Smart Watch : ತನ್ನ ಆರೋಗ್ಯದ ಗುಟ್ಟು ತಿಳಿಯಲು ಸ್ಮಾರ್ಟ್ವಾಚ್ ಬಳಸಿ ಆಸ್ಪತ್ರೆ ಸೇರಿ ಬಿಟ್ಟ ಯುವಕ ! ಯಾಕೆಂದು ಗೊತ್ತೇ?
Smart Watch: ಇಂದು ಹೆಚ್ಚಿನವರ ಕೈಯಲ್ಲಿ ರಾರಾಜಿಸುವ ಸ್ಮಾರ್ಟ್ ವಾಚ್ ಗಳು ಟ್ರೆಂಡ್ ಸೃಷ್ಟಿ ಮಾಡಿದ್ದು, ವಿಭಿನ್ನ ಶೈಲಿ, ವಿಶೇಷ ಫೀಚರ್ ಹೊಂದಿರುವ ಸ್ಮಾರ್ಟ್ ವಾಚ್ ಖರೀದಿಸಲು ಹೆಚ್ಚಿನವರು ಮುಗಿ ಬೀಳುತ್ತಾರೆ. ಅದರಲ್ಲೂ ಆ್ಯಪಲ್ ಕಂಪನಿಯ ಗ್ಯಾಜೆಟ್ ಅಂದ್ರೆ ಸಾಕು ಎಲ್ಲಿಲ್ಲದ ಡಿಮ್ಯಾಂಡ್!! ಅಷ್ಟೆ ಅಲ್ಲದೆ ವೈಫೈ ಕರೆ ಸೇವೆ,ಆರೋಗ್ಯ ವೈಶಿಷ್ಟ್ಯಗಳ ಕ್ಯಾಟಲಾಗ್ ಕಸ್ಟಮ್ ಫಿಟ್ನೆಸ್ ಯೋಜನೆಗಳು, ರಕ್ತದ ಆಮ್ಲಜನಕ ಮಾನಿಟರ್, ಬ್ರೀತ್ ಕಂಟ್ರೋಲ್ ಮೋಡ್, ಸ್ಲೀಪ್ ಟ್ರ್ಯಾಕಿಂಗ್ (Sleep Tracking), ಸ್ಟ್ರೆಸ್ ಟ್ರ್ಯಾಕರ್( Stress Trackor) ವಿಶೇಷತೆಯನ್ನು ಹೆಚ್ಚಿನ ಸ್ಮಾರ್ಟ್ವಾಚ್ಗಳು (Smart Watch) ಹೊಂದಿವೆ.ಈ ವಿಶೇಷತೆಗಳಿಂದಲೆ ಹೆಚ್ಚಿನ ಮಂದಿ ಸ್ಮಾರ್ಟ್ ವಾಚ್ ಕೊಂಡುಕೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಇಂದು ಮಾರುಕಟ್ಟೆ (Market)ಯಲ್ಲಿ ವಿಭಿನ್ನ ಕಂಪನಿಯ ಸ್ಮಾರ್ಟ್ ವಾಚ್ (Smart Watch) ಗಳು ಟ್ರೆಂಡ್ ಸೃಷ್ಟಿ ಮಾಡುತ್ತಿವೆ. ಈ ನಡುವೆ ಸ್ಮಾರ್ಟ್ ವಾಚ್ ಎಷ್ಟು ವೈಶಿಷ್ಟ್ಯತೆಯನ್ನು ಒಳಗೊಂಡಿದೆಯೋ ಅಷ್ಟೇ ಸಮಸ್ಯೆಗೆ ಎಡೆ ಮಾಡಿಕೊಡುವ ಸಾಧ್ಯತೆಗಳು ದಟ್ಟವಾಗಿರುವ ಕುರಿತು ವೈದ್ಯರು (Doctor) ಎಚ್ಚರಿಕೆ ನೀಡಿದ್ದಾರೆ. ಸ್ಮಾರ್ಟ್ ವಾಚ್ಗಳು ಜನರ ಮಾನಸಿಕ ಸ್ಥಿತಿಗತಿಯ ಮೇಲೆ ಪ್ರಭಾವ ಬೀರುವ ಕುರಿತು ವೈದ್ಯರು ಕಳವಳ ವ್ಯಕ್ತಪಡಿಸಿದ್ದು, ಇದಕ್ಕೆ ನಿದರ್ಶನ ಎಂಬಂತೆ ಘಟನೆಯೊಂದು ವರದಿಯಾಗಿದೆ. ಸ್ವಿಸ್-ಜರ್ಮನ್ ಮೂಲದ 27 ವರ್ಷದ ವ್ಯಕ್ತಿಯೊಬ್ಬ ಸ್ಮಾರ್ಟ್ ವಾಚ್ ಧರಿಸಿಕೊಂಡದಲ್ಲದೇ, ಆತನ ಮಾನಸಿಕ ಒತ್ತಡದ ಪರಿಣಾಮ ಸಾವಿನ ಮನೆಗೆ ಆಹ್ವಾನ ಪಡೆದ ಘಟನೆ ಬೆಳಕಿಗೆ ಬಂದಿದೆ.
ಎಷ್ಟೋ ಬಾರಿ ನಮ್ಮ ಮಾನಸಿಕ ಸ್ಥಿತಿಗತಿಗಳೇ ನಮ್ಮ ಆರೋಗ್ಯದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಮೆಡಿಕಲ್ ಕೇಸ್ ರಿಪೋರ್ಟ್ಸ್ ಜರ್ನಲ್ನಲ್ಲಿ ಪ್ರಕಟವಾದ ವರದಿಯ ಅನುಸಾರ, ಡ್ಯಾನಿಶ್ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ಎರಿಕ್ಸೆನ್ ಪಂದ್ಯದ ವೇಳೆ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬ ತನ್ನ ಮೇಲೆಯೇ ಪ್ರಯೋಗ ನಡೆಸಲು ಮುಂದಾಗಿದ್ದಾನೆ. ಹೀಗಾಗಿ, ತನ್ನ ಹೃದಯದ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲದಲ್ಲಿ ಸ್ಮಾರ್ಟ್ ವಾಚ್ ಖರೀದಿ ಮಾಡಿದ್ದಾನೆ.
ಫುಟ್ಬಾಲ್ ಆಟಗಾರನ ಪ್ರಕರಣದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದ ವಿದ್ಯಾರ್ಥಿ ಸ್ಮಾರ್ಟ್ ವಾಚ್ ಮೂಲಕ ತಮ್ಮ ಹೃದಯದ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದ. ಅಷ್ಟೆ ಅಲ್ಲದೇ, ಗೂಗಲ್ ನಲ್ಲಿ ಸರ್ಚ್ ಮಾಡಿ ಸ್ಮಾರ್ಟ್ವಾಚ್ನಲ್ಲಿರುವ ಎಲೆಕ್ಟ್ರೋಕಾರ್ಡಿಯೋಗ್ರಾಮ್(Electrocardiogram) (ECG) ಮಾನಿಟರ್ನಲ್ಲಿ ಹೃದಯಾಘಾತದ ಸೂಚನೆ ಹೇಗೆ ತಿಳಿಯಬಹುದು ಎಂಬ ಮಾಹಿತಿ ಪಡೆದುಕೊಳ್ಳುತ್ತಿದ್ದ. ಸ್ಮಾರ್ಟ್ ವಾಚ್ ನಲ್ಲಿ ಕೊಂಚ ಏರು ಪೇರು ಆದರೂ ಕೂಡ ವಿದ್ಯಾರ್ಥಿ ತುಂಬಾ ಆತಂಕಗೊಳ್ಳುತ್ತಿದ್ದ.
ಒಮ್ಮೆ ಸ್ಮಾರ್ಟ್ ವಾಚ್ ನಲ್ಲಿ ಹೃದಯದಲ್ಲಿ ರಕ್ತದ ಹರಿವು ಕಡಿಮೆಯಾದ ಹಾಗೆ ಅನುಭವವಾಗಿದ್ದು, ಕಳವಳಗೊಂಡ ವಿಧ್ಯಾರ್ಥಿ ತನಗೆ ಹೃದಯಾಘಾತವಾಗುವ ಸಾಧ್ಯತೆಯಿದೆ ಎಂಬ ಆತಂಕದ ಜೊತೆಗೆ ಭಯದಲ್ಲಿ ಆಸ್ಪತ್ರೆಗೆ ದೌಡಾಯಿಸಿದ್ದು, ಸ್ಮಾರ್ಟ್ ವಾಚ್ನ ಎಲೆಕ್ಟ್ರೋಕಾರ್ಡಿಯೋಗ್ರಾಮ್ ಮತ್ತು ಇಸಿಜಿ ನಿಖರವಾಗಿ ಒಂದೇ ಮಾಹಿತಿಯನ್ನು ನೀಡಿದೆ. ಯುವಕ ಕೈಗೆ ಕಟ್ಟಿದ್ದ ಸ್ಮಾರ್ಟ್ ವಾಚ್ ನ ಮೂಲಕ ಎಲೆಕ್ಟ್ರೋಕಾರ್ಡಿಯೋಗ್ರಾಮ್ ಅನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದ ಪರಿಣಾಮ ಒತ್ತಡ ಹೆಚ್ಚಾಗಿ ಭಯದಲ್ಲಿ ಎದೆನೋವು ಕಾಣಿಸಿಕೊಂಡಿತ್ತು. ಪರೀಕ್ಷೆಗಳ ಬಳಿಕ ಯಾವುದೇ ಹೃದಯ ಸಂಬಂಧಿ ಖಾಯಿಲೆಗಳು ಆತನಿಗಿಲ್ಲ ಎಂಬುದು ತಿಳಿದುಬಂದಿದೆ. ಆದರೂ ವಿದ್ಯಾರ್ಥಿ ಇದನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಹೀಗಾಗಿ, ವೈದ್ಯರು ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿ ಶತಾಯ ಗತಾಯ ಮನವೊಲಿಸಿ ಮನೆಗೆ ಕಳುಹಿಸಿದ್ದಾರೆ. ಈ ನಡುವೆ ಸ್ಮಾರ್ಟ್ ವಾಚ್ ಅಪಾಯಕಾರಿಯೇ ಎನ್ನುವ ಬಗ್ಗೆ ನಿರಂತರವಾಗಿ ಚರ್ಚೆಗಳು ನಡೆಯುತ್ತಿದ್ದರೂ ಕೂಡ ಇದಕ್ಕೆ ನೈಜ ಉತ್ತರ ಇನ್ನೂ ಲಭ್ಯವಾಗಿಲ್ಲ.