Canara Bank : ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗವಕಾಶ ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ!!!
Canara Bank Recruitment 2023 : ಕೆನರಾ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಬೆಂಗಳೂರು (Bangalore) ನಗರದಲ್ಲಿ ಬ್ಯಾಂಕಿಂಗ್ (Banking) ಕ್ಷೇತ್ರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಸುವರ್ಣವಕಾಶ ಎಂದೇ ಹೇಳಬಹುದು.
ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿ ಕೆಳಗೆ ನೀಡಲಾಗಿದೆ.
ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆಯ(Canara Bank Recruitment 2023) ಸಂಪೂರ್ಣ ವಿವರ ಇಲ್ಲಿದೆ:
ಬ್ಯಾಂಕ್ ಹೆಸರು : ಕೆನರಾ ಬ್ಯಾಂಕ್ (Canara Bank) ಹುದ್ದೆಗಳ ಸಂಖ್ಯೆ : 2 ಹುದ್ದೆಗಳು
ಉದ್ಯೋಗ ಸ್ಥಳ : ಬೆಂಗಳೂರು
ಹುದ್ದೆಯ ಹೆಸರು: ಸಹಾಯಕ ಉಪಾಧ್ಯಕ್ಷ, ಪ್ರಾಜೆಕ್ಟ್
ಮ್ಯಾನೇಜರ್ : ವೇತನ : ರೂ.63000-78500/- ಪ್ರತಿ ತಿಂಗಳು
ವಯೋಮಿತಿ (Age) : ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಗರಿಷ್ಠ ವಯಸ್ಸು 30 ವರ್ಷ ವಯಸ್ಸು ಮೀರಿರಬಾರದು. ಕೆನರಾ ಬ್ಯಾಂಕ್ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ವಿದ್ಯಾರ್ಹತೆ (Education) : ಸಹಾಯಕ ಉಪಾಧ್ಯಕ್ಷ : ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯಗಳಲ್ಲಿ B.E ಅಥವಾ B.Tech, MBA ನಲ್ಲಿ ಹಣಕಾಸು, CA ಅಥವಾ ICWA (CMA)ತೇರ್ಗಡೆ ಹೊಂದಿರಬೇಕು.
ಪ್ರಾಜೆಕ್ಟ್ ಮ್ಯಾನೇಜರ್ (Project Manager) : ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯಗಳಲ್ಲಿ CA, B.Com, M.Com, MBA ಇನ್ ಫೈನಾನ್ಸ್, CA ಅಥವಾ ICWA (CMA)ರಲ್ಲಿ ಉತ್ತೀರ್ಣರಾಗಿರಬೇಕು.
ಅರ್ಜಿ ಶುಲ್ಕ (Application Fee) : ಎಲ್ಲಾ ಅಭ್ಯರ್ಥಿಗಳು : ರೂ.1000/- ಅರ್ಜಿ ಶುಲ್ಕ ಪಾವತಿಸಬೇಕು. ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕಾಗಿದೆ.
ಆಯ್ಕೆ ಪ್ರಕ್ರಿಯೆ (Selection Process) : ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ: ಸಹಾಯಕ ಉಪಾಧ್ಯಕ್ಷ: ರೂ.78500/-
ಪ್ರಾಜೆಕ್ಟ್ ಮ್ಯಾನೇಜರ್ : ರೂ.63000/-
ಅರ್ಜಿ ಸಲ್ಲಿಸುವ ವಿಧಾನ : ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ವ್ಯವಸ್ಥಾಪಕ ನಿರ್ದೇಶಕರು, ಕ್ಯಾನ್ಬ್ಯಾಂಕ್ ವೆಂಚರ್ ಕ್ಯಾಪಿಟಲ್ ಫಂಡ್ ಲಿಮಿಟೆಡ್ 29, 2 ನೇ ಮಹಡಿ, ದ್ವಾರಕಾನಾಥ ಭವನ, ಕೆ ಆರ್ ರಸ್ತೆ, ಬಸವನಗುಡಿ, ಬೆಂಗಳೂರು-560004 ಇಲ್ಲಿಗೆ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಏಪ್ರಿಲ್ 10, 2023ರ ಮೊದಲು ಕಳಿಸಬೇಕು. ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ , ಅಥವಾ ಯಾವುದೇ ಇತರ ಸೇವೆ ಮೂಲಕ ಕಳುಹಿಸಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ