OK : ಓಕೆ ಎನ್ನುವ ಪದದ ಅರ್ಥ ನಿಮಗೆ ಗೊತ್ತಿದೆಯೇ? ಇಲ್ಲಿದೆ ಇದಕ್ಕೊಂದು ಮಹತ್ವದ ಅರ್ಥ!
OK meaning : ನಾವು ದಿನನಿತ್ಯ ಮಾತನಾಡುವಾಗ ಹಲವಾರು ಪದಗಳನ್ನು ಬಳಸುತ್ತೇವೆ. ‘Hii’, ‘bi’ ಹೀಗೇ ಪ್ರತೀದಿನ ಸಾಕಷ್ಟು ಪದಗಳನ್ನು ಬಳಸಿ ಮಾತನಾಡುತ್ತೇವೆ. ಆದರೆ ನೀವು ಎಂದಾದರೂ ಯೋಚಿಸಿದ್ದೀರಾ? ಇಂತಹ ಪದಗಳು ಎಲ್ಲಿಂದ ಬಂದಿರಬಹುದು? ಯಾರು ಕಂಡುಹಿಡಿದಿರಬಹುದು? ಮೊದಲು ಯಾವ ಭಾಷೆಯಲ್ಲಿತ್ತು? ಬಹುಶಃ ಈ ಪ್ರಶ್ನೆಗಳು ಯಾರಿಗೂ ಬಂದಿರಲಿಕ್ಕಿಲ್ಲ. ಆದರೆ ನಿಮಗೆ OK ಪದದ ಬಗ್ಗೆ ಮಾಹಿತಿ ನೀಡುತ್ತೇವೆ.
OK ಎಂಬುದನ್ನು ದಿನದಲ್ಲಿ ಅದೆಷ್ಟು ಬಾರಿ ಬಳಸುತ್ತೇವೋ, ಪ್ರತಿಬಾರಿ ಮಾತನಾಡುವಾಗ ಈ ಪದ ಹೇಳೇಹೇಳುತ್ತೇವೆ. ಆದರೆ ಈ ಪದದ ಅರ್ಥವೇನು (Ok meaning) ? ಎಲ್ಲಿಂದ ಬಂದಿದ್ದು ಗೊತ್ತಾ? ಇಲ್ಲಾ ಅಲ್ವಾ?? ಬನ್ನಿ ಇದರ ಇಂಟೆರೆಸ್ಟಿಂಗ್ ಮಾಹಿತಿ ತಿಳಿಯೋಣ.
ಈ ok ಪದವನ್ನು ಪ್ರಾಚೀನ ರೋಮನ್ (Roman) ಸಂಸ್ಕೃತಿಯಲ್ಲಿ ಬಳಸುತ್ತಿದ್ದರು ಎನ್ನಲಾಗಿದೆ. ನಮಗೆ ಗೊತ್ತಿರುವ ಹಾಗೆ ಓಕೆ ಅಂದ್ರೆ ಸರಿ, ಆಯ್ತು ಎಂದರ್ಥ. ಆದ್ರೆ ರೋಮನ್ ಭಾಷೆಯಲ್ಲಿ (Roman language) ಮೊದಲು ಈ ಪದವನ್ನು ಏನೆನ್ನುತ್ತಿದ್ದರು? ರೋಮನ್ ಭಾಷೆಯಲ್ಲಿ ok ಅಂದ್ರೆ ಒಲ್ಲಾ ಕೊಲ್ಲ ಎಂದರ್ಥ. ಹಾಗಾದ್ರೆ ಒಲ್ಲಾ ಕೊಲ್ಲ ಅಂದ್ರೇನು? ಹಾಗೆಂದರೆ, ಸರಿ, ಆಗಬಹುದು ಎಂದೇ ಅರ್ಥ.
ಒಲ್ಲಾ ಕೊಲ್ಲ ಈ ಮೊದಲು ಬಳಕೆಯಲ್ಲಿದ್ದ ಪದ. ಆನಂತರ ಅದು ಓಕೆ ಎಂದಾಯಿತು. ಜನರ ಬಾಯಿಂದ ಬಾಯಿಗೆ ಮಾತು ಹೋದ ಹಾಗೇ ಪದ ಉಚ್ಚಾರ ಬದಲಾಗಿ ಓಕೆ ಎಂದಾಗಿದೆ ಎಂದು ಹೇಳಲಾಗುತ್ತದೆ. ಇದೀಗ ಎಲ್ಲಾರು ಓಕೆ ಎಂಬ ಪದವನ್ನೇ ಬಳಸುತ್ತಾರೆ.
/ˌoʊˈkeɪ ಇದು ಗ್ರೀಕ್ ಭಾಷೆಯಲ್ಲಿ (Greek language) ಬಳಸುವ ಓಕೆ ಚಿಹ್ನೆ. ಆಂಗ್ಲ ಭಾಷೆಯಲ್ಲಿ (English language) ಎರಡಕ್ಷರದ ‘ಓಕೆ’ ತುಂಬಾ ಸುಲಭವಾಗಿದೆ. ಆದರೆ ಗ್ರೀಕ್ ಅಕ್ಷರದಲ್ಲಿ (Greek words) ಓಕೆ ವಿಭಿನ್ನವಾಗಿದೆ. ಒಂದು ಪದಗಳು ವಿವಿಧ ಭಾಷೆಯಲ್ಲಿ ವಿವಿಧ ರೀತಿಯಲ್ಲಿರುತ್ತದೆ. ನೀವು ಯಾವತ್ತಾದರೂ ಓಕೆ ಎಂದು ಹೇಳುವಾಗ ಈ ವಿಚಾರ ನೆನಪಿರಲಿ. ತಿಳಿದುಕೊಂಡಿದ್ದರೆ ಒಳ್ಳೆಯದು. ಯಾರಾದರೂ ಪ್ರಶ್ನೆ ಕೇಳುವಾಗ ಹೇಳಬಹುದು, ಇಲ್ಲವೇ ನಾನೇ ಇನ್ನೋಬ್ಬರಿಗೆ ಪ್ರಶ್ನೆ ಮಾಡಿ, ಅವರಿಗೂ ಇದರ ಬಗ್ಗೆ ಮಾಹಿತಿ ನೀಡಬಹುದು. ಜ್ಞಾನ ಹೆಚ್ಚುತ್ತದೆ.