ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್ : ಎರಡನೇ ಹಂತದ ಬೆಳೆ ವಿಮೆ ಬಿಡುಗಡೆ!
Crop insurance: ರಾಜ್ಯ ಸರ್ಕಾರವು ರೈತರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದ್ದು, ಈ ಮೂಲಕ ಹಲವು ಸಹಾಯಗಳನ್ನು ಮಾಡುತ್ತಾ ಬಂದಿದೆ. ಅದರಂತೆ ಬೆಳೆಹಾನಿಯಿಂದ ನಷ್ಟ ಉಂಟಾದ ರೈತರಿಗೆ ಬೆಳೆ ಪರಿಹಾರವನ್ನು (Crop insurance) ಘೋಷಿಸಿದೆ.
ಈ ಕುರಿತು ಮಹತ್ವದ ನಿರ್ಧಾರವನ್ನು ಕೈಗೊಂಡಿರುವ ಸರ್ಕಾರ, ಎರಡನೇ ಹಂತದ ಬೆಳೆ ವಿಮೆ ಬಿಡುಗಡೆಗೊಳಿಸಲಿದೆ. 10 ಜಿಲ್ಲೆಗಳ 12 ಲಕ್ಷಕ್ಕೂ ಅಧಿಕ ರೈತರಿಗೆ 1532 ಕೋಟಿ ರೂ.ಗಳ ಹಣ ವಿತರಿಸಲು ಅನುಮೋದನೆ ನೀಡಿದೆ. ಈ ಕುರಿತು ಉಸ್ತುವಾರಿ ಸಚಿವ ಬಿಸಿ ಪಾಟೀಲ್ ಮಾಹಿತಿ ತಿಳಿಸಿದ್ದು, ಬೆಳೆ ಹಾನಿಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡಲು ಶ್ರಮ ವಹಿಸಿದ್ದಾರೆ. ಜಿಲ್ಲೆಯಲ್ಲಿ 223.30 ಕೋಟಿ ಬೆಳೆಹಾನಿ ಪರಿಹಾರ ವಿತರಿಸಲಾಗಿದೆ ಎಂದು ಹೇಳಿದ್ದಾರೆ.
ಈ ಅನುಮೋದನೆ ಪಡೆಯಲು ರೈತರು, ಕೂಡಲೇ ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಬೆಳೆಪರಿಹಾರ ಲಿಂಕ್ ಮಾಡಿಕೊಳ್ಳಬೇಕು. ಇನ್ನಿತರ ತಿದ್ದುಪಡಿ ಇದ್ದರೆ ಸಂಬಂಧಿಸಿದ ಅಧಿಕಾರಿಗಳು ಗಮನಕ್ಕೆ ತರಬೇಕು ಜೊತೆಗೆ ಸಲ್ಲಿಸಲಾದ ದಾಖಲೆಗಳು ಪಾಲಿಸಬೇಕಾದ ನಿಯಮಗಳು ಸರಿಯಾಗಿದೆಯೇ ಎಂದು ರೈತರು ಗಮನವಹಿಸಬೇಕು.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಅಥವಾ ಇಲ್ಲ ಎಂಬುದನ್ನು ಚೆಕ್ ಮಾಡುವ ಲಿಂಕ್ :
https://www.samrakshane.karnataka.gov.in/PublicView/FindCutOff.aspx
ಬೆಳೆ ಪರಿಹಾರದ ಮಾಹಿತಿಗೆ :
https://www.samrakshane.karnataka.gov.in/PublicView/FindCutOff.aspx