Areca nut Income: ಅಡಿಕೆ ಬೆಳೆದು ಕೋಟ್ಯಾಧಿಪತಿಗಳಾಗಬಹುದೇ ? ‘ಮಾಡಾಳ್ ‘ ಅಡಿಕೆ ತಳಿ ಇಲ್ಲದೆ ಕೂಡಾ ಕೋಟಿ ಹಣ ಗಳಿಸಿ !

Areca nut Income: ಶುಭಮಂಗಳ, ಮಂಗಳ, ಸುಮಂಗಲ, ಮೋಹಿತ್ ನಗರ್, ಹಿರೇಹಳ್ಳಿ ಕುಳ್ಳ, ಸಮೃತಿ (ಅಂಡಮಾನ್), ಸೈಗನ್, VTLAH 1,2, ತೀರ್ಥಹಳ್ಳಿ ಕುಳ್ಳ, ನಾಟಿ ಮುಂತಾದ ತಳಿಯ ಅಡಿಕೆಯ ಬಗ್ಗೆ ಕೇಳಿದ್ದೆವು. ಇವುಗಳಲ್ಲಿ ಕೆಲವು ಹೆಚ್ಚಿನ ಇಳುವರಿ ಕೊಡುವ ತಳಿಗಳು ಇವೆ ಅನ್ನೋದು ಅಡಿಕೆ ಕೃಷಿಕರೆಲ್ಲರಿಗೂ ಗೊತ್ತಿರೋ ವಿಚಾರ. ಇದರ ಮಧ್ಯೆ ಮಾರ್ಕೆಟ್ ಗೆ ಹೊಸ ತಳಿ ಎಂಟ್ರಿ ಕೊಟ್ಟಿದೆ. ಇದರಲ್ಲಿ ಇಳುವರಿ ಕೂಡಾ ಹೆಚ್ಚು. ಕಾಯಿ ಕೊಯ್ದಷ್ಟು ಮತ್ತೆ ಅಡಿಕೆ ಉದುರುತ್ತಲೇ ಇರುತ್ತದೆ. ಅಂತಹ ತಳಿಯೇ ‘ ಮಾಡಾಳ್ ‘ ಅಡಿಕೆ ತಳಿ !!

‘ನೀವು ಅಡಿಕೆ ಬೆಳೆದು ಕೋಟಿ ಕೋಟಿ ಸಂಪಾದಿಸಬೇಕೆಂಬ ಕನಸಿನಲ್ಲಿದ್ದೀರಾ? ಹಾಗಾದ್ರೆ ‘ ಮಾಡಾಳ್ ‘ ತಳಿಯ ಅಡಿಕೆ ಗಿಡಗಳನ್ನು ಬೆಳಸಿ ಕೋಟ್ಯಾಂತರ ರೂಪಾಯಿ ಸಂಪಾದಿಸಿ’ ಎಂಬ ವ್ಯಂಗ್ಯವಾದ ಶೀರ್ಷಿಕೆಯೊಂದಿಗೆ ಜೆಡಿಎಸ್ ಟ್ವೀಟ್ ಮಾಡಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ (Madal Virupakshappa) ಕಾಲೆಳೆದು, ಬಿಜೆಪಿ (BJP)ಯನ್ನು ಕುಟುಕಿತ್ತು ಜೆಡಿಎಸ್ (JDS).

ನಾನು 120 ಎಕರೆ ಅಡಿಕೆ ತೋಟದ ಮಾಲೀಕ. ಅಡಿಕೆಯಿಂದಲೇ ನಾನು ಕೋಟ್ಯಂತರ ದುಡ್ಡು ದುಡೀತೇನೆ. ಅದು ಲಂಚದ ಹಣ ಅಲ್ಲ, ಅಡಿಕೆ ಮಾರಿ ಬಂಡ ಹಣ ಅಂತ ಮಾಡಲು ವಿರುಪಾಕ್ಷಪ್ಪ ಅವತ್ತು ಅಡಿಕೆಯನ್ನು ಅಲ್ಲಿ ಅಡ್ಡ ತಂದಿದ್ದರು. ಅದಕ್ಕೆ ಕುಮಾರಸ್ವಾಮಿಯವರು (Kumara Swamy) ಕೋಟ್ಯಂತರ ದುಡ್ಡು ದುಡಿಯಲು ‘ ಮಾಡಾಳ್ ‘ ಅಡಿಕೆ ತಳಿ ಬಳಸಿ, ಅಂತ ಟಾಂಟ್ ಮಾಡಿದ್ದರು.

ಹಾಗಾದ್ರೆ ನಿಜಕ್ಕೂ ಅಡಿಕೆಯಲ್ಲಿ ಎಷ್ಟು ಉತ್ಪತ್ತಿ ಬರುತ್ತದೆ ? ಒಂದು ಎಕರೆಗೆ ಎಷ್ಟು ಗಿಡ ಅಡಿಕೆ ಹಾಕಬಹುದು, ಗಿಡಕ್ಕೆ ಎಷ್ಟು ಇಳುವರಿ ಬರುತ್ತದೆ? ವಾರ್ಷಿಕ ಉತ್ಪತ್ತಿ ಎಷ್ಟು ಬರ್ಬೋದು, ಉತ್ಪತ್ತಿಯಲ್ಲಿ ಎಷ್ಟು ಪರ್ಸೆಂಟೇಜ್ ಖರ್ಚು ಇರ್ತದೆ, ಕೋಟಿ ದುಡಿಯಲು ಎಷ್ಟು ಎಕ್ರೆ ಜಾಗ ಬೇಕು, ಅಲ್ಲಿ ಒಟ್ಟು ಎಷ್ಟು ಗಿಡ ಹಾಕ್ಬೇಕು ? ಇವಿತ್ಯಾದಿ ಟೆಕ್ನಿಕಲ್ ಮಾಹಿತಿಗಳನ್ನು ಇಟ್ಟುಕೊಂಡು ನಾವ್ ಬಂದಿದ್ದೇವೆ. ಇವತ್ತು ನಿರ್ಧಾರ ಆಗಿಯೇ ಬಿಡುತ್ತೆ : ಅಡಿಕೆ ನಿಮ್ಮನ್ನು ಕೋಟ್ಯಧಿಪತಿ ಮಾಡುತ್ತಾ ಇಲ್ಲವಾ ಎಂಬುದಾಗಿ.

ಕುಮಾರಸ್ವಾಮಿ ಅವರು ಅಡಿಕೆ ಕೃಷಿ ಮಾಡಿ ಕೋಟಿಗಟ್ಟಲೆ ಹಣ ಸಂಪಾದಿಸಲು ಆಗುವುದಿಲ್ಲ ಎನ್ನುವುದನ್ನು ಒತ್ತಿ ಹೇಳಿದ್ದರು. ಮಾಡಾಳು ವಿರುಪಾಕ್ಷ ನವರು ಈ ಬಗ್ಗೆ ಪ್ರತಿಕ್ರಿಯಿಸಿ ನನಗೆ 120 ಎಕರೆ ಅಡಿಕೆ ತೋಟ ಇದೆ ಆ ದುಡ್ಡು ಲಂಚವಾಗಿ ಬಂದದ್ದಲ್ಲ ಅಡಿಕೆ ತೋಟದಲ್ಲಿ ನಾನು ನೋಡಿದದ್ದು ಎಂದಿದ್ದರು. ಆವಾಗ ಅಡಿಕೆ ಬೆಳೆದು ಅಷ್ಟು ಪ್ರಮಾಣದ ಹಣ ಮಾಡಬಹುದಾ ಇಲ್ಲವಾ ಎನ್ನುವ ಬಗ್ಗೆ ಚರ್ಚೆ ಮತ್ತು ಅನುಮಾನಗಳು ಹುಟ್ಟಿದ್ದವು. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಈ ಕೆಳಗಿನ ಚಾರ್ಟ್ ನೋಡಿ ಅಡಿಕೆ ಬೆಳೆದು ಕೋಟಿಗಟ್ಟಲೆ ಗಳಿಸಲು ಆಗುತ್ತದೆ ಇಲ್ಲವೇ ಎನ್ನುವುದನ್ನು ನೀವೇ ನಿರ್ಧರಿಸಿ.

ಅಡಿಕೆ ಮಾಡಿ ಕೋಟ್ಯಂತರ ಹಣ ಮಾಡಕ್ಕಾಗತ್ತಾ, ಇಲ್ವಾ, ಉತ್ತರ ಇಲ್ಲಿದೆ !

ಅಡಿಕೆಯಲ್ಲಿ ಕೋಟ್ಯಧಿಪತಿ ಆಗಲು ‘ಮಾಡಾಳ್ ತಳಿ’ಯಿಂದ ಮಾತ್ರ ಸಾಧ್ಯಾನಾ ?
ಕರೆ  ಗಿಡಗಳ ಮಧ್ಯೆ  ಸ್ಪೇಸ್ (ಅಡಿ) ಎಕರೆಗೆ ಒಟ್ಟು ಗಿಡಗಳು  ಪ್ರತಿ ಗಿಡದ ಇಳುವರಿ (ಕೆಜಿ)  ಒಟ್ಟು ಇಳುವರಿ (ಕೆಜಿ) ಇವತ್ತಿನ ಹೊಸ ಅಡಿಕೆ ಬೆಲೆ (ರೂ.)  ವಾರ್ಷಿಕ ಒಟ್ಟು ಉತ್ಪತ್ತಿ (ರೂ.)  ವಾರ್ಷಿಕ ಖರ್ಚು ಕಳೆದು ಉತ್ಪತ್ತಿ (ರೂ.) (30%) ವಾರ್ಷಿಕ ನಿವ್ವಳ ಲಾಭ (ರೂ.) ವಾರ್ಷಿಕ ನಿವ್ವಳ ಲಾಭ ಕೋಟಿ (ರೂ.)
1 8*8 650 3 1950 370 721500 216450 505050 0.05
10 8.8 6500 3 19500 370 7215000 2164500 5050500 0.50
50 8*8 32500 3 97500 370 36075000 10822500 25252500 2.53
100 8*8 65000 3 195000 370 72150000 21645000 50505000 5.05
120 8*9 78000 3 234000 370 86580000 25974000 60606000 6.06

 

ಹಾಗಾಗಿ ಅಡಿಕೆ ಕೃಷಿಯಲ್ಲಿ ಕೋಟಿ ದುಡಿಯುವುದು ಈಗ ಏನೂ ಕಷ್ಟ ಇಲ್ಲ. ಚಿನ್ನದ ಬೆಲೆಯಲ್ಲಿ ಮಿನುಗುತ್ತಿರುವ ಹಳದಿ ಹಣ್ಣಿನ ಒಳಗೆ ಇದೆ ಬಂಗಾರದ ಬೆಲೆಯ ಬೀಜಗಳು. ಕೇವಲ ನೂರು ಅಡಿಕೆ ಒಂದು ಕೆಜಿ ತೂಗುತ್ತವೆ ಮತ್ತು ಕೈತುಂಬಾ ಕಾಂಚಾಣವನ್ನು ಒದಗಿಸುತ್ತದೆ. ಸಮೃದ್ಧಿಯ ಬೆಳೆಯಾದ ಅಡಿಕೆಯನ್ನು ಕೃಷಿ ಮಾಡಿ ಶ್ರೀಮಂತರಾಗೋದು ಸುಲಭ. ಎಚ್. ಡಿ. ಕುಮಾರಸ್ವಾಮಿಯವರು ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪರ ಮಗನ ಲಂಚದ ಆಪಾದನೆಯ ಸಂದರ್ಭ ಕೀಟಲೆ ಮಾಡಿ ಹೇಳಿದಂತೆ, ಅಡಿಕೆಯಿಂದ ಶ್ರೀಮಂತರಾಗಲು ಮಾಡಾಳ್ ತಳಿ ಬೇಕಿಲ್ಲ, ಯಾವುದೇ ಅಡಿಕೆ ತಳಿ ಕೂಡಾ ಮೈಬಗ್ಗಿಸಿ ಮಗುವಿನಂತೆ ಸಾಕಿದರೆ ಅದು ನಮ್ಮನ್ನು ಶ್ರೀಮಂತನನ್ನಾಗಿ ಮಾಡಬಲ್ಲವು.

Leave A Reply

Your email address will not be published.