HDFC ಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ ; ಈ ಕೂಡಲೇ ಅರ್ಜಿ ಸಲ್ಲಿಸಿ, 75,000ರೂ. ವಿದ್ಯಾರ್ಥಿ ವೇತನ ಪಡೆಯಿರಿ

HDFC Scholarship 2023 : ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವ ಜೊತೆಗೆ ಆರ್ಥಿಕ ಸಮಸ್ಯೆಯನ್ನು ದೂರ ಮಾಡುವ ಸಲುವಾಗಿ ಪ್ರತಿವರ್ಷ ಹೆಚ್‌ಡಿಎಫ್‌ಸಿ ಬ್ಯಾಂಕ್‌ ವತಿಯಿಂದ ಪರಿವರ್ತನ್‌ನ ECS ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು (HDFC Scholarship 2023), ವಿದ್ಯಾರ್ಥಿಗಳು 75,000 ರೂ. ವಿದ್ಯಾರ್ಥಿ ವೇತನ ಪಡೆಯುತ್ತಾರೆ. ಹಾಗೆಯೇ ಈ ಬಾರಿಯೂ ಇದೀಗ ಪರಿವರ್ತನ್‌ನ ECS ವಿದ್ಯಾರ್ಥಿವೇತನ 2022-23 ಗೆ (HDFC Bank Parivartan’s ECS Scholarship) ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಹ ವಿದ್ಯಾರ್ಥಿಗಳು (students) ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು 15 ಮಾರ್ಚ್‌ 2023 ಕೊನೆಯ ದಿನವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

 

ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು?
• ಸಮಾಜದ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಭಾವಂತ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
• 1 ನೇ ತರಗತಿಯಿಂದ ಯುಜಿ ಮತ್ತು ಪಿಜಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
• ಅಭ್ಯರ್ಥಿಗಳು ಕನಿಷ್ಠ 55 % ನೊಂದಿಗೆ ಹಿಂದಿನ ತರಗತಿ ಪಾಸ್‌ ಆಗಿರಬೇಕು.
• 2.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?
• ಮೊದಲು ಹೆಚ್‌ಡಿಎಫ್‌ಸಿ ಬ್ಯಾಂಕ್ ನ (HDFC bank) ಅಧಿಕೃತ ಸ್ಕಾಲರ್‌ಶಿಪ್‌ ಸೈಟ್‌ https://www.buddy4study.com/page/hdfc-bank-parivartans-ecs-scholarship ಗೆ ಭೇಟಿ ನೀಡಿ.
• ನಂತರ ಅಲ್ಲಿ ಕಾಣಿಸುವ Apply now ಆಯ್ಕೆಗೆ ಕ್ಲಿಕ್ ಮಾಡಿ. ಆಗ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಮೂರು ವಿಭಾಗಗಳು ಕಾಣಿಸುತ್ತದೆ.
• ನಂತರ ನೀವು ನೋಂದಾಯಿತ ಐಡಿ ಬಳಸಿ, ಕೇಳಿದ ಮಾಹಿತಿಗಳನ್ನು ನೀಡಿ, ಅರ್ಜಿ ಸಲ್ಲಿಸಿ.
• ಇಲ್ಲಿವರೆಗೂ ನೋಂದಣಿ ಮಾಡಿರದೇ ಇದ್ದರೆ, ನೋಂದಣಿ ಮಾಡಬಹುದು. ಅದಕ್ಕೆ ಅದರಲ್ಲಿ ನಿಮ್ಮ ಹೆಸರು, ಮೊಬೈಲ್‌ ನಂಬರ್ ಹಾಗೂ ಇ-ಮೇಲ್‌ ಐಡಿ ನೀಡಬೇಕು. ಹಾಗೂ ಪಾಸ್‌ವರ್ಡ್ ಹಾಕಿರಿ.
• ಇಷ್ಟೆ ನಿಮ್ಮನ್ನು ಇಸಿಎಸ್‌ ವಿದ್ಯಾರ್ಥಿವೇತನ ಅರ್ಜಿ ನಮೂನೆಯ ಪೇಜ್‌ಗೆ ಮರುನಿರ್ದೇಶಿಸಲಾಗುತ್ತದೆ.
• ನಂತರ Apply now ಮೇಲೆ ಕ್ಲಿಕ್‌ ಮಾಡಿ.
• ನಿಮ್ಮ ಹೆಸರು, ಶಾಲಾ ವಿವರ ಒಳಗೊಂಡಂತೆ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ
• ನಂತರ ನಿಮ್ಮ ಶೈಕ್ಷಣಿಕ ಅರ್ಹತೆಯ ದಾಖಲಾತಿಗಳನ್ನು ಅಪ್‌ಲೋಡ್‌ ಮಾಡಿ.
• ಭರ್ತಿ ಮಾಡಿರುವುದನ್ನು ನೋಡಲು Preview ಮೇಲೆ ಕ್ಲಿಕ್ ಮಾಡಿ, ತಿದ್ದುಪಡಿ ಇದ್ದಲ್ಲಿ ಮಾಡಬಹುದು.
• ಅರ್ಜಿ ಸಲ್ಲಿಕೆ ಸರಿಯಾಗಿದ್ದರೆ, ನೇರವಾಗಿ ನಿಮ್ಮ ಬ್ಯಾಂಕ್‌ಗೆ (bank) ಹಣ ವರ್ಗಾವಣೆ ಆಗುತ್ತದೆ.

Leave A Reply

Your email address will not be published.