Hero Super Splendor XTEC : ಬಂತು ನೋಡಿ ಹೊಚ್ಚ ಹೊಸ ಹೀರೋ ಸ್ಪ್ಲೆಂಡರ್ ಬೈಕ್, ಅಬ್ಬಬ್ಬಾ ಏನೆಲ್ಲಾ ಫೀಚರ್ಸ್ ಇದೆ ಗುರು!!!
Hero Super Splendor XTEC :ಬೈಕ್ (bike )ಕ್ರೇಜ್ ನಮಗೆಲ್ಲರಿಗೂ ಇದ್ದೇ ಇದೆ. ಉಳಿದ ವಾಹನಗಳಿಗಿಂತ ಬೈಕ್ ಗೆ ಹೆಚ್ಚು ಬೇಡಿಕೆ ಇದ್ದು, ಅದರಲ್ಲೂ ಹೀರೋ ಮೋಟೋಕಾರ್ಪ್ ಕಂಪನಿಯ (motocorp company )ಸ್ಪ್ಲೆಂಡರ್ ಬೈಕ್‌ಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗಾಗಿ ಹೀರೋ ಮೋಟೊಕಾರ್ಪ್ ಕಂಪನಿಯ ನೂತನ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ಬೈಕ್ ದೇಶದ ದ್ವಿಚಕ್ರವಾಹನ ಮಾರುಕಟ್ಟೆಗೆ (market ) ಪರಿಚಯಿಸಲಾಗಿದೆ.
ಸದ್ಯ ಕಂಪನಿಯು Hero Super Splendor XTEC ಪರಿಚಯಿಸಿದ್ದು, ಇದರ ಫೀಚರ್‌ಗಳ ಬಗ್ಗೆ ನೋಡುವುದಾದರೆ :
Super Splendor XTEC ನಲ್ಲಿ 125 ಸಿಸಿಯ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. 7,500 ಆವರ್ತನಕ್ಕೆ 10.7 ಬಿಎಚ್‌ಪಿ ಮತ್ತು 6,000 ಆವರ್ತನಕ್ಕೆ 10.6 ಟಾರ್ಕ್ ಬಿಡುಗಡೆ ಮಾಡುತ್ತದೆ.
ಇನ್ನು ಇದರಲ್ಲಿ ಐದು ಹಂತದ ಗಿಯರ್ ಬಾಕ್ಸ್ ಇದೆ. ಇದರಲ್ಲಿ i3S ಐಡಲ್ ಸ್ಟಾಪ್-ಸ್ಟಾರ್ಟ್ ವ್ಯವಸ್ಥೆಯೂ ಇದೆ. ಇಂಧನ ಉಳಿತಾಯ ಮಾಡುವ ಸಲುವಾಗಿ i3S ಫೀಚರ್ ಅಳವಡಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಬೈಕ್ 68 ಕಿ.ಮೀ. ಮೈಲೇಜ್ ನೀಡುವುದಾಗಿ ಕಂಪನಿ ಭರವಸೆ ನೀಡಿದೆ.
ಅದಲ್ಲದೆ ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್, ಇಂಧನ ಕಡಿಮೆಯಾಗಿರುವುದನ್ನು ಸೂಚಿಸುವ ಇಂಡಿಕೇಟರ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್‌ಆಫ್ ಇವೆ.
ಹೆಚ್ಚುವರಿಯಾಗಿ ಈ ಬೈಕ್‌ಗೆ ಅಂತರ್ಗತ ಯುಎಸ್‌ಬಿ ಚಾರ್ಜರ್ ಅಳವಡಿಸಲಾಗಿದೆ. ಬೈಕ್‌ನಲ್ಲಿ ಹೋಗುವಾಗ ಮೊಬೈಲ್ ಚಾರ್ಜ್ ಮಾಡಲು ಇದರಿಂದ ಅನುಕೂಲವಾಗಲಿದೆ.
ಅದಲ್ಲದೆ ಆಧುನಿಕ ತಂತ್ರಜ್ಞಾನಗಳಿಗೂ ನೂತನ ಸ್ಪ್ಲೆಂಡರ್ ಬೆಂಬಲ ನೀಡುತ್ತದೆ. Super Splendor XTEC ನಲ್ಲಿ ಬ್ಲೂಟೂಥ್ ಕನೆಕ್ಟಿವಿಟಿಯೂ ಇದೆ. ಈ ಫೀಚರ್‌ನಿಂದಾಗಿ ಮೋಟಾರ್‌ಸೈಕಲ್ ರೈಡರ್‌ಗೆ ಬೈಕ್‌ನ ಮುಂಭಾಗದಲ್ಲಿರುವ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಕಾಲ್ ಅಥವಾ ಎಸ್‌ಎಂಎಸ್ ಅಲಾರ್ಟ್ ದೊರಕುತ್ತದೆ. ಅದಲ್ಲದೆ ಫೋನ್‌ನ ಬ್ಯಾಟರಿ ಲೆವೆಲ್ ಅನ್ನೂ ಇದರಿಂದ ತಿಳಿಯಬಹುದು.
ನೂತನ ಸ್ಪ್ಲೆಂಡರ್ ಬೈಕ್‌ನ ಲುಕ್ ಉತ್ತಮಪಡಿಸುವ ಸಲುವಾಗಿ ಕಂಪನಿಯು ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಮರುವಿನ್ಯಾಸ ಮಾಡಿದ ವೈಸರ್ ನ್ನು ಅಳವಡಿಸಿದೆ. ಅದಲ್ಲದೆ ಹೆಚ್ಚುವರಿಯಾಗಿ ಇದರ ಬಾಡಿ ಗೆ ಹೊಸ ಗ್ರಾಫಿಕ್ಸ್ ಅಳವಡಿಸಲಾಗಿದೆ. ಜೊತೆಗೆ ರಿಮ್‌ಗೆ ಹೊಸ ಟೇಪ್ ಅಂಟಿಸಲಾಗಿದೆ.
ಗ್ರಾಹಕರಿಗೆ ನೂತನ Super Splendor XTEC ಬೈಕ್ ಮೂರು ಪೇಂಟ್ ಆಯ್ಕೆಗಳಲ್ಲಿ ದೊರಕಲಿದ್ದು, ಗ್ಲಾಸ್ ಬ್ಲ್ಯಾಕ್, ಕ್ಯಾಮಡಿ ಬ್ಲೇಜಿಂಗ್ ರೆಡ್ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಬಣ್ಣದಲ್ಲಿ ಲಭ್ಯವಿದೆ. ಅಂದರೆ, ಕಪ್ಪು, ಕೆಂಪು ಮತ್ತು ಬೂದಿ ಬಣ್ಣಗಳಲ್ಲಿ ಲಭ್ಯವಿದ್ದು, ಇದರ ದೆಹಲಿ ಎಕ್ಸ್‌ಶೋರೂಂ ದರ 83,368 ರೂ. ಆಗಿದ್ದು, ನಿಮಗೆ ಡ್ರಮ್ ಮತ್ತು ಡಿಸ್ಕ್ ಬ್ರೇಕ್ ಆಯ್ಕೆಗಳಲ್ಲಿ ಈ ಬೈಕ್ ಲಭ್ಯವಿದೆ ಎಂದು ಕಂಪನಿ ಮಾಹಿತಿ ನೀಡಿದೆ.
ಇದನ್ನೂ ಓದಿ :Tecno Spark 10 Pro: ಈ ಸ್ಮಾರ್ಟ್‌ಫೋನ್ ಐಫೋನ್ನಂತೆ ಕಾಣುತ್ತೆ ! ಬೆಲೆ 10,000 ಗಿಂತಲೂ ಕಡಿಮೆ