Kerala Trans Couple : ದೇಶದ ಮೊದಲ ತೃತೀಯ ಲಿಂಗಿ ದಂಪತಿ ಮಗುವಿಗೆ ನಾಮಕರಣ! ಹೆಸರೇನು ಗೊತ್ತಾ?

Share the Article

Kerala Trans Couple: ಕೇರಳದ ಕೋಝಿಕ್ಕೋಡ್ನ ಉಮ್ಮಲತ್ತೂರ್ನ ತೃತೀಯಲಿಂಗಿ ದಂಪತಿ (Kerala Trans Couple) ಜಿಯಾ ಮತ್ತು ಜಹ್ಹಾದ್ ಮಗುವಿಗೆ ಜನ್ಮ ನೀಡಿದ್ದು, ಇದು ದೇಶದಲ್ಲೇ ಮೊದಲ ಪ್ರಕರಣವಾಗಿದೆ. ಎದುರಾದ ಹಲವು ಸಮಸ್ಯೆ, ತೊಡಕುಗಳನ್ನು ಈ ಜೋಡಿ ಜೊತೆಯಾಗಿ ಎದುರಿಸಿ, ಫೆ.8ರಂದು ಈ ದಂಪತಿ(couple) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಈ ಹೆಣ್ಣು ಮಗುವಿಗೆ ನಾಮಕರಣ ಮಾಡಿದ್ದಾರೆ.

ಸಮಾಜದಲ್ಲಿ ಮಂಗಳಮುಖಿಯರ ಜೀವನ ತುಂಬಾ ಕಷ್ಟಕರವಾದದ್ದು. ಅದೆಷ್ಟೋ ಸವಾಲು, ಕಷ್ಟ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಎಲ್ಲವನ್ನೂ ಮೆಟ್ಟಿನಿಂತು ಜೀವನ ನಡೆಸುವವರೂ ಇದ್ದಾರೆ. ಅಂತಹ ಸಾಲಿನಲ್ಲಿ ಕೇರಳದ (Kerala) ಜಿಯಾ ಮತ್ತು ಜಹ್ಹಾದ್ ದಂಪತಿಯೂ ಒಬ್ಬರು. ಹೌದು, ಈ ದಂಪತಿ ಬಂದಂತಹ ಕಷ್ಟಗಳ ಮೆಟ್ಟಿ ನಿಂತು, ತಮ್ಮ ಜೀವನ ರೂಪಿಸಿಕೊಂಡಿದ್ದಾರೆ.

ಜಹ್ಹಾದ್ ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾಗಿದ್ದು, ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದ ಜಿಯಾ (Jiya). ಇವರಿಬ್ಬರೂ ಮದುವೆಯಾಗಿದ್ದು, ಇತರ ದಂಪತಿಗಳ ಹಾಗೇ ಮಗುವಿನ ನಿರೀಕ್ಷೆಯಲ್ಲಿದ್ದವರಿಗೆ ಮಗುವೂ ಜನಿಸಿದೆ. ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹೆಣ್ಣು ಮಗು (girl child) ಜನಿಸಿದ್ದು, ಈ ದಂಪತಿ ತಂದೆ – ತಾಯಿಯಾಗಿದ್ದಾರೆ.

ಆ ವೇಳೆ ದಂಪತಿ ಮಗುವಿನ ಲಿಂಗ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದ್ದರು. ಇದೀಗ ಹೆಣ್ಣು ಮಗು ಎಂದು ತಿಳಿದುಬಂದಿದ್ದು, ದಂಪತಿ ಇದೀಗ ಮಗುವಿಗೆ ನಾಮಕರಣವೂ ಮಾಡಿದ್ದಾರೆ. ಮಗುವಿನ ಹೆಸರೇನು ಗೊತ್ತಾ? ಜಬಿಯಾ ಸಹದ್ (Zabiya Sahad) ಎಂದು ಹೆಣ್ಣುಮಗುವಿಗೆ ನಾಮಕರಣ ಮಾಡಿದ್ದಾರೆ. ಸದ್ಯ ದಂಪತಿ ಮಗು ಜನಿಸಿದ ಸಂತಸದ ಕ್ಷಣವನ್ನು ಆನಂದಿಸುತ್ತಿದ್ದಾರೆ.

Leave A Reply