Gas Leakage Alaram : ಸಿಲಿಂಡರ್ ಬ್ಲಾಸ್ಟ್ ದುರ್ಘಟನೆ ತಪ್ಪಿಸಲು ಎಲ್ಪಿಜಿ ಗ್ಯಾಸ್ ಡಿಟೆಕ್ಟರ್ ಅಳವಡಿಸಿ! ಏನಿದು? ಉಪಯುಕ್ತ ಮಾಹಿತಿ ನಿಮಗಾಗಿ
Gas Leakage Alaram :ನಾವು ಗ್ಯಾಸ್ (gas ) ಸ್ಫೋಟದಿಂದ ಹಲವಾರು ಅನಾಹುತಗಳಾಗಿರುವುದನ್ನ ನೋಡಿರಬಹುದು ಅಥವಾ ಕೇಳಿರುತ್ತೇವೆ. ಗ್ಯಾಸ್ ಸಂಬಂಧಿತ ಅಪಘಾತಗಳು ಮನೆಯಲ್ಲಿ, ಅಥವಾ ಇನಿತರ ಸ್ಥಳಗಳಲ್ಲಿ ಸಾವು (death) ಮತ್ತು ಗಾಯಗಳಿಗೆ ಕಾರಣ ಆಗಬಲ್ಲದು. ಏಕೆಂದರೆ ಅನಿಲ ಸೋರಿಕೆಯು (Gas Leak) ಬಹಳ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ ಮತ್ತು ಗಮನಿಸದೆ ಬಿಟ್ಟರೆ ಬೆಂಕಿಯ ಸ್ಫೋಟ ಸಹ ಉಂಟಾಗಬಹುದು. ಆದರೆ ಒಂದು ಅಲಾರಂ ಬಲ್ಬ್ (Gas Leakage Alaram) ನಿಮ್ಮ ಈ ಸಮಸ್ಯೆಗೆ ಸುಲಭ ಪರಿಹಾರ ನೀಡಬಲ್ಲದು.
ಸದ್ಯ ಎಲ್ಪಿಜಿ ಸೋರಿಕೆಯಿಂದಾಗಿ ಉಂಟಾಗುವ ಸಿಲಿಂಡರ್ ಬ್ಲಾಸ್ಟ್ ನಿಂದಾಗಿ ಕೆಲವೊಮ್ಮೆ ಇಡೀ ಕುಟುಂಬವೇ ಆಪತ್ತಿನಲ್ಲಿ ಸಿಲುಕುತ್ತದೆ. ಕೆಲವರು ಇದನ್ನು ತಪ್ಪಿಸಲು ಸ್ಮೋಕ್ ಡಿಟೆಕ್ಟರ್‌ಗಳನ್ನು ಮನೆಯಲ್ಲಿ ಸ್ಥಾಪಿಸುತ್ತಾರೆ. ಆದರೆ, ಈ ಸ್ಮೋಕ್ ಡಿಟೆಕ್ಟರ್‌ಗಳು ಕೇವಲ ಹೊಗೆಯನ್ನು ಮಾತ್ರ ಪತ್ತೆಹಚ್ಚಲು ಸಾಧ್ಯವಾಗುತ್ತದೆ, ಸಿಲಿಂಡರ್ ಲೀಕ್ ಆಗುವುದನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗುತ್ತದೆ.
ಸದ್ಯ ನಾವು ಎಷ್ಟೇ ಜಾಗೃತಿ ವಹಿಸಿದರೂ ಕೂಡ ಕೆಲವೊಮ್ಮೆ ಅವಘಡ ತಪ್ಪಿಸಲು ಸಾಧ್ಯವೇ ಆಗುವುದಿಲ್ಲ. ಆದರೆ, ಒಂದು ಅಲಾರಂ (alarm ) ಬಲ್ಬ್ ನಿಮ್ಮ ಈ ಸಮಸ್ಯೆಗೆ (problem ) ಸುಲಭ ಪರಿಹಾರ ನೀಡಬಲ್ಲದು ಹೇಗೆಂದು ನೋಡೋಣ.
ಈ ಅಲಾರಂ ಬಲ್ಬ್ ಹೆಸರು ಹಲೋ ನಿಕಿಕ್ಸ್ ಶೀಲ್ಡ್ ಫೈರ್ ಅಲಾರ್ಮ್ ಎಂಬುದಾಗಿದೆ. ಇದು ಹೊಗೆ ಮತ್ತು ಕಾರ್ಬನ್ ಡೈಆಕ್ಸೈಡ್, ಎಲ್‌ಪಿಜಿ, ಮೀಥೇನ್ ಮತ್ತು ಹೈಡ್ರೋಜನ್‌ನಂತಹ ಅನಿಲ ಸೋರಿಕೆಯನ್ನು ಸುಲಭವಾಗಿ ಪತ್ತೆ ಮಾಡಬಲ್ಲದು. ನೋಡಲು ಬಲ್ಬ್ ಮಾದರಿಯಂತೆ ಕಾಣುವ ಈ ಸಾಧನವು ಎಲ್‌ಪಿಜಿ ಲೀಕ್ ಆದರೆ ಅಲಾರಂ ಮೂಲಕ ತಕ್ಷಣ ಎಚ್ಚರಿಕೆ ನೀಡುತ್ತದೆ.
ಗ್ಯಾಸ್ ಸೋರಿಕೆಯಾಗುವ ಸಾಧ್ಯತೆಯಿರುವ ಮನೆಯ ಅಡುಗೆ ಕೋಣೆ ಭಾಗದಲ್ಲಿ ನೀವು ಈ ಅಲಾರಂ ಅನ್ನು ಸ್ಥಾಪಿಸಬಹುದು. ಅಗತ್ಯವಿದ್ದರೆ ನೀವು ನಿಮ್ಮ ಕಚೇರಿ ಅಥವಾ ಗೋಡೌನ್‌ನಲ್ಲಿಯೂ ಈ ಸಾಧನವನ್ನು ಬಳಸಬಹುದು. ಇದರಿಂದ ಗ್ಯಾಸ್ ಸೋರಿಕೆಯಿಂದ ಉಂಟಾಗುವ ಅಗ್ನಿ ಅವಘಡದಂತಹ ದುರ್ಘಟನೆಗಳನ್ನು ತಪ್ಪಿಸಬಹುದು.
ಮುಖ್ಯವಾಗಿ ಹಲೋ ನಿಕಿಕ್ಸ್ ಶೀಲ್ಡ್ ಫೈರ್ ಅಲಾರ್ಮ್ ಬಲ್ಬ್ ಅನ್ನು ನಿಮ್ಮ ಮನೆಯಲ್ಲಿ ಇರುವ ಬಲ್ಬ್ ಹೋಲ್ಡರ್‌ಗೆ ಪ್ಲಗ್ ಮಾಡಿ, ಅದರ ನಂತರ ಸಾಧನವು ವಿದ್ಯುತ್ ಸರಬರಾಜನ್ನು ಪಡೆಯಲು ಪ್ರಾರಂಭಿಸುತ್ತದೆ ಮತ್ತು ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ಅಲಾರಂನ ಸದ್ದು ಎಷ್ಟು ಜೋರಾಗಿದೆಯೆಂದರೆ ಅದು 85 ಡೆಸಿಬಲ್‌ಗಳ ಶಬ್ದವನ್ನು ಹೊಂದಿರುವುದರಿಂದ ಮನೆಯಲ್ಲಿ ಮತ್ತು ಮನೆಯ ಹೊರಗಿನ ಜನರು ಅದನ್ನು ಸುಲಭವಾಗಿ ಕೇಳಬಹುದು ಮತ್ತು ಜಾಗೃತಿ ಗೊಳ್ಳಬಹುದು.
ಈ ಗ್ಯಾಸ್ ಅಲಾರಂ ಅನ್ನು ನೀವು ಅಮೆಜಾನ್‌ನಲ್ಲಿ ಖರೀದಿಸಬಹುದಾಗಿದ್ದು, ಇದರ ಬೆಲೆ ಸುಮಾರು ₹ 700ವರೆಗೆ ಇರಲಿದೆ.
ಸಿಲಿಂಡರ್ ಬ್ಲಾಸ್ಟ್ ನಂತಹ ದುರ್ಘಟನೆ ತಪ್ಪಿಸಲು ಇಂದೇ ನಿಮ್ಮ ಮನೆಗೆ ಎಲ್ಪಿಜಿ ಗ್ಯಾಸ್ ಡಿಟೆಕ್ಟರ್(LPG DETECTION ) ತರುವುದರೊಂದಿದೆ ಉತ್ತಮ ನಿರ್ಧಾರ ಕೈಗೊಳ್ಳಿ.