Blast if Petrol tank is full : ಬೇಸಿಗೆಯಲ್ಲಿ ವಾಹನಗಳಲ್ಲಿ ಪೆಟ್ರೋಲ್ ಫುಲ್ ಟ್ಯಾಂಕ್ ಮಾಡಿದ್ರೆ ಸ್ಫೋಟ ಆಗುತ್ತಾ? ಏನ್ ಹೇಳುತ್ತೆ ವಿಜ್ಞಾನ ?

Blast if Petrol tank is full : ನಗರದಲ್ಲಿ ಬಿಸಿಲಿನ ತಾಪಮಾನವು ಏರುತ್ತಿದೆ. ತರ್ಮೋ ಮೀಟರ್ ನ ಮುಳ್ಳು 40 ಡಿಗ್ರಿಗೆ ಏರುತ್ತಿದೆ. ಜನರು ತನ್ನ ದಿನ ನಿತ್ಯದ ಜೀವನದಲ್ಲಿ ಅನೇಕ ಬೇರೆ-ಬೇರೆ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಇದರ ಮಧ್ಯೆ ಬೇಸಿಗೆಯಲ್ಲಿ ವಾಹನಗಳಲ್ಲಿ ಪೆಟ್ರೋಲ್ ಫುಲ್ ಟ್ಯಾಂಕ್ ಮಾಡಿದ್ರೆ ಸ್ಫೋಟ ಆಗುತ್ತೆ. ಫುಲ್ ಟ್ಯಾಂಕ್ ಮಾಡಿಸಬೇಡಿ ಎನ್ನುವ ಸಂದೇಶ ಹರಿದಾಡುತ್ತಿದೆ. ಇದು ನಿಜಾನಾ, ಇದರ ಬಗ್ಗೆ ಏನನ್ನುತ್ತೆ ಸೈನ್ಸು ? (Interesting Science)

 

ಮುಂಬರುವ ದಿನಗಳಲ್ಲಿ ತಾಪಮಾನದಲ್ಲಿ ಏರಿಕೆಯಾಗಲಿದೆ, ಆದ್ದರಿಂದ ನಿಮ್ಮ ವಾಹನದಲ್ಲಿ ಗರಿಷ್ಠ ಪ್ರಮಾಣದಲ್ಲಿ ಪೆಟ್ರೋಲ್ ತುಂಬಬೇಡಿ. ಇದು ಇಂಧನ ಟ್ಯಾಂಕ್ನಲ್ಲಿ ಸ್ಫೋಟಕ್ಕೆ ಕಾರಣವಾಗಬಹುದು. ದಯವಿಟ್ಟು ನಿಮ್ಮ ವಾಹನದಲ್ಲಿ ಕೇವಲ ಅರ್ಧ ಟ್ಯಾಂಕ್ ಇಂಧನವನ್ನು ತುಂಬಿಸಿ ಮತ್ತು ಗಾಳಿಗೆ ಜಾಗವನ್ನು ಬಿಡಿ. ಪೆಟ್ರೋಲ್ ತುಂಬಿದ ಕಾರಣ ಈ ವಾರದಲ್ಲಿ 5 ಸ್ಫೋಟ ಅಪಘಾತಗಳು ಸಂಭವಿಸಿದೆ. ಎಂಬ ಭಯ ಭೀತ ಗೊಳಿಸುವ ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.  “ಜನರೇ ಎಚ್ಚೆತ್ತುಕೊಳ್ಳಿ, ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ “ಎಂಬ ಇಂಡಿಯನ್ ಆಯಿಲ್ ಕಂಪನಿಯ ಹೆಸರಿನಲ್ಲಿ ಹಳೆಯದೊಂದು ಮೆಸ್ಸೇಜ್ ಮತ್ತೆ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಿದೆ. ಏನಿದರ ಅಸಲೀಯತ್ತು ಮತ್ತು ನಿಜಕ್ಕೂ ಫುಲ್ ಟ್ಯಾಂಕ್ ಮಾಡಿದ್ರೆ ಬ್ಲಾಸ್ಟ್ ಆಗತ್ತಾ ಅಂತ ಕೇಳಿದ್ರೆ, ಅದಕ್ಕೆ ಉತ್ತರ ಕೆಳಗಿದೆ ನೋಡಿ.

ಪೆಟ್ರೋಲ್ ಡೀಸೆಲ್ ವಾಹನಗಳಿಗೆ ಪ್ರತಿ ವಾಹನದಲ್ಲಿ ಗರಿಷ್ಠ ಮಿತಿಯನ್ನು ನಿಗದಿ ಮಾಡಲಾಗಿದೆ. ವಾಹನ ತಯಾರಕರು ಪೆಟ್ರೋಲ್ ಮತ್ತು ಡೀಸೆಲ್ ಟ್ಯಾಂಕ್ಗಳ ಗಳಲ್ಲಿ ಎಷ್ಟು ಪ್ರಮಾಣದ ಇತರವನ್ನು ತುಂಬಿಸಬಹುದು ಎಂದು ಮ್ಯಾನುಫ್ಯಾಕ್ಚರ್ ಮಾಡುವಾಗಲೇ ನಿರ್ಧರಿಸಿರುತ್ತಾರೆ.  ಇಂಧನ ಟ್ಯಾಂಕ್‌ನಲ್ಲಿ ಸೂಚಿಸಲಾದ ಗರಿಷ್ಠ ಪ್ರಮಾಣಕ್ಕೆ ಯಾವಾಗಲೂ ಪೆಟ್ರೋಲ್ ಅನ್ನು ತುಂಬಿಸಬಹುದು. ಹಾಗೆ ಇಂಧನ ಟ್ಯಾಂಕ್ ಡಿಸೈನ್ ಮಾಡುವಾಗ ಹವಾಮಾನಕ್ಕೆ ಅನುಗುಣವಾಗಿ ಇಂಧನವು ಕುಗ್ಗುವ ಮತ್ತು ಉಂಗುವ ಪರಿಮಾಣವನ್ನು ಅಳತೆ ಮಾಡಿಯೇ ಪೆಟ್ರೋಲ್ ಟ್ಯಾಂಕ್ ಡಿಸೈನ್ ಆಗಿರುತ್ತದೆ. ಆದ್ದರಿಂದ ಚಳಿಗಾಲ ಅಥವಾ ಬೇಸಿಯನ್ನು ವಾಹನ ತಯಾರಕರು ನಿರ್ದಿಷ್ಟಪಡಿಸಿದ ಸಂಪೂರ್ಣ ಮಿತಿ (ಗರಿಷ್ಠ) ವರೆಗೆ ವಾಹನಗಳಲ್ಲಿ ಇಂಧನವನ್ನು ತುಂಬಲು ಸಂಪೂರ್ಣವಾಗಿ ಸುರಕ್ಷಿತವಾಗಿದೆ.

ಪೆಟ್ರೋಲ್ ಆಗಲಿ ಡೀಸೆಲ್ ಆಗಲಿ ಏಕಾಏಕಿ ಬ್ಲಾಸ್ಟ್ ಆಗುವುದಿಲ್ಲ. ಫುಲ್ ಟ್ಯಾಂಕ್ ಪೆಟ್ರೋಲ್ (petrol tank) ಹಾಕಿದ ಕೂಡಲೇ ಬ್ಲಾಸ್ಟ್ ಸಂಭವಿಸಲ್ಲ. ಯಾವುದೇ ಇಂಧನವು ಉರಿಯಬೇಕಾದರೆ ಆಯಾ ಇಂಧನಗಳು ಅವುಗಳ ಇಗ್ನಿಷನ್ ಪಾಯಿಂಟ್ ಅನ್ನು ತಲುಪಬೇಕು. ಅದಕ್ಕೆ ಆಮ್ಲಜನಕ ಅಥವಾ ಗಾಳಿ ಜೊತೆಗೆ ಬೆಂಕಿಯ ಮೂಲವೊಂದು ಬೇಕು. ಬೆಂಕಿಯ ಮೂಲವಾಗಿ ಸ್ಪಾರ್ಕ್ ಆಗಬಹುದು ಅಥವಾ ಬೆಂಕಿಯ ಇತರ ಮೂಲವೂ ಸಹ ಇಂಧನಗಳನ್ನು ದಹನ ಮಾಡುವಂತೆ ಮಾಡಬಲ್ಲದು.

ಪೆಟ್ರೋಲ್ ಆಗಲಿ ಡೀಸೆಲ್ ಆಗಲೀ ಒಂದೇ ಸಂಯುಕ್ತ ವಸ್ತುವನ್ನು ಹೊಂದಿಲ್ಲ. ಪೆಟ್ರೋಲ್ ಹಲವು ಸಂಯುಕ್ತ ವಸ್ತುಗಳ ಮಿಶ್ರಣ ( Alifactic compunds). ಡೀಸೆಲ್ ಇನ್ನೂ ಉದ್ದ ಸರಣಿಯ ಸಂಯುಕ್ತಗಳನ್ನು ಹೊಂದಿದೆ. ಇವ್ಯಾವುವೂ ವಾತಾವರಣದ ಉಷ್ಣಾಂಶದಲ್ಲಿ ಏಕಾಏಕಿ ಬೆಂಕಿಯನ್ನು ಹಿಡಿದು ಉರಿದುಬಿಡುವುದಿಲ್ಲ ಎಂದು ನಾವು ಗಮನದಲ್ಲಿಟ್ಟುಕೊಳ್ಳಬೇಕು.

ಇದಲ್ಲದೆ ಆಟೋ ಇಗ್ನೀಷಿಯನ್ಇಗ್ನೀಷಿಯನ್ (Auto ignition) ಎನ್ನುವ ಒಂದು ಕಾರಣ ಕೂಡ ಇದೆ. ಅಂದರೆ ಪೆಟ್ರೋಲ್ ನ ಆಟೋ ಇಗ್ನೀಷಿಯನ್ ಪಾಯಿಂಟ್ 280 ಡಿಗ್ರಿ ಸೆಂಟಿಗ್ರೇಡ್. ಅದೇ ಡೀಸೆಲ್ಲಿನ ಆಟೋ ಇಗ್ನಿಷನ್ ಟೆಂಪರೇಚರ್ 210 ಡಿಗ್ರಿ ಸೆಂಟಿಗ್ರೇಡ್. ಅಂದ್ರೆ ಪೆಟ್ರೋಲ್ 280 ಡಿಗ್ರಿ ಸೆಂಟಿಗ್ರೇಡ್ ಬಿಸಿ ಏರಿದರೆ, ಆಗ ಮಾತ್ರ ಏಕಾಏಕಿ ಬೆಂಕಿ ಹತ್ತಿಕೊಳ್ಳುತ್ತದೆ. ಈ ಸಂದರ್ಭದಲ್ಲಿ, ಯಾವುದೇ ಬೆಂಕಿಯ ಮೂಲ ಅಂದರೆ ಕಿಡಿಯಾಗಲಿ ಸ್ಪಾರ್ಕ್ ಆಗಲಿ ಬೇಕಾಗಿಲ್ಲ. ಆದರೆ ಅಷ್ಟರಮಟ್ಟಿಗೆ ದಿನದ ಉಷ್ಣತೆ ವಾತಾವರಣದಲ್ಲಿ ಯಾವತ್ತೂ ಎಲ್ಲಿಯೂ ಏರಿಕೆಯಾಗುವುದಿಲ್ಲ. ಆದುದರಿಂದ ವಾತಾವರಣದ ಉಷ್ಣತೆಯ ಕಾರಣದಿಂದ ಸ್ಪೋಟ ಸಂಭವಿಸುವುದಿಲ್ಲ.

ಆದುದರಿಂದ ಇದೊಂದು ಸುಳ್ಳು ಸಂದೇಶ. ಇದರ ಬಗ್ಗೆ ಜನರು ಕಿವಿಕೊಡದೆ ವಾಹನ ಗಳಿಗೆ ಫುಲ್ ಟ್ಯಾಂಕ್ ಮಾಡಿಸಬಹುದು ಇದರಿಂದ ಯಾವುದೇ ತೊಂದರೆ ಅಥವಾ ಸ್ಫೋಟ ಆಗುವುದಿಲ್ಲ. ಆದ್ದರಿಂದ, ಋತುಮಾನವನ್ನು ಲೆಕ್ಕಿಸದೆ ಬೇಸಿಗೆಯಲ್ಲಿ ಕೂಡಾ ವಾಹನ ತಯಾರಕರು ನಿರ್ದಿಷ್ಟಪಡಿಸಿದ ಪ್ರಮಾಣದಲ್ಲಿ  ಇಂಧನವನ್ನು ವಾಹನಗಳಿಗೆ ತುಂಬುವುದು ಸುರಕ್ಷಿತವಾಗಿದೆ ಎಂದು ಸ್ಪಷ್ಟ ಮಾಹಿತಿಯನ್ನು ಆಯಿಲ್ ಕಂಪನಿಯು ಜನರಿಗೆ ಈ ಮೊದಲೇ ತಿಳಿಸಿದೆ.

ಅಲ್ಲದೇ, ಗರಿಷ್ಠ ಮಟ್ಟದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನೂ ತುಂಬಿಸಿ ಇಡುವುದು ಒಳ್ಳೆಯದು. ಕಾರಣ ಏನೆಂದರೆ, ಇಂಧನದ ಟ್ಯಾಂಕ್ ಅನ್ನು ಫುಲ್ ಮಾಡಿ ಇಟ್ಟುಕೊಳ್ಳುವುದರಿಂದ ಟ್ಯಾಂಕ್ ನ ಒಳಗೆ ಇಂಧನದ ಮೇಲ್ಭಾಗದಲ್ಲಿ ಖಾಲಿ ಜಾಗ ಕಮ್ಮಿ ಇರುವಂತಾಗುತ್ತದೆ. ಆಗ ಪೆಟ್ರೊಲ್ ಆವಿಯಾಗುವುದು ಕಡಿಮೆಯಾಗುತ್ತದೆ. ಹಾವಿಯಾದ ಪೆಟ್ರೋಲ್ ಸ್ವಲ್ಪ ಪ್ರಮಾಣದಲ್ಲಿ ಟ್ಯಾಂಕಿನಿಂದ ಹೊರಕ್ಕೆ ಬಂದು ವೇಸ್ಟೇಜ್ ಆಗುವುದು ಇದೆ. ಅಲ್ಲದೇ, ಹೀಗೆ ಆವಿಯಾಗುವಾಗ ಹೆಚ್ಚಿನ ಆಕ್ಟನ್ ನಂಬರ್ (Octane Number) ಬಹುಬೇಗ ಆವಿಯಾಗುವ ಸಂಭವ ಇರೋದ್ರಿಂದ ಇಂಧನ ಕ್ಷಮತೆ ಕಮ್ಮಿ ಆಗುವ ಸಾಧ್ಯತೆ ಇದೆ.

ಹೀಗಾಗಿ, ಜನರು ಯಾವುದೇ ರೀತಿಯ ಗಾಳಿಸುದ್ದಿಗೆ ತಲೆಕೆಡಿಸಿಕೊಳ್ಳಬೇಡಿ, ಗಾಡಿಗೆ ವಾಹನ ತಯಾರಕರು ಸೂಚಿಸಿದ ಮಟ್ಟದಲ್ಲಿ ಪೆಟ್ರೋಲ್ ತುಂಬಿಕೊಂಡು ನಿಮ್ಮ ಪ್ರೀತಿಯ ಆಕೆಯ ಜತೆ ಲಾಂಗ್ ಡ್ರೈವ್ ಹೊರಡಿ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ ಅವಳ ಮುಖ ಖುಷಿಯಿಂದ ಬೆಳಗಲಿ.

Leave A Reply

Your email address will not be published.