Hyundai : ನಿಮಗೇನಾದರೂ ಕಡಿಮೆ ಬೆಲೆಯ ಹುಂಡೈ ಕಾರು ಖರೀದಿಸಲು ಆಸಕ್ತಿ ಇದ್ದರೆ ನಿಮಗಿದೋ ಒಂದು ಗುಡ್‌ನ್ಯೂಸ್!
Hyundai : ಜಾಗತಿಕ ಮಾರುಕಟ್ಟೆಯಲ್ಲಿ ಹ್ಯುಂಡೈ (Hyundai) ಕಾರುಗಳನ್ನು ಪ್ರತಿಯೊಬ್ಬ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಇದೀಗ ಗ್ರಾಹಕರಿಗೆ ಹ್ಯುಂಡೈ ಕಡೆಯಿಂದ ಡಿಸ್ಕೌಂಟ್ಆಫರ್ ನ್ನು ನೀಡಲಾಗುತ್ತಿದೆ. ಬನ್ನಿ ಸಂಪೂರ್ಣ ಮಾಹಿತಿ ಇಲ್ಲಿದೆ. ಮೊದಲಿಗೆ ಹ್ಯುಂಡೈ ಔರಾ ( Hyundai Aura )ಡಿಸ್ಕೌಂಟ್ಆಫರ್ ( discount offers) ಬಗ್ಗೆ ತಿಳಿಯೋಣ.
ಮುಖ್ಯವಾಗಿ ಹ್ಯುಂಡೈ ಔರಾ, ಇ, ಎಸ್, ಎಸ್ಎಕ್ಸ್ ಹಾಗೂ ಎಸ್ಎಕ್ಸ್(ಒ) ಎಂಬ ನಾಲ್ಕು ರೂಪಾಂತರಗಳು, ಸ್ಟಾರಿ ನೈಟ್ ಹಾಗೂ ಆಕ್ವಾ ಟೀಲ್ ಸೇರಿದಂತೆ ಆರು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ.
ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 83 PS ಪವರ್ ಹಾಗೂ 114 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಅಥವಾ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿ ಲಭ್ಯವಾಗಲಿದೆ.
ಸದ್ಯ CNG ಮೋಡ್ ನಲ್ಲಿ 69 PS ಪವರ್, 95.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್ ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಏರ್ ಬಾಗ್ಸ್, TPMS (ಟೈರ್ ಪ್ರೆಜರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಸದ್ಯ CNG ಆವೃತ್ತಿಯು ರೂ.20,000 ನಗದು ರಿಯಾಯಿತಿ, ರೂ.10,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.3,000 ಕಾರ್ಪೊರೇಟ್ ರಿಯಾಯಿತಿ ಪಡೆದುಕೊಂಡಿದೆ. ಪೆಟ್ರೋಲ್ ಆವೃತ್ತಿ ರೂ.10,000 ನಗದು ರಿಯಾಯಿತಿ, ರೂ.10,000 ಎಕ್ಸ್ಚೇಂಜ್ ಬೋನಸ್ ಮತ್ತು ರೂ.3,000 ಕಾರ್ಪೊರೇಟ್ ರಿಯಾಯಿತಿ ಹೊಂದಿದೆ. ಈ ಕಾರು, ರೂ.6.30 ಲಕ್ಷ. ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಇನ್ನು ಹ್ಯುಂಡೈ i20 ಮ್ಯಾಗ್ನಾ 21.0 kmpl ಮೈಲೇಜ್ ನೀಡಲಿದ್ದು, ಪೋಲಾರ್ ವೈಟ್, ಟೈಫೂನ್ ಸಿಲ್ವರ್ ಸೇರಿದಂತೆ ಎಂಟು ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ. 1197 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹೊಂದಿದ್ದು, 81.86 bhp ಪವರ್ ಹಾಗೂ 114.74 nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಹ್ಯುಂಡೈ i20 ಸ್ಪೋರ್ಟ್ಜ್ ಕೂಡ 21.0 kmpl ಇಂಧನ ದಕ್ಷತೆಯನ್ನು ಪಡೆದಿದೆ. ಎಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ.
ಹ್ಯುಂಡೈ i20 ಮ್ಯಾಗ್ನಾ ಹಾಗೂ ಸ್ಪೋರ್ಟ್ಜ್ ರೂಪಾಂತರಗಳು ರಿಯಾಯಿತಿ ಇಂತಿವೆ:
ರೂ.10,000 ನಗದು ರಿಯಾಯಿತಿ, ರೂ.10,000 ಎಕ್ಸ್ಚೇಂಜ್ ಬೋನಸ್ ಮತ್ತು ರೂ.3,000 ಕಾರ್ಪೊರೇಟ್ ರಿಯಾಯಿತಿಯನ್ನು ಪಡೆದಿದೆ.
ಇನ್ನು ಹ್ಯುಂಡೈ ಗ್ರಾಂಡ್ i10 ನಿಯೋಸ್, ಪೆಟ್ರೋಲ್, CNG ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. 1.2-ಲೀಟರ್ ಪೆಟ್ರೋಲ್ ಎಂಜಿನ್ 83 PS ಗರಿಷ್ಠ ಪವರ್ ಹಾಗೂ 114 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5 ಸ್ವೀಡ್ ಮ್ಯಾನುವಲ್ ಅಥವಾ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಹೊಂದಿದೆ. CNG ಮೋಡ್ ನಲ್ಲಿ 69 PS ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆರು ಏರ್ ಬ್ಯಾಗ್ಸ್ ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ.
ಇನ್ನು ಹ್ಯುಂಡೈ ಗ್ರಾಂಡ್ i10 ನಿಯೋಸ್ ರಿಯಾಯಿತಿ ಇಂತಿವೆ :
ರೂ.10,000 ನಗದು ರಿಯಾಯಿತಿ, ರೂ.3,000 ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿದೆ. ಹ್ಯುಂಡೈ i20 ಮ್ಯಾಗ್ನಾ ರೂ.7.19 ಲಕ್ಷ, ಹ್ಯುಂಡೈ i20 ರೂ.8.09 ಲಕ್ಷ ಹಾಗೂ i10 ನಿಯೋಸ್ ರೂ.5.68 – 8.46 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ದೇಶೀಯ ಮಾರುಕಟ್ಟೆಯಲ್ಲಿ ಕೆಲವೇ ದಿನಗಳ ಹಿಂದೆ ಬಿಡುಗಡೆಯಾದ ವೆರ್ನಾ ಕಾರಿನ ಬುಕಿಂಗ್ ಅನ್ನು ಮಾರ್ಚ್ 21ರಂದು ಆರಂಭವಾಗಲಿದ್ದು, ಅದೇ ವೇಳೆ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅಲ್ಕಾಜರ್ ಎಸ್‌ಯುವಿಯ ಬುಕಿಂಗ್ ಸಹ ಶುರುವಾಗಲಿದೆ ಎಂದು ಮಾಹಿತಿ ನೀಡಲಾಗಿದೆ.
ಆದರೆ ಹ್ಯುಂಡೈ ಕಂಪನಿಯು ಇನ್ನುಳಿದ ತನ್ನ ಪ್ರಮುಖ ಕಾರುಗಳಾದ i20 N ಲೈನ್, ವೆನ್ಯೂ, ಕ್ರೆಟಾ, ಟಕ್ಸನ್ ಹಾಗೂ Ioniq 5 ಕಾರುಗಳ ಮೇಲೆ ಯಾವುದೇ ರಿಯಾಯಿತಿ ನೀಡಿಲ್ಲ.
ಇದನ್ನೂ ಓದಿ :Top Ev Sales : ದಾಖಲೆಯ ಸೃಷ್ಟಿ ಮಾಡಿದ ಓಲಾ ಸ್ಕೂಟರ್!!!