Anaconda Snake Video : ರೋಡಿಗಿಳಿಯಿತು ವಿಶ್ವದ ಅತಿ ದೊಡ್ಡ ಹಾವು ! ಭಯದಿಂದ ಸ್ತಬ್ಧರಾದ ಜನ

Anaconda Snake Video: ಸಾಮಾನ್ಯವಾಗಿ ಹಾವು (snake) ಕಂಡರೆ ಎಲ್ಲರಿಗೂ ಭಯ ಅನ್ನೋದು ಇದ್ದೇ ಇರುತ್ತದೆ. ಅದರಲ್ಲೂ ಅನಕೊಂಡ (Anaconda), ಕಾಳಿಂಗ ಸರ್ಪ (King cobra) ಇವೆಲ್ಲಾ ಚಿತ್ರದಲ್ಲಿ ನೋಡಿದರೇನೇ ಹೆದರಿಕೆ ಆಗುತ್ತದೆ. ಅಂತಹದ್ರಲ್ಲಿ ಕಣ್ಣ ಮುಂದೆಯೇ ಇದ್ದರೆ ಹೇಗಾಗಬೇಡ ಅಲ್ವಾ?? ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಿಶ್ವದ ಅತಿ ದೊಡ್ಡ ಹಾವು ಅನಕೊಂಡ ರಾಜಾರೋಷವಾಗಿ ರಸ್ತೆ ದಾಟುತ್ತಿರುವ ದೃಶ್ಯ ಸೆರೆಯಾಗಿದೆ (Anaconda Snake Video). ಹಾವನ್ನು ನೋಡಿದ್ದೇ ತಡ ಜನರೆಲ್ಲಾ ಆಶ್ಚರ್ಯಚಕಿತರಾಗಿ, ಭಯದಿಂದ ಸ್ತಬ್ಧರಾಗಿದ್ದಾರೆ.

 

ರಸ್ತೆಯಗಲದ ಹಾವು ನಿಧಾನವಾಗಿ ತನ್ನ ಪಾಡಿಗೆ ರಸ್ತೆ ದಾಟುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಜನರೆಲ್ಲಾ ತಮ್ಮ ವಾಹನಗಳನ್ನು ನಿಲ್ಲಿಸಿ, ಅದು ದಾಟಿ ಹೋಗುವವರೆಗೆ ಕಾದಿರುವುದು ವಿಡಿಯೋದಲ್ಲಿ ನೋಡಬಹುದು. ನೀವು ವಿಡಿಯೋ ನೋಡಿದ್ರೆ, ಭಯಭೀತರಾಗೋದು ಖಂಡಿತ!! ಯಾಕಂದ್ರೆ ಹಾವು ಅಷ್ಟು ದೊಡ್ಡದಾಗಿದೆ. ರಸ್ತೆಯಗಲವಿದ್ದು, ಬೃಹತ್ ದೇಹ ಹೊಂದಿದ್ದು, ಮೈಬಣ್ಣ ನೋಡಿದರೇನೇ ಮೈ ಝಲ್!! ಎನ್ನುತ್ತೆ.

ಈ ವಿಡಿಯೋವನ್ನು Snake.wild ಹೆಸರಿನ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನೋಡಲು ಭಯಾನಕವಾಗಿರುವ ಹಾವು ಜನರು ಸುತ್ತುವರೆದರೂ ಯಾರಿಗೂ ತೊಂದರೆ ಮಾಡದೆ ತನ್ನ ಪಾಡಿಗೆ ರಸ್ತೆದಾಟುತ್ತಿದೆ. ಹಾಗೇ ಜನರು ಯಾವುದೇ ತೊಂದರೆ ಮಾಡದೇ, ಭಯದಿಂದ ದೂರ ಸರಿದು ನಿಂತಿದ್ದು, ಅದು ರಸ್ತೆ ದಾಟಿ, ಹುಲ್ಲಿನ ಪ್ರದೇಶಕ್ಕೆ ತಲುಪುವವರೆಗೆ ತಮ್ಮ ವಾಹನಗಳನ್ನು ನಿಲ್ಲಿಸಿ, ನಂತರ ಪ್ರಯಾಣಿಸಿದ್ದಾರೆ.

‌ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ಇಂತಹ ಹಾವು, ಇಷ್ಟು ಬೃಹದಾಕಾರದ ಹಾವು ಎಲ್ಲೂ ನೋಡೇ ಇಲ್ಲ ಎಂದು ಆಶ್ಚರ್ಯಚಕಿತರಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ವಿವಿಧ ರೀತಿಯಲ್ಲಿ ಹಾವನ್ನು ಕಂಡ ಬಗೆಯನ್ನು ವರ್ಣಿಸಿದ್ದಾರೆ. ಇದುವರೆಗೂ ಈ ವೈರಲ್ ವಿಡಿಯೋವನ್ನು ಲಕ್ಷಗಟ್ಟಲೆ ಜನರು ವೀಕ್ಷಿಸಿದ್ದಾರೆ.

 

Leave A Reply

Your email address will not be published.