Supplementary : ಎಚ್ಚರ! ಈ ಸಪ್ಲಿಮೆಂಟ್‌ಗಳನ್ನು ಅಪ್ಪಿತಪ್ಪಿಯೂ ಸೇವಿಸೋ ಪ್ರಯತ್ನ ಮಾಡಬೇಡಿ!

Supplementary: ಆರೋಗ್ಯವೇ ಭಾಗ್ಯ ಎಂಬಂತೆ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಲು ಮಾಡುವ ಹರಸಾಹಸ ಅಷ್ಟಿಷ್ಟಲ್ಲ. ಇಂದಿನ ಒತ್ತಡ ಯುತ ಜೀವನ ಶೈಲಿ, ಜಂಕ್ ಫುಡ್ ಸೇವನೆ, ನಿದ್ರಾಹೀನತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿದೆ. ದೇಹಕ್ಕೆ ಪೌಷ್ಟಿಕಾಂಶ ಅತ್ಯಗತ್ಯವಾಗಿದ್ದು, ಹೀಗಾಗಿ, ಅನೇಕ ಮಂದಿ ವೈದ್ಯರ ಸಲಹೆ ಪಡೆಯದೆ ಪೌಷ್ಟಿಕಾಂಶದ ಕೊರತೆಗೆ ಸಪ್ಲಿಮೆಂಟರಿ (Supplementary)ತೆಗೆದುಕೊಳ್ಳುವ ಅಭ್ಯಾಸ ರೂಡಿಸಿಕೊಳ್ಳುತ್ತಾರೆ.

ಕೆಲವೊಮ್ಮೆ ವೈದ್ಯರು (Doctor) ಕೂಡ ಸಪ್ಲಿಮೆಂಟರಿ (Supplementary) ಮಾತ್ರೆಗಳನ್ನು ಸೇವಿಸಲು ಸಲಹೆ ನೀಡಬಹುದು. ಆದರೆ, ಅತಿಯಾದರೆ ಅಮೃತವೂ ವಿಷವೇ ಎಂಬಂತೆ ಈ ಮಾತ್ರೆಗಳನ್ನು ಸೇವಿಸುವುದರಿಂದ ದೇಹದ ಮೇಲೆ ಅಡ್ಡ ಪರಿಣಾಮಗಳು( Health Problems)ಉಂಟಾಗುವುದಲ್ಲದೆ ಕೆಲವರಿಗೆ ಈ ಮಾತ್ರೆಗಳ (Tablets )ಸೇವನೆ ಚಟವಾಗಿ ದಿನಕ್ಕೆ ಮೂರು ನಾಲ್ಕು ಮಾತ್ರೆ ಸೇವಿಸುವ ಸಾಧ್ಯತೆಗಳಿದ್ದು, ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಯಾವುದೆಲ್ಲ ಸಪ್ಲಿಮೆಂಟರಿಯನ್ನು ಸೇವನೆ ಮಾಡಿರುವುದು ಉತ್ತಮ ಎಂಬ ಮಾಹಿತಿ ನಿಮಗಾಗಿ.

ಈ ಸಪ್ಲಿಮೆಂಟರಿಯನ್ನು ಜೊತೆಯಾಗಿ ಸೇವನೆ ಮಾಡದಿರುವುದು ಉತ್ತಮ.
ಗ್ರೀನ್ ಟೀ ಮತ್ತು ಐರನ್ :
ಗ್ರೀನ್ ಟೀ (Green Tea)ಉರಿಯೂತದ ಸಂಯುಕ್ತಗಳು ಕಂಡುಬರುತ್ತವೆ. ಇದರ ಜೊತೆಗೆ, ಗ್ರೀನ್ ಟೀ ಸೇವನೆಯಿಂದ ಉರಿಯೂತ ಮತ್ತು ಕರುಳಿನ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು. ಗ್ರೀನ್ ಟೀ ಹಾಗೂ ಐರನ್( Iron) ನಮ್ಮ ದೇಹಕ್ಕೆ ಹೆಚ್ಚಿನ ಅನುಕೂಲ ಉಂಟುಮಾಡಿದರು ಕೂಡ ಈ ಎರಡು ಪೂರಕಗಳನ್ನು ಎಂದಿಗೂ ಒಟ್ಟಿಗೆ ಸೇವನೆ ಮಾಡೊದು ಒಳ್ಳೆಯದಲ್ಲ. ದೇಹದಲ್ಲಿ ಹಿಮೋಗ್ಲೋಬಿನ್ ತಯಾರಿಸುವ ಕೆಲಸವನ್ನು ಕಬ್ಬಿಣ ಮಾಡುತ್ತಿದ್ದು, ಗ್ರೀನ್ ಟೀ ಹಾಗೂ ಐರನ್ ಜೊತೆಯಾಗಿ ಸೇವಿಸಿದರೆ ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾಗುತ್ತದೆ.

ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ 12 :
ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಲ್ಲಿ ಫೋಲಿಕ್ ಆಮ್ಲ ಕೂಡ ಒಂದಾಗಿದ್ದು, ಫೋಲಿಕ್ ಆಮ್ಲವನ್ನು ವಿಟಮಿನ್-ಬಿ ಎನ್ನಲಾಗುತ್ತದೆ. ಫೋಲಿಕ್ ಆಮ್ಲ ಕೂಡ ಒಂದು ರೀತಿಯ ವಿಟಮಿನ್ ಆಗಿದ್ದು, ಫೋಲಿಕ್ ಆಮ್ಲ ಗರ್ಭಾವಸ್ಥೆಯಲ್ಲಿ ಮಗುವಿನ ಸರಿಯಾದ ಬೆಳವಣಿಗೆಗೆ ಅತ್ಯವಶ್ಯಕವಾಗಿದೆ. ವಿಟಮಿನ್ ಬಿ 12 ಕೊರತೆಯಿಂದಾಗಿ ಅನೇಕ ರೋಗಗಳು ಹೆಚ್ಚುವ ಸಂಭವ ಕೂಡ ಇದೆ. ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ 12 ಇವೆರಡನ್ನು ಒಟ್ಟಿಗೆ ಸೇವಿಸಬಾರದು. ಇದರಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಈ ಎರಡೂ ಸಪ್ಲಿಮೆಂಟ್ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ.

ವಿಟಮಿನ್ ಬಿ 12 (Vitamin B12) ಮತ್ತು ವಿಟಮಿನ್ ಸಿ (Vitamin C) :
ವಿಟಮಿನ್ ಬಿ 12 ದೇಹದ ನರ ಕೋಶಗಳು ಮತ್ತು ರಕ್ತ ಕಣಗಳನ್ನು ಆರೋಗ್ಯಕರವಾಗಿಡಲು ಸಹಕಾರಿಯಾಗಿದೆ. ಇದು ಡಿಎನ್‌ಎ (DNA ) ತಯಾರಿಸಲು ಕೂಡ ಸಹಾಯ ಮಾಡುತ್ತದೆ. ದೇಹದಲ್ಲಿ ವಿಟಮಿನ್ ಬಿ 12 ಉತ್ಪಾದನೆಯಾಗದು. ಹೀಗಾಗಿ, ಆಹಾರದ ಮುಖ್ಣತ್ರ ಪಡೆಯಬೇಕಾಗುತ್ತದೆ. ಇಲ್ಲವೆ ವಿಟಮಿನ್ ಬಿ 12 ಮಾತ್ರೆಗಳನ್ನು ಸೇವನೆ ಮಾಡಬೇಕಾಗುತ್ತದೆ. ವಿಟಮಿನ್ ಸಿ ನಮ್ಮ ದೇಹಕ್ಕೆ ಬಹಳ ಅತ್ಯಗತ್ಯವಾಗಿದ್ದು, ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಕಾರಿಯಾಗಿದೆ. ವಿಟಮಿನ್ ಬಿ 12 ಹಾಗೂ ವಿಟಮಿನ್ ಸಿ ನಮ್ಮ ದೇಹಕ್ಕೆ ಅತ್ಯಗತ್ಯವಾಗಿದ್ದು, ಈ ಎರಡೂ ಸಪ್ಲಿಮೆಂಟರಿಯನ್ನು ಜೊತೆಯಾಗಿ ಸೇವಿಸಿದರೆ ಅನೇಕ ಗಂಭೀರ ಸಮಸ್ಯೆಗಳನ್ನು ಉಂಟು ಮಾಡಬಹುದು. ವಿಟಮಿನ್ ಸಿ ಜೊತೆ ವಿಟಮಿನ್ ಬಿ 12 ಸೇವನೆ ಮಾಡಿದ್ದಲ್ಲಿ ಏನು ಪ್ರಯೋಜನ ಉಂಟಾಗದು.

ತಾಮ್ರ ಮತ್ತು ಸತು ಸಪ್ಲಿಮೆಂಟ್ :
ನಮ್ಮ ದೇಹಕ್ಕೆ ತಾಮ್ರ ಹಾಗೂ ಸತು ಅಗತ್ಯವಿರುವ ಪೋಷಕಾಂಶಗಳಾಗಿದೆ. ನರಮಂಡಲದ ಆರೋಗ್ಯ (Health) ಕಾಪಾಡಲು ತಾಮ್ರ ನೆರವಾಗುತ್ತದೆ. ಮೆದುಳಿನ ಬೆಳವಣಿಗೆಗೆ ತಾಮ್ರ ಸಹಕಾರಿಯಾಗಿದೆ. ದೇಹಕ್ಕೆ ಅಗತ್ಯವಾದ ತಾಮ್ರದ ಅಂಶವನ್ನು ಆಹಾರದ (Food)ಮೂಲಕವೇ ದೇಹಕ್ಕೆ ಸೇರುವಂತೆ ಹೆಚ್ಚಿನವರು ಗಮನ ನೀಡುತ್ತಾರೆ. ತಾಮ್ರವನ್ನು ಹೆಚ್ಚಾಗಿ ಸೇವನೆ ಮಾಡಿದರೆ ಸತುವಿನ ಕೊರತೆ ಉಂಟಾಗುವ ಸಾಧ್ಯತೆಗಳಿವೆ. ದೇಹದಲ್ಲಿ ಸತುವಿನ ಕೊರತೆ ಉಂಟಾದರೆ ರೋಗನಿರೋಧಕ ಶಕ್ತಿ, ಆಯಾಸ ಮತ್ತು ತೂಕ ನಷ್ಟ ಉಂಟಾಗುತ್ತದೆ.ಈ ಎರಡೂ ಪೂರಕಗಳನ್ನು ಏಕಕಾಲದಲ್ಲಿ ಸೇವಿಸಿದರೆ, ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.

Leave A Reply

Your email address will not be published.