೆಗೆ ದೊರೆಯುವ ಕಾರಾಗಿದ್ದು, ರೂ.5.99 ಲಕ್ಷದಿಂದ ರೂ.9.53 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.
ಮಹೀಂದ್ರಾ XUV300:
ಈ ಕಾರು, ಆಕರ್ಷಕ ಕ್ಯಾಬಿನ್ ಒಳಗೊಂಡಿದ್ದು, ಡುಯಲ್ ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್, ಬ್ಲೂಟೂತ್ (Bluetooth ) ಸಂಪರ್ಕಿತ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಆಟೋ ಡಿಮ್ಮಿಂಗ್ IRVMs ಪಡೆದಿದೆ.
ಮಹೀಂದ್ರಾ XUV300 ಇದು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 PS ಪವರ್, 200 Nm ಪೀಕ್ ಟಾರ್ಕ್, 1.5- ಲೀಟರ್ ಡೀಸೆಲ್ ಎಂಜಿನ್ 117 PS ಪವರ್, 300 Nm ಪೀಕ್ ಟಾರ್ಕ್ ಹಾಗೂ 1.2-ಲೀಟರ್ TGDI ಟರ್ಬೊ ಪೆಟ್ರೋಲ್ ಎಂಜಿನ್ 130 PS ಪವರ್, 230 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 6 ಸ್ವೀಡ್ ಮ್ಯಾನುವಲ್ ಅಥವಾ 6 ಸ್ವೀಡ್ AMT ಗೇರ್ ಬಾಕ್ಸ್ ಪಡೆದಿದೆ.
ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಮಹೀಂದ್ರಾ ತಯಾರಿಸುವ XUV300 ಎಸ್‌ಯುವಿ ರೂ.9.60 ಲಕ್ಷದಿಂದ ರೂ.13.20 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ.
ಮಹೀಂದ್ರಾ XUV700:
ಈ ಕಾರು ದೊಡ್ಡದಾದ ಪನೋರಮಿಕ್ ಸನ್‌ರೂಫ್, ಎಲ್ಲರನ್ನು ತನ್ನತ್ತ ಆಕರ್ಷಿಸುವ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ 3D ಸೌಂಡ್ ಟೆಕ್ನಲಾಜಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. 5 ಅಥವಾ 7 ಆಸನ ವ್ಯವಸ್ಥೆಯನ್ನು ಹೊಂದಿದ್ದು, ಗೋಬಲ್-NCAPಯಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ.
ಈ ಕಾರು ರೂ.13.95 ಲಕ್ಷದಿಂದ ರೂ.23.59 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೇಶೀಯ ಗ್ರಾಹಕರಿಗೆ ದೊರೆಯಲಿದ್ದು, ಬೆಲೆಗೆ ತಕ್ಕಂತೆ ಉತ್ತಮ ಕ್ಯಾಬಿನ್ ವಿನ್ಯಾಸವನ್ನು ಒಳಗೊಂಡಿದೆ.
ಹ್ಯುಂಡೈ ಕ್ರೆಟಾ:
ಹ್ಯುಂಡೈ ಕ್ರೆಟಾ ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಸೆಂಟರ್ ಆರ್ಮ್‌ರೆಸ್ಟ್, ಆನ್‌ಬೋರ್ಡ್ ಏರ್ ಫಿಲ್ಟರೇಶನ್ ಸಿಸ್ಟಮ್, ಸನ್‌ರೂಫ್, ವೈರ್‌ಲೆಸ್ ಚಾರ್ಜರ್ ಹಾಗೂ ಆಂಬಿಯೆಂಟ್ ಲೈಟಿಂಗ್ ಅನ್ನು ಒಳಗೊಂಡಿದೆ. ಹ್ಯುಂಡೈ ಕ್ರೆಟಾ 16.8 kmpl ಮೈಲೇಜ್ ನೀಡಲಿದ್ದು, ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದೆ.
ಭಾರತದ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ರೂ.11.89 ಲಕ್ಷದಿಂದ ರೂ.18.34 ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಐಷಾರಾಮಿ ಕ್ಯಾಬಿನ್ ಹೊಂದಿದೆ.
ಸ್ಕೋಡಾ Kushaq:
ಇದು ಐಕಾನಿಕ್ ಟು-ಸ್ಪೋಕ್ ಸ್ಟೀರಿಂಗ್ ವೀಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಆಕರ್ಷಕ ಸನ್‌ರೂಫ್, 10-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಕಾರು 17.2 – 19.2 kmpl ಮೈಲೇಜ್ ನೀಡಲಿದ್ದು, 1-ಲೀಟರ್ 3-ಸಿಲಿಂಡರ್ ಪೆಟ್ರೋಲ್, 1.5-ಲೀಟರ್ 4-ಸಿಲಿಂಡರ್ ಟರ್ಬೊಚಾರ್ಜ್ಡ್ ಎಂಜಿನ್ ಹೊಂದಿದ್ದು, ಐಷಾರಾಮಿ ಕ್ಯಾಬಿನ್ ವಿನ್ಯಾಸ ಒಳಗೊಂಡು ರೂ.11.59 ಲಕ್ಷದಿಂದ ರೂ.19.69 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗಲಿದೆ.
ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ರೂ.15 ಲಕ್ಷದೊಳಗೆ ಖರೀದಿಗೆ ಲಭ್ಯವಿರುವ ಟಾಪ್ 5 ಮಾದರಿಗಳ ಈ ಮೇಲೆ ಪಟ್ಟಿ ಮಾಡಲಾಗಿದ್ದು, ನೀವು ಉತ್ತಮ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ :Maruti Cars : ಮಾರುತಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್! ಈ ಆಫರ್ ಮಿಸ್ ಮಾಡ್ಕೋಬೇಡಿ!!!