Radhika Pandit Birthday: ಪತಿ Yash ಜತೆಗೆ ವಿದೇಶದಲ್ಲಿ ಬರ್ತಡೇ ಆಚರಿಸಿಕೊಂಡ ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್‌

Radhika Pandit Birthday: ಕನ್ನಡ ಚಿತ್ರ ರಂಗದಲ್ಲಿ ಅಭಿಮಾನಿಗಳ ಹೆಚ್ಚಿನ ಮೆಚ್ಚುಗೆಯನ್ನು ಪಡೆದ ಸ್ಯಾಂಡಲ್ವುಡ್ (Sandal wood) ನಟಿ ರಾಧಿಕಾ ಪಂಡಿತ್ (Radhika Pandit) ತನ್ನ ಹುಟ್ಟು ಹಬ್ಬವನ್ನು ವಿದೇಶದಲ್ಲಿ ಕುಟುಂಬದ ಜೊತೆಗೆ ಆಚರಿಸಿಕೊಂಡಿದ್ದಾರೆ. ಈ ಸಂತೋಷದ ಕ್ಷಣವನ್ನು ತನ್ನ ಕುಟುಂಬದ ಜೊತೆಗೆ ಕಳೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಪಂಡಿತ್ ಬರ್ತಡೇ ಸೆಲೆಬ್ರೇಶನ್ ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಈ ಫೋಟೋಗಳಲ್ಲಿ ರಾಧಿಕಾ ಪಂಡಿತ್ ಪತಿ ಯಶ್ (Yash) ತನ್ನ ಇಬ್ಬರು ಮಕ್ಕಳಾದ 5 ವರ್ಷ ಪ್ರಾಯದ ಐರಾ ಹಾಗೂ ಯಥರ್ವ ಜತೆ ಕಾಣಿಸಿಕೊಂಡಿದ್ದಾರೆ (ಆಕೆಯ ಇಬ್ಬರೂ ಮಕ್ಕಳು 10 ತಿಂಗಳ ಅಂತರದಲ್ಲಿ ಜನಿಸಿದವರು). ಹಾಗೆ ಬರ್ತ್ ಡೇ ಪಾರ್ಟಿಯಲ್ಲಿ ಅವರು ಹಾಕಿದ ಜಾಕೆಟ್ ಅನ್ನು ನೋಡಿದರೆ ಯಾವುದೋ ಚಳಿಯ ಪ್ರದೇಶದಲ್ಲಿ ರಾಧಿಕಾ ಮತ್ತು ಕುಟುಂಬ ಆಕೆಯ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ ಎಂದು ತಿಳಿಯುತ್ತದೆ. ಈ ಫೋಟೋಗಳನ್ನು ಹಂಚುವ ಮೂಲಕ ಚಳಿ, ಕೇಕ್, ಮುದ್ದಾಟ ಈ ಮೂರು ಸಮ್ಮೀಲನಗಳ ಒಟ್ಟಿಗೆ ಸೌಂಡ್ಸ್ ಕೇಳಲು ಬಲು ಸುಂದರವಾಗಿದೆ ಎನ್ನುವ ಕ್ಯಾಪ್ಶನ್ ನ ಜೊತೆಗೆ ಫ್ರುಟ್ ಕೇಕ್ ಕಟ್ ಮಾಡುವ ಮೂಲಕ ರಾಧಿಕಾ ಪಂಡಿತ್ ತನ್ನ ಬರ್ತಡೇ ಅನ್ನು ಆಚರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ರಾಧಿಕಾ ಪಂಡಿತ್ ತನ್ನ 39 ನೇ ವರ್ಷದ ಹುಟ್ಟು ಹಬ್ಬವನ್ನು ಮೊದಲನೆಯ ಬಾರಿಗೆ ತನ್ನ ಮನೆಯಿಂದ ದೂರದಲ್ಲಿ ಆಚರಿಸಿಕೊಂಡಿದ್ದಾರೆ. ಹಾಗಾಗಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣ (social media) ದಲ್ಲಿ ಈ ವರ್ಷದ ಹುಟ್ಟು ಹಬ್ಬವನ್ನು ನಿಮ್ಮ ಜೊತೆ ಆಚರಿಕೊಳ್ಳಲು ನಾನು ಮನೆಯಲ್ಲಿ ಇರುವುದಿಲ್ಲ. ಹಾಗಾಗಿ ಯಾರು ಬೇಸರವನ್ನು ಮಾಡಬೇಡಿ ಎಂದು ವ್ಯಕ್ತಪಡಿಸಿದ್ದಾರೆ.

ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ (RAadhika pandit Insta) ಪತಿ ಯಶ್, ಮಕ್ಕಳು ಹಾಗೂ ರಾಧಿಕ ಪಂಡಿತ್ ತನ್ನ ತಂದೆ – ತಾಯಿಯ ಜೊತೆ ಕಳೆಯುವ ಸಂತೋಷದ ಕ್ಷಣಕ್ಕೆ ಸುಂದರವಾದ ಕ್ಯಾಪ್ಶನ್ ಕೊಡುವ ಮೂಲಕ ತನ್ನ ಅಭಿಮಾನಿಗಳ ಜೊತೆ 3 ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆಕೆಯ ಅಭಿಮಾನಿಗಳು ಕಮೆಂಟ್ ಮಾಡುವ ಜತೆಗೆ ರಾಧಿಕಾ ಪಂಡಿತ್ ಗೆ ಬರ್ತಡೇ ವಿಷ್ ಅನ್ನು ತಿಳಿಸಿದ್ದಾರೆ. “ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ, ಆದಷ್ಟು ಬೇಗ ಸಿನಿಮಾ ತೆರೆಯಲ್ಲಿ ಕಾಣಿಸಿಕೊಳ್ಳಿ ಅತ್ತಿಗೆ “ಎಂದು ಅಭಿಮಾನಿಗಳು ತನ್ನ ಅಭಿಪ್ರಾಯವನ್ನು ತಿಳಿಸಿದ್ದಾರೆ.

Leave A Reply

Your email address will not be published.