Good Luck Dreams : ಈ ಕನಸುಗಳು ನಿಮಗೆ ಮುಂದೆ ಒಳ್ಳೆಯ ದಿನಗಳಿವೆ ಎಂಬ ಮುನ್ಸೂಚನೆಯನ್ನು ತೋರಿಸುತ್ತದೆ!

Good Luck Dreams: ನಿದ್ದೆಯಲ್ಲಿ ಕನಸು (dream) ಬೀಳುವುದು ಸಹಜವಾಗಿದೆ. ಆದರೆ ಕೆಲವು ಕನಸುಗಳು ಎಚ್ಚರವಾದ ನಂತರವೂ ಜ್ಞಾಪಕದಲ್ಲಿದ್ದರೆ, ಕೆಲವರಿಗೆ ಅರೆಬರೆ ಜ್ಞಾಪಕವಿರುತ್ತದೆ. ಒಂದು ಕನಸ್ಸಿನ ಅವಧಿ ಇಷ್ಟೇ ಎಂದು ಊಹಿಸಲು ಕೂಡ ಸಾಧ್ಯವಿಲ್ಲ. ಅದರಲ್ಲೂ ಕೆಲವರಿಗೆ ಸಾಮಾನ್ಯವಾಗಿ ಒಂದಲ್ಲ ಒಂದು ವಿಧದಲ್ಲಿ ಕನಸು ಬೀಳುತ್ತವೆ. ನಿಮ್ಮ ಕನಸಲ್ಲಿ ಸಹ ನಿಮ್ಮ ಒಳಿತು(Good Luck Dreams) ಕೆಡುಕುಗಳ ಉತ್ತರ ಕಂಡುಕೊಳ್ಳಬಹುದಾಗಿದೆ. ಹೌದು, ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿರುತ್ತದೆ. ನಾವು ಕನಸಿನಲ್ಲಿ ಕಾಣುವ ದೃಶ್ಯಗಳು ನೀಡುವ ವಿಶಿಷ್ಟ ಅರ್ಥ ಯಾವುದೆಂದು ನೋಡೋಣ.

 

ಹಸಿರು ಗಿಳಿ (parrot ):
ಕನಸಿನಲ್ಲಿ ಗಿಳಿಯನ್ನು ನೋಡುವುದು ಕೂಡಾ ಮಂಗಳಕರ. ವೃತ್ತಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ.

ಗುಲಾಬಿ ಹೂವು( Rose ):
ಕನಸಿನಲ್ಲಿ ಗುಲಾಬಿ ಹೂವನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಲಕ್ಷ್ಮಿ ದೇವಿಯ ಆಶೀರ್ವಾದದ ಸಂಕೇತವೂ ಹೌದು. ಇದು ಜೀವನದಲ್ಲಿ ಸಂತೋಷದ ಬಗ್ಗೆ ಹೇಳುತ್ತದೆ ಮತ್ತು ಶೀಘ್ರದಲ್ಲೇ ನಿಮ್ಮ ದೊಡ್ಡ ಆಸೆ ಈಡೇರುತ್ತದೆ.

ದೇವತೆ :
ಕನಸಿನಲ್ಲಿ ದೇವರು ಮತ್ತು ದೇವತೆಗಳನ್ನು ನೋಡುವುದು ಅತ್ಯಂತ ಮಂಗಳಕರ ಸಂಕೇತ. ಇದರರ್ಥ ಶೀಘ್ರದಲ್ಲೇ ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಸ್ವೀಕರಿಸುತ್ತೀರಿ . ಮುಂದಿನ ದಿನಗಳಲ್ಲಿ ಆರ್ಥಿಕ ಲಾಭವಾಗುವುದನ್ನು ಕೂಡಾ ಇದು ಸೂಚಿಸುತ್ತದೆ.

ಸೂರ್ಯನ ಕಿರಣ :
ಕನಸಿನಲ್ಲಿ ಪ್ರಕಾಶಮಾನವಾದ ಸೂರ್ಯನ ಬೆಳಕನ್ನು ನೋಡುವುದು ಪ್ರಗತಿ ಮತ್ತು ಸಮೃದ್ಧಿಯ ಸಂಕೇತ. ಉದ್ಯೋಗ ವೃತ್ತಿಪರರಿಗೆ ಒಳ್ಳೆಯ ಸುದ್ದಿ ಸಿಗುತ್ತದೆ ಮತ್ತು ಉದ್ಯೋಗದಲ್ಲಿ ಬಡ್ತಿಯ ಅವಕಾಶಗಳು ದೊರೆಯುತ್ತವೆ. ಒಂದಲ್ಲ ಒಂದು ಕಡೆಯಿಂದ ಹಣ ಸಿಗುತ್ತದೆ. ಜೀವನದಲ್ಲಿ ಪ್ರಗತಿಯ ಹೊಸ ದಾರಿಗಳು ತೆರೆದುಕೊಳ್ಳುತ್ತವೆ.

ಜೇನುನೊಣ:
ಕನಸಿನಲ್ಲಿ ಜೇನುನೊಣವನ್ನು ನೋಡುವುದು ಕೂಡಾ ಮಂಗಳಕರ. ಈ ಕನಸು ಅಪಾರ ಪ್ರಮಾಣದ ಆದಾಯವನ್ನು ಸೂಚಿಸುತ್ತದೆ. ವ್ಯಾಪಾರ ವ್ಯವಹಾರದಲ್ಲಿನ ಪ್ರಗತಿಯನ್ನು ಕೂಡಾ ಇದು ಸೂಚಿಸುತ್ತದೆ.

ಮಳೆ :
ಕನಸಿನಲ್ಲಿ ಜೋರಾಗಿ ಮಳೆ ಬರುವುದನ್ನ ನೋಡುವುದು ತುಂಬಾ ಶುಭ. ಇದರರ್ಥ ಮಹಾಲಕ್ಷ್ಮಿಯು ನಿಮಗೆ ದಯೆ ತೋರುತ್ತಾಳೆ ಮತ್ತು ಶೀಘ್ರದಲ್ಲೇ ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ದೊಡ್ಡ ಪ್ರಗತಿಯನ್ನು ಪಡೆಯಬಹುದು.

ಫಲ ತುಂಬಿದ ಮರ :
ಹಣ್ಣುಗಳಿಂದ ತುಂಬಿದ ಮರ ಕನಸಿನಲ್ಲಿ ಕಂಡರೆ ಅದು ಕೂಡಾ ಶುಭ ಫಲವನ್ನು ನೀಡುತ್ತದೆ. ಯಾವುದಾದರೂ ಮೂಲೆಯಿಂದ ಹಣ ಬರುತ್ತದೆ ಎನ್ನುವುದನ್ನು ಈ ಕನಸು ಸೂಚಿಸುತ್ತದೆ.

ವಿಮಾನ ಪ್ರಯಾಣ :
ನಿಮ್ಮ ಕನಸಿನಲ್ಲಿ ನೀವು ವಿಮಾನದಲ್ಲಿ ಪ್ರಯಾಣಿಸುತ್ತಿರುವುದನ್ನು ನೋಡಿದರೆ, ನಿಮ್ಮ ಮುಂಬರುವ ಸಮಯವು ತುಂಬಾ ಆಹ್ಲಾದಕರವಾಗಿರುತ್ತದೆ. ನೀವು ಉತ್ತಮ ಪ್ರಯಾಣಕ್ಕೆ ಹೋಗಬಹುದು. ಇದರೊಂದಿಗೆ ಯಶಸ್ಸಿನ ಮೆಟ್ಟಿಲು ಏರಿತ್ತೀರಿ ಎಂದರ್ಥ

ಕಪ್ಪು ಬಣ್ಣದ ಚೇಳು :
ಕನಸಿನಲ್ಲಿ ಕಪ್ಪು ಬಣ್ಣದ ಚೇಳನ್ನು ನೋಡುವುದು ತುಂಬಾ ಮಂಗಳಕರ. ಹೀಗಾದರೆ ಅರ್ಧಕ್ಕೆ ನಿಂತ ನಿಮ್ಮ ಕೆಲಸ ಪೂರ್ಣಗೊಳ್ಳಲಿದೆ ಎಂದರ್ಥ.

ಈ ಮೇಲಿನಂತೆ ನಿಮ್ಮ ಕನಸಿನಲ್ಲಿ ಅನುಭವ ಆದಲ್ಲಿ ಅವು ಶುಭ ಸಂಕೇತದ ಅರ್ಥವನ್ನು ನೀಡುತ್ತವೆ ಎಂದು ತಿಳಿಸಲಾಗುತ್ತದೆ.

Leave A Reply

Your email address will not be published.