ಸ್ವಂತ ಮನೆ ಹೊಂದಲು ಬಯಸುವವರಿಗೆ ಸಿಹಿ ಸುದ್ದಿ!

House : ನೀವು ಸ್ವಂತ ಮನೆ ಹೊಂದಲು ಯೋಜನೆ ರೂಪಿಸುತ್ತಿದ್ದರೆ ಇಲ್ಲಿದೆ ನಿಮಗೆ ಸಿಹಿಸುದ್ದಿ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು (BCWD) ವಸತಿ (House) ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆದರೆ ಕೆಲವು ನಿಬಂಧನೆಗಳಿವೆ. ಏನು? ಹಾಗೇ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

2022-23ನೇ ಸಾಲಿನ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ (Backward Classes Welfare Department) ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿ ಯೋಜನೆಯಡಿ ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರಿಗೆ, ಅಲೆಮಾರಿ ಮತ್ತು ವಸತಿ ರಹಿತರಿಗೆ ವಸತಿ ಸೌಲಭ್ಯವನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಸ್ವಂತ ಮನೆ ಹೊಂದಲು ಬಯಸುವ ಇವರುಗಳು ಅರ್ಜಿ (application) ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಆಯಾ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು ಅದನ್ನು ಭರ್ತಿ ಮಾಡಬೇಕು. ನಂತರ ಮಾರ್ಚ್ 20 ರ ಒಳಗೆ ಅರ್ಜಿ ಸಲ್ಲಿಸಬೇಕು.

ಏನೆಲ್ಲಾ ನಿಬಂಧನೆಗಳಿವೆ?
• ವಸತಿ ಸೌಲಭ್ಯವನ್ನು ಪಡೆಯಲು ಬಯಸುವವರು ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರು ಆಗಿರಬೇಕು.
• ಹಿಂದುಳಿದ ವರ್ಗಗಳ ಅರೆ ಅಲೆಮಾರಿ, ಅಲೆಮಾರಿ ಜನಾಂಗದ ಎಲ್ಲಾ ಜಾತಿಗಳಿಗೂ ಪ್ರಾತಿನಿಧ್ಯತೆಯನ್ನು ನೀಡಲಾಗುತ್ತದೆ. ಅಂದ್ರೆ ಈ ಸೌಲಭ್ಯ ದೊರಕುತ್ತದೆ.
• ಆದರೆ, ಅರ್ಜಿದಾರರು ಯಾವುದೇ ಬೇರೆ ಯೋಜನೆ, ಇಲಾಖೆ, ನಿಗಮಗಳಿಂದ ವಸತಿ ಸೌಲಭ್ಯವನ್ನು ಪಡೆದಿರಬಾರದು.
• ವಸತಿ ರಹಿತರು ಸ್ವಂತ ನಿವೇಶನವನ್ನು ಹೊಂದಿರಬೇಕು ಹಾಗೂ ನಿವೇಶನವು ಕುಟುಂಬದವರ ಹೆಸರಿನಲ್ಲಿ ನೊಂದಣಿ ಆಗಿರಬೇಕು.
• ನಿವೇಶನವನ್ನು ಕನಿಷ್ಠ 20 ವರ್ಷಗಳವರೆಗೆ ಪರಬಾರೆ ಮಾಡತಕ್ಕದ್ದಲ್ಲ.
• ಹಾಗೆಯೇ ಕುಟುಂಬದ ಒಟ್ಟು ವಾರ್ಷಿಕ ವರಮಾನ 2 ಲಕ್ಷ ರೂ.ಗಳ ಒಳಗಿರಬೇಕು.

ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಡಿ.ದೇವರಾಜ ಅರಸು (D. Devaraj arasu) ಭವನದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಳ್ಳಾರಿ (ballari) ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ. ಇಲ್ಲವೇ ದೂರವಾಣಿ ಸಂಖ್ಯೆ 08392-275751 ಗೆ ಕರೆ ಮಾಡಿ, ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

Leave A Reply

Your email address will not be published.