ವಿಧಾನಸಭಾ ಚುನಾವಣೆ : ಬಿಜೆಪಿಯ 6 ಮಂದಿ ಹಾಲಿ ಶಾಸಕರಿಗೆ ಟಿಕೇಟ್ ಇಲ್ಲ – ಬಿ.ಎಸ್.ವೈ
BS Yediyurappa: ಬೆಂಗಳೂರು: ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕಾರು ಜನ ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ. ಉಳಿದಂತೆ ಎಲ್ಲ ಶಾಸಕರಿಗೆ ಟಿಕೆಟ್ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.
ಕಲಬುರ್ಗಿ ವಿಭಾಗದಲ್ಲಿ ವಿಜಯ ಸಂಕಲ್ಪ ರಥಯಾತ್ರೆಗೆ ಪೂರ್ವಭಾವಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ ವೈ, ರಾಜ್ಯದಲ್ಲಿ ಕನಿಷ್ಠ 140 ಸೀಟು ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದ್ದಾರೆ. ಆ ಸಂದರ್ಭದಲ್ಲಿ ಮಾತಾಡಿದ ಬಿ ಎಸ್ ಯಡಿಯೂರಪ್ಪನವರು, ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಮಂದಿ ಹಾಲಿ ಶಾಸಕರಿಗೆ ಟಿಕೆಟ್ ದೊರಕುವುದಿಲ್ಲ ಅಂದಿದ್ದಾರೆ. ಆ ಮೂಲಕ ಹೆಚ್ಚಿನ ಎಲ್ಲಾ ಬಿಜೆಪಿ ಶಾಸಕರ ಸ್ಥಾನಗಳು ಭದ್ರ ಅನ್ನುವುದು ಖಚಿತ ಆಗಿದೆ.
ಅದರ ಜತೆಗೆ, ಆ ನಾಲ್ಕು ಜನ ದುರದೃಷ್ಟಶಾಲಿ ಶಾಸಕರು ಯಾರು ಇರಬಹುದು ಎನ್ನುವ ಕುತೂಹಲ ಉಂಟಾಗಿದೆ. ಈ ಶಾಸಕರು ಬಿಜೆಪಿ ತೊರೆಯಲಿರುವ ಕಾರಣ ಅವರಿಗೆ ಟಿಕೆಟ್ ಮಿಸ್ ಆಗುತ್ತಿದೆಯಾ, ಅಥವಾ ಆ ನಾಲ್ಕು ಜನ ಶಾಸಕರ ಕ್ಷೇತ್ರದ ಕೆಲಸಗಳು ಸಮರ್ಪಕವಾಗಿ ಆಗದೆ ಜನ ಬೇಸತ್ತಿದ್ದಾರೆಯೇ ಎನ್ನುವ ಅನುಮಾನ ಕಾಡಲು ಶುರುವಾಗಿದೆ. ಅಥವಾ, ಸ್ಥಳೀಯ ರಾಜಕೀಯ ಸ್ಥಿತ್ಯಂತರಗಳು ಮತ್ತು ಇತರ ಪಕ್ಷಗಳ ಮತ್ತವರ ಅಭ್ಯರ್ಥಿಗಳ ಹೊಂದಾಣಿಕೆ, ಜಾತಿ ಲೆಕ್ಕಾಚಾರ ಇತ್ಯಾದಿಗಳ ಕಾರಣದಿಂದ ಆ ನಾಲ್ವರು ಟಿಕೆಟ್ ಮಿಸ್ ಮಾಡಿಕೊಳ್ಳುತ್ತಿದ್ದಾರಾ- ಸದ್ಯಕ್ಕೆ ಯಾವುದೂ ಖಚಿತವಿಲ್ಲ. ಅಷ್ಟಕ್ಕೂ ಯಾರಾ ಶಾಸಕರು ಎನ್ನುವ ಜಿಜ್ಞಾಸೆಯಲ್ಲಿ ಬಿಜೆಪಿಯ ಬೆಂಬಲಿಗರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.