Most Polluted City: ಭಾರತದ ಈ ನಗರ ಏಷ್ಯಾದಲ್ಲೇ ಅತ್ಯಂತ ಕಲುಷಿತ ನಗರ! ಯಾವುದು ಆ ನಗರ? ಇಲ್ಲಿದೆ ನೋಡಿ ಡಿಟೇಲ್ಸ್‌!!

Most Polluted City: ಪ್ರತಿವರ್ಷ ವಾಯು ಮಾಲಿನ್ಯದ ಕುರಿತು ಸಮೀಕ್ಷೆ ನಡೆಸಲಾಗುತ್ತದೆ. ಯಾವ ನಗರ ಹೆಚ್ಚು ಕಲುಷಿತವಾಗಿದೆ. ಯಾವುದು ಕಡಿಮೆ ಇದೆ. ಹಾಗೆಯೇ ಈ ಬಾರಿಯು ಈ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ನಿಮಗೆ ಗೊತ್ತಾ? ವರದಿ ಏನು ಹೇಳಿದೆ ಅಂತ. ಭಾರತದ ಈ ನಗರ ಏಷ್ಯಾದಲ್ಲೇ ಅತ್ಯಂತ ಕಲುಷಿತ ನಗರ (Most Polluted City) ಎಂದು ಹೇಳಲಾಗಿದೆ. ಯಾವುದು ಆ ನಗರ(city)? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ವಿಶ್ವ ವಾಯು ಗುಣಮಟ್ಟ ಸೂಚ್ಯಂಕ(AQI) ಆಧಾರದ ಮೇಲೆ ಮಾಹಿತಿ ಲಭ್ಯವಾಗಿದ್ದು, ಕಲುಷಿತ ನಗರದ ಪಟ್ಟಿಯಲ್ಲಿ ಚೀನಾದ(China) 5 ನಗರಗಳು, ಭಾರತ(India)ದ ನಾಲ್ಕು ನಗರಗಳು ಮತ್ತು ಮಂಗೋಲಿಯಾದ 1 ನಗರ ಇದೆ ಎನ್ನಲಾಗಿದೆ. ಈ ನಗರಗಳು ಗುವಾಹಟಿ (665), ಖಿಂಡಿಪಾಡಾ-ಭಾಂಡೂಪ್ ವೆಸ್ಟ್, ಮುಂಬೈ (471) ಮತ್ತು ಭೋಪಾಲ್ ಚೌರಾಹಾ, ದೇವಾಸ್ (315) ಆಗಿದೆ.

ಗಾಂಧಿನಗರ(724) ಅತ್ಯಂತ ಕಲುಷಿತನಗರ ಎಂದು ವರದಿ ತಿಳಿಸಿದೆ. ಹಾಗೆಯೇ ಮಹಾರಾಷ್ಟ್ರದಲ್ಲಿ 19 ಕಲುಷಿತ ನಗರ ಹಾಗೂ ಉತ್ತರ ಪ್ರದೇಶದಲ್ಲಿ 17 ನಗರಗಳಿವೆ. ಇನ್ನು ಆಂಧ್ರಪ್ರದೇಶದ 13 ನಗರ, ಪಂಜಾಬ್‌ನ 9 ನಗರಗಳು, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಒಡಿಶಾದ 7-7 ನಗರಗಳು ತುಂಬಾನೇ ಕಲುಷಿತವಾಗಿವೆ ಎಂದು ಹೇಳಲಾಗಿದೆ.

ಅಕ್ಟೋಬರ್-ಜನವರಿಯ ಸಮಯದಲ್ಲಿ ದೆಹಲಿ(Delhi)ಯಲ್ಲಿ ವಾಯು ಮಾಲಿನ್ಯಕಾರಕಗಳ ಸಾಂದ್ರತೆ ಪ್ರತಿ ಘನ ಮೀಟರ್‌ಗೆ 160 ಮೈಕ್ರೋಗ್ರಾಂಗಳಷ್ಟಿದೆ. ಇದು 2018-19 ರಲ್ಲಿ ಮೇಲ್ವಿಚಾರಣೆ ಪ್ರಾರಂಭವಾದ ನಂತರ ದಾಖಲಾಗಿರುವ ಅತ್ಯಂತ ಕಡಿಮೆ ಮಾಲಿನ್ಯ ಮಟ್ಟವಾಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಗಾಳಿ ಈ ಮೊದಲು ಇದ್ದದ್ದಕ್ಕಿಂತ ಉತ್ತಮವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Leave A Reply

Your email address will not be published.