Extra Marital Affair : ಮದುವೆಯಾದ ಒಂದೇ ದಿನದಲ್ಲಿ ಗಂಡನ ಅನೈತಿಕ ಸಂಬಂಧ ಬಯಲು! ಬೆಂಗಳೂರು ಟ್ರಾಫಿಕ್ ಗಂಡನಿಗೆ ಎಸ್ಕೇಪ್ ಆಗಲು ದಾರಿ ಮಾಡಿಕೊಡ್ತು!!
Extra Marital Affair: ಉಪ್ಪು ತಿಂದವನು ನೀರು (water) ಕುಡಿಯಲೇ ಬೇಕು, ಎಷ್ಟೇ ದೊಡ್ಡ ಕಳ್ಳನಾದರೂ ಒಂದು ಸಲ ಸಿಕ್ಕಿ ಹಾಕಿಕೊಳ್ಳಲೇ ಬೇಕು ಎಂಬುದನ್ನು ನಾವು ಕೇಳಿದ್ದೇವೆ. ಹಾಗೆಯೇ ಇಲ್ಲೊಬ್ಬ ತಪ್ಪು ಮಾಡಿ ತನ್ನ ಹೆಂಡತಿ ಕೈಗೆ ಅತೀ ಬೇಗನೆ ಸಿಕ್ಕಿ ಹಾಕಿಕೊಂಡಿದ್ದಾನೆ ಎಂದರೆ ನೀವು ನಂಬುತ್ತೀರಾ. ಫಜೀತಿ ಎಂದರೆ ಬೆಂಗಳೂರು ನಗರದ ಮಹದೇವಪುರ ಟೆಕ್ಕಾರಿಡಾರ್ನಲ್ಲಿ ಕಾರು ಟ್ರಾಫಿಕ್ನಲ್ಲಿ(traffic) ಸಿಲುಕಿಕೊಂಡು ವರನು ಕಾರಿನ ಬಾಗಿಲು ತೆರೆದು ಪರಾರಿಯಾಗಿದ್ದಾನೆ.
ಫೆಬ್ರವರಿ 16ರಂದು ಈ ಘಟನೆ ನಡೆದಿದ್ದು, ವರನು ಗೋವಾದಲ್ಲಿ ಕೆಲಸ ಮಾಡುತ್ತಿದ್ದಾಗ ಆತನಿಗೆ ಅನೈತಿಕ ಸಂಬಂಧವಿತ್ತು ಎಂದು ಹೇಳಲಾಗಿದೆ. ಈ ವಿಷಯ ವಧುವಿಗೂ ತಿಳಿದಿತ್ತು. ಫೆಬ್ರವರಿ 15ರಂದು ದಂಪತಿಗಳಿಗೆ ವಿವಾಹವಾಗಿದ್ದು. ಅದರ ಮರು ದಿನವೇ ಅನೈತಿಕ ಸಂಬಂಧದ ಬಗ್ಗೆ ತಾನು ಮದುವೆಯಾದ ಹುಡುಗಿಗೆ ತಿಳಿದಿದೆ ಎಂದು ಗೊತ್ತಾಗಿ ಹುಡುಗ ಪರಾರಿಯಾಗಿದ್ದಾನೆ.
ಸದ್ಯ ದಂಪತಿಗಳು ತಮ್ಮ ಮದುವೆಯಾದ ಮರುದಿನ ಚರ್ಚ್ನಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂತಿರುಗುವ ಸಂದರ್ಭದಲ್ಲಿ ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇದೇ ಸಮಯವನ್ನು ಬಳಸಿಕೊಂಡ ವರ ಕಾರಿನ ಬಾಗಿಲು ತೆರೆದು ಓಡಿ ಹೋಗಿದ್ದಾನೆ.
ಓಡಿ ಹೋದ ಪತಿಯನ್ನು ಕಂಡು ಹೆಂಡತಿ ಕೂಡಾ ಅವನನ್ನು ಹಿಂಬಾಲಿಸಲು ಪ್ರಯತ್ನಿಸಿದಳು. ಆದರೆ ಆತನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಬಳಿಕ ಮಾರ್ಚ್ 5ರಂದು ಆ ಮಹಿಳೆ ಪೋಲಿಸರಿಗೆ ದೂರು ನೀಡಿದ್ದು, ಗಂಡ ಅನೈತಿಕ ಸಂಬಂಧ ಹೊಂದಿದ್ದ ಹುಡುಗಿ, ಅವರಿಬ್ಬರು ಆತ್ಮೀಯವಾಗಿ ಇರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಭಯಗೊಂಡ ವರ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
22 ವರ್ಷ ವಯಸ್ಸಿನ ನವ ವಧುವಿನ ಪ್ರಕಾರ,
ಮದುವೆಯ ಮುಂಚೆಯೇ ಈ ಸಂಬಂಧದ ಬಗ್ಗೆ ಜಾರ್ಜ್ ನನಗೆ ತಿಳಿಸಿದ್ದರು. ಅಕ್ರಮ ಸಂಬಂಧವನ್ನು(Extra Marital Affair) ಬಿಟ್ಟುಬಿಡುವುದಾಗಿ ನನಗೆ ಅವರು ಭರವಸೆ ನೀಡಿದ್ದರಿಂದ ನಾನು ಆತನನ್ನು ಮದುವೆಯಾಗಲು ಒಪ್ಪುಕೊಂಡಿದ್ದು ಎಂದು ಜಾರ್ಜ್ ಪತ್ನಿ ಹೇಳಿಕೆ ನೀಡಿದ್ದಾರೆ.
ಇನ್ನು ಅನೈತಿಕ ಸಂಬಂಧವನ್ನು ಹೊಂದಿದ್ದ ಹುಡುಗಿ ಜಾರ್ಜ್ಗೆ ಬ್ಲಾಕ್ಮೇಲ್ ಮಾಡಲು ಪ್ರಾರಂಭಿಸಿದ ನಂತರ ಅವರು ಹೆದರಿ, ಓಡಿ ಹೋಗಲು ನಿರ್ಧರಿಸಿದ್ದು, ಆಕೆ ಬ್ಲಾಕ್ಮೇಲ್ಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಲು ಕೂಡ ಪ್ರಯತ್ನಿಸಿದರು. ಅವರು ಎಲ್ಲೇ ಇದ್ದರೂ ಸುರಕ್ಷಿತವಾಗಿರುತ್ತಾರೆ, ಶೀರ್ಘದಲ್ಲೇ ಅವರನ್ನು ನನ್ನ ಬಳಿ ಬರುತ್ತಾರೆ ಎಂಬ ಭರವಸೆ ಇದೆ ಎಂದು ಜಾರ್ಜ್ ಪತ್ನಿ ಹೇಳಿದ್ದಾರೆ.
ಸದ್ಯ ಪೊಲೀಸ್ (police ) ಮಾಹಿತಿ( information ) ಪ್ರಕಾರ ಎರಡು ವಾರ ಕಳೆದರೂ ವರ ಇನ್ನೂ ಪತ್ತೆಯಾಗಿಲ್ಲ ಎಂದು ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿ :ಭಾರೀ ಡಿಸ್ಕೌಂಟ್ನಲ್ಲಿ ಲಭ್ಯವಾಗುತ್ತಿದೆ ಆ್ಯಪಲ್ ವಾಚ್ ಸಿರೀಸ್ 8!! ನಿಮ್ಮ ಊಹೆಗೂ ನಿಲುಕದಷ್ಟು