Unique Tree: ಭಾರತದಲ್ಲಿದೆ ಅದ್ಭುತ ಮರ! ಇದರ ಹೂ ಕದಿಯಲು ವಿದೇಶದಿಂದ ಬರ್ತಾರೆ ಕಳ್ಳರು!
Unique Tree: ಪ್ರಕೃತಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ಎಲ್ಲರೂ ಪಚ್ಚ ಪಸಿರ ನಡುವಿನ ವನ ಸಿರಿಯ ಸೊಬಗನ್ನು ಸವಿಯಲು ಬಯಸುವುದು ಸಹಜ. ಈ ಜಗವೇ ಒಂದು ವಿಸ್ಮಯ ನಗರಿ. ಅರಿಯಲು ಹೋದಷ್ಟು ಮುಗಿಯದ ಅಧ್ಯಾಯದ ಹಾಗೆ ಭೂಗರ್ಭದಲ್ಲಿ ಅದೆಷ್ಟೋ ರಹಸ್ಯಗಳು ನಮಗರಿವಿಲ್ಲದೆ ನಡೆಯುತ್ತಲೇ ಇರುತ್ತವೆ.
ಹೌದು!! ಎಷ್ಟೋ ಮಂದಿಗೆ ತಿಳಿದಿರದ ಕುತೂಹಲಕಾರಿ ವಿಷಯದ ಕುರಿತು ನಾವಿಂದು ಹೇಳ ಹೊರಟಿದ್ದೇವೆ. ನಮ್ಮಲ್ಲಿ ಆಗುವ ಹೂವೊಂದನ್ನು ಕದಿಯಲು ವಿದೇಶದಿಂದ ಜನ ಬರುತ್ತಾರಂತೆ.
ಮಧ್ಯಪ್ರದೇಶದ ಮಂಡ್ಲಾ ನಗರದಿಂದ 50 ಕಿಲೋಮೀಟರ್ ದೂರದಲ್ಲಿರುವ ಗ್ರಾಮವೇ ಸಕ್ರಿ. ಈ ಗ್ರಾಮದಲ್ಲಿ ಬಿಳಿ ಪಾಲಾಶ್ ಮರ ಎಂಬ ವಿಶೇಷ ಮರವಿದ್ದು(Unique Tree), ಇದು ಕಂಡು ಬರುವುದು ಅಪರೂಪ ಎನ್ನಲಾಗಿದೆ. ಬಿಳಿ ಪಲಾಶವು ತಾಂತ್ರಿಕ ಆಚರಣೆಗಳಲ್ಲಿ ವಿಶೇಷ ಪ್ರಾಮುಖ್ಯತೆ ಹೊಂದಿದ್ದು, ಶಿವನಿಗೆ ಈ ಪಲಾಶದ ಹೂವುಗಳು, (Flower)ಎಲೆಗಳು (Leaf)ಮತ್ತು ತೊಗಟೆಯು ಪ್ರಿಯ ಎನ್ನಲಾಗುತ್ತದೆ.
ಭಗವಾನ್ ಶಿವನನ್ನು(Lord Shiva) ಈ ಹೂವಿನಿಂದ ಶೃಂಗಾರ ಕೂಡ ಮಾಡಲಾಗುತ್ತದೆ. ಋಷಿಗಳು ಮತ್ತು ಸಂತರು ಕೂಡ ಈ ಮರದ ಹೂವುಗಳು ಮತ್ತು ಎಲೆಗಳಿಂದ ಮಹಾಕಾಳನನ್ನು ಆರಾಧಿಸುತ್ತಿದ್ದರು. ಹೋಳಿ ಹಬ್ಬದ (Holi Festival) ಸಂದರ್ಭದಲ್ಲಿ ಈ ಮರದಲ್ಲಿ ಹೂಗಳು ಬಿಡುತ್ತವಂತೆ. ಈ ಮರದ ಹೂವನ್ನು ಪವಾಡ ಎನ್ನಲಾಗುತ್ತದೆ. ಅಷ್ಟೆ ಅಲ್ಲದೇ,ಇದನ್ನು ಜನರು ಭಕ್ತಿ ಮತ್ತು ನಂಬಿಕೆಯಿಂದ ಮನೆಗೆ ತಂದು ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಕೂಡ ಮಾಡುತ್ತಾರಂತೆ.ಈ ಮರದ ಹೂವುಗಳನ್ನು ಯಂತ್ರಗಳನ್ನು ತಯಾರಿಸಲು ಬಳಕೆ ಮಾಡಲಾಗುತ್ತದೆ. ಈ ಯಂತ್ರವು ಲಕ್ಷ್ಮಿಗೆ ಪರಿಣಾಮಕಾರಿ ಎಂದು ಕೂಡ ಹೇಳಲಾಗುತ್ತದೆ.ಈ ಮರದ ಹೂವನ್ನು ಕದಿಯೋದಕ್ಕೆ ದೇಶ-ವಿದೇಶಗಳಿಂದ ಜನರು ಸಕ್ರಿ ಗ್ರಾಮಕ್ಕೆ ಬರುತ್ತಾರಂತೆ. ಅಷ್ಟೆ ಅಲ್ಲದೇ ಮರದ ತೊಗಟೆಯನ್ನು ಕೂಡ ಕದಿಯಲಾಗುತ್ತದೆ.
ಕೆಲವು ಭಕ್ತರು ಮರಕ್ಕೆ ಹಾನಿ ಆಗಬಾರದು ಎಂದು ಮರವನ್ನು ರಕ್ಷಿಸುವ ನಿಟ್ಟಿನಲ್ಲಿ ಸಣ್ಣ ದೇವಾಲಯವನ್ನು ಕೂಡ ನಿರ್ಮಿಸಿದ್ದಾರೆ. ಹೋಳಿ ಹಬ್ಬದ ವೇಳೆ ಈ ಹೂವು ವಿಶೇಷ ಮಹತ್ವ ಪಡೆದುಕೊಂಡಿದೆ. ಈ ಮರದ ವಿಶಿಷ್ಟತೆ ಕಂಡುಕೊಂಡ ಆಡಳಿತ ಮಂಡಳಿಯು 1988 ರಲ್ಲಿ ಇದನ್ನು ಸಂರಕ್ಷಿಸಲು ಕ್ರಮ ಕೈಗೊಂಡರು ಕೂಡ ಇಂದಿಗೂ ಕಳ್ಳರು ಸರಾಗವಾಗಿ ಹೂವನ್ನು ಕದ್ದುಕೊಂಡು ಹೋಗುತ್ತಾರಂತೆ.