Marrage Matter: ಮದ್ವೆಯಾದ್ರೆ ಮಕ್ಕಳನ್ನು ಪಡೆಯಲೇಬೇಕೆ ? ಕಟೀಲ್’ಗೆ ನಟ ಚೇತನ್ ಪ್ರಶ್ನೆ – ಮದುವೆ ಅಂತ ಆದ ಮೇಲೆ ಏನಾದ್ರೂ ಮಾಡ್ಲೇ ಬೇಕಲ್ಲವೇ ?!!
Rahul Gandhi Marriage matter:ಹುಟ್ಟಿದ ಮೇಲೆ ಗಂಡು-ಹೆಣ್ಣು ಮದುವೆಯಾಗೇ ಆಗುತ್ತಾರೆ. ಈಗ ಲಿಂಗ ತಪ್ಪಿಸದೆ ಗಂಡು ಗಂಡು, ಹೆಣ್ಣು ಹೆಣ್ಣು ಕೂಡಾ ಕಲ್ಯಾಣ ಕೂಟ ರಚಿಸಿಕೊಳ್ತಾರೆ. ಎಲ್ಲೋ ಪಾಪ, ಅಪರೂಪ ವೆಂಬಂತೆ ಕೆಲವರು ಆಗೋದಿಲ್ಲ. ಆದ್ರೆ ಈ ಮದುವೆ ಯಾಕಾಗ್ತಾರೆ ಅನ್ನೋ ಪ್ರಶ್ನೆ ಎಂದಾದರ್ರೂ ನಿಮಗೆ ಬಂದಿದ್ಯಾ? ಇಂತಹಾ ಕಾರಣ ಏಳುವಂತೆ ಮಾಡಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಮತ್ತು ಇದೀಗ ನಟ ಚೇತನ್ (Chetan Ahimsa).
ಮದುವೆ (Marriage) ಯಾಕಾಗಬಹುದು ಹೇಳಿ. ಕೆಲವರು ಸುಂದರ ಸಂಸಾರದೊಂದಿಗೆ ಬಾಳ್ವೆ ಮಾಡಲು ಅಂತ ಕಾರಣ ಕೊಡ್ಬೋದು, ಸಿಂಗಲ್ ಲೈಫ್ ಬೋರು ಎಂದು ಮತ್ತೆ ಕೆಲವರು ಜೋಡಿ ಆಗಲು ಹೊಂಚು ಹಾಕಬಹುದು. ಅಥವಾ ನಳಿನ್ ಕುಮಾರ್ ಕಟೀಲ್ ಹೇಳಿದಂತೆ ಮಕ್ಕಳು ಮಾಡೋಣ, ಶಕ್ತಿ ಪ್ರದರ್ಶನ ಆಗೇ ಬಿಡಲಿ ಎಂದು ಮದುವೆಗೆ ಹೊರಡಬಹುದು.
ಅಥವಾ ಇನ್ನೂ ಕೆಲವರು ಇನ್ನೇನು ಮಕ್ಕಳು ಆಗುತ್ತೆ, ಮಾನ ಹೋಗತ್ತೆ ಅನ್ನೋ ಕಾರಣಕ್ಕೆ ತರಾತುರಿಯಲ್ಲಿ ವಿವಾಹ ಆಗಬಹುದು. ಭರ್ಜರಿ ಆಸ್ತಿ ತನ್ನ ಪಾಲಾಗಲಿ ಎಂದು, ತನ್ನ ಬಳಿ ಇರೋ ಆಸ್ತಿ ಪರರ ಪಾಲಾಗಬಾರದು ಎಂದು, ಹುಡುಗಿ ಸೂಪರ್ ಇದ್ದಾಳೆ ಎಂದು – ಹೀಗೆ ನಾನಾ ಕಾರಣದಿಂದ ಮದುವೆಯಾಗ್ತಾರೆ. ಅರೇ ಈಗ್ಯಾಕಪ್ಪಾ ಈ ವಿಚಾರ ಇಲ್ಲಿ ಚರ್ಚೆಗೆ ಬಂತು, ಅದೂ ಕೂಡ ಈ ವಿಚಿತ್ರವಾದ ಪ್ರಶ್ನೆಯೊಂದಿಗೆ ಅನ್ಕೊಳ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೋಡಿ.
ಹೌದು, ನಟ ಚೇತನ್ ಅವರು ಮಕ್ಕಳನ್ನು ಹೊಂದಲು ಮಾತ್ರ ಮದುವೆಯಾಗಬೇಕೆ? ಎಂದು ಕೇಳಿರುವ ಪ್ರಶ್ನೆಯೊಂದು ನಮ್ಮಲ್ಲಿ ಈ ರೀತಿ ವಿಚಿತ್ರವಾದ ಪ್ರಶ್ನೆಗಳ ಸಮೂಹವನ್ನು ಹುಟ್ಟುಹಾಕಿದೆ. ಯಾಕಂದರೆ ಅವರ ಈ ಪ್ರಶ್ನೆಯನ್ನು ಅವಲೋಕಿಸಿದಾಗ ಮದುವೆಯಾಗೋದು ಯಾಕಪ್ಪಾ ಹಾಗಾದ್ರೆ? ಅನ್ನೋ ಪ್ರಶ್ನೆನೂ ಉದ್ಭವಿಸುತ್ತೆ.
ಅಂದಹಾಗೆ ಮದುವೆ ಅಂತ ಆದಮೇಲೆ ಸುಮ್ಮನೆ ಇದ್ರೆ ಏನು ಚಂದ ? ಮದುವೆ ಆದಮೇಲೆ ಏನಾದ್ರೂ ಮಾಡ್ಲೇ ಬೇಕಲ್ವಾ? ಮದ್ವೆಯಾಗಿ ಏನೂ ಮಾಡದೇ ಹೋದರೆ ಆಕೆ ಬಿಡಬೇಕಲ್ಲ ? ಮದುವೆಯಾಗಿ ಏನೂ ಮಾಡ್ಲಿಲ್ಲ ಅಂದ್ರೆ ಜನ ಏನ್ ಅನ್ಬೋದು ಹೇಳಿ? ಮದುವೆಯಾಗಿ ಏನೂ ಮಾಡಲಾಗದೆ ಜನರ ಮಾತು ಕೇಳೋ ಬದ್ಲು, ಮದುವೆಯಾಗದೇ ಎನಂದ್ರೂ ಸಹಿಸಿಕೊಳ್ಬೋದಲ್ವಾ? ಒಟ್ಟಾರೆಯಾಗಿ ಮದುವೆ ಅಂತ ಆದ ಮೇಲೆ ಏನಾದರೂ ಮಾಡಲೇ ಬೇಕು. ಏನಾದರೂ ಮಾಡಲು ಹೋದಾಗ ಮಕ್ಕಳು ಆಗೋದು ಸಹಜ ಅನ್ನೊದು ಮದುವೆ ಆಗಿ ಮಕ್ಕಳು ಮಾಡಿದ ಸಾಧಕರ ಅನುಭವದ ಮಾತು.
ಯಾಕೋ ಪ್ರಶ್ನೆಗಳು ವಿಚಿತ್ರ ಆಗ್ತಿದೆ ಅನಿಸ್ತಿದಿಯಾ? ಇದೆಲ್ಲ ಈಗ್ಯಾಕೆ ಅನ್ನಿಸ್ತಿದೆಯಾ ? ಅದಕ್ಕೂ ಒಂದು ಕಾರಣ ಇದೆ. ಅದನ್ನಿಲ್ಲಿ ಹೇಳಿದ್ರೆ ನಿಮಗೊಂದು ಕನೆಕ್ಷನ್ ಸಿಗ್ಬೋದು.
ಭಾರತದಲ್ಲಿ ಕೊರೋನಾ ಲಸಿಕೆ ವಿಚಾರ ಯಾವೆಲ್ಲ ಸ್ವರೂಪಗಳನ್ನು ಪಡೆದುಕೊಂಡಿತು ಎಂಬುದೆಲ್ಲಾ ನಿಮಗೆ ಗೊತ್ತಿದೆ. ಯಾವುದಾವುದೋ ವಿಚಾರಾದಿಯಾಗಿ ಚರ್ಚೆಯಾದ ಈ ವ್ಯಾಕ್ಸಿನ್ ವಿಚಾರ ಕೊನೆಗೆ ಇದನ್ನು ತಗೊಂಡ್ರೆ ಮಕ್ಕಳಾಗೋಲ್ವಂತೆ ಎಂಬ ಗಾಳಿ ಸುದ್ಧಿಯನ್ನು ಹರಡಿಸೋ ಮಟ್ಟಕ್ಕೆ ಹೋಗಿ ಹಲವರನ್ನು ನಂಬಿಸಿಯೇ ಬಿಟ್ಟಿತ್ತು. ಇದೇ ವಿಚಾರವೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮದುವೆ (Rahul Gandhi Marriage matter) ವಿಚಾರವಾಗಿ ಭಾರೀ ಸದ್ದುಮಾಡುತ್ತಿದೆ. ಬಿಜೆಪಿ ರಾಜ್ಯಾದಕ್ಷರು ಇದರ ಸೃಷ್ಟಿಗೆ ಕಾರಣವಾಗಿದ್ದಾರೆ.
ನಳಿನ್ ಕುಮಾರ್ ಅವರು ತಮ್ಮ, ಹಾಸ್ಯ ಮಿಶ್ರಿತ ಭಾಷಣದ ನಡುವೆ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಹೇಳಿದ ಮಾತು ಸಾಕಷ್ಟು ಸುದ್ಧಿಯಾಗಿತ್ತು. ಅಂದಹಾಗೆ ಕಟೀಲ್ ಅವ್ರು, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಕೋವಿಡ್ 19 ಲಸಿಕೆ ತೆಗೆದುಕೊಳ್ಳಬೇಡಿ, ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಎಂದಿದ್ದರು, ಆದರೆ ಸಿದ್ದರಾಮಯ್ಯ, ರಾಹುಲ್ ಅವರು ಓಡಿ ಹೋಗಿ ಲಸಿಕೆ ತೆಗೆದುಕೊಂಡರು. ಹೀಗೆ ಲಸಿಕೆ ತೆಗೆದುಕೊಂಡ ಕಾರಣಕ್ಕೇ ರಾಹುಲ್ ಗಾಂಧಿ ಮದುವೆಯಾಗುತ್ತಿಲ್ಲ ‘ ಎಂದು ಎಂಎಲ್‌ಸಿ ಮಂಜುನಾಥ್ ಅವರು ಹೇಳಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಒಟ್ನಲ್ಲಿ ರಾಹುಲ್ ಅವರ ಮದುವೆ ಕುರಿತು ಹೇಳಿದ ಮಾತೊಂದು ಇಷ್ಟೆಲ್ಲಾ ವಿಚಿತ್ರವಾದ ಆಲೋಚನೆಗಳಿಗೆ ಕಾರಣವಾಯ್ತು ನೋಡಿ.