ದೇವಸ್ಥಾನದಲ್ಲಿ ಮುಸ್ಲಿಂ ಪದ್ಧತಿಯಂತೆ ಮದುವೆಯಾದ ಮುಸ್ಲಿಂ ಜೋಡಿಗಳು
Muslim couple :ಹಿಮಾಚಲ ಪ್ರದೇಶದ ಶಿಮ್ಲಾ (Shimla) ದಲ್ಲಿ ಹಿಂದೂ ದೇವಾಲಯದ (Temple) ಆವರಣದಲ್ಲಿ ಮುಸ್ಲಿಂ ಜೋಡಿಗಳು (Muslim Couple) ಇಸ್ಲಾಮಿಕ್ ಪದ್ಧತಿಯಂತೆ ವಿವಾಹವಾಗುವ (Marriage) ಮೂಲಕ ವಿಶೇಷವಾಗಿ ಸುದ್ದಿಯಾಗಿದ್ದಾರೆ.
ಹಿಮಾಚಲ ಪ್ರದೇಶದ ರಾಮ್‍ಪುರದ ಶಿಮ್ಲಾ ದ ವಿಶ್ವ ಹಿಂದೂ ಪರಿಷತ್ತಿನ ಠಾಕೂರ್ ಸತ್ಯನಾರಾಯಣ ದೇವಸ್ಥಾನದಲ್ಲಿ ಈ ಅಪರೂಪದ ವಿವಾಹ ನೆರವೇರಿದೆ. ನಡೆದ ಮುಸ್ಲಿಂ ಜೋಡಿಯ ವಿವಾಹ ಸಮಾರಂಭಕ್ಕೆ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನಸ್ತೋಮ ನೆರೆದಿತ್ತು. ವಧು ವರರಿಬ್ಬರೂ ಉನ್ನತ ವ್ಯಾಸಂಗ ನಡೆಸಿದ್ದು ಇಬ್ಬರು ಇಂಜಿನಿಯರ್ ಆಗಿದ್ದಾರೆ. ವಧು ಎಂಟೆಕ್ ಸಿವಿಲ್ ಇಂಜಿನಿಯರ್ ಆಗಿದ್ದು, ವರ ಸಿವಿಲ್ ಇಂಜಿನಿಯರ್ ಆಗಿದ್ದಾರೆ.
ಅಲ್ಲಿನ ಸತ್ಯನಾರಾಯಣ ದೇವಾಲಯ ಸಂಕೀರ್ಣವು ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಚೇರಿಯಾಗಿದೆ. ಅಲ್ಲಿನ ದೇವಸ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಹೇಳಿಕೆ ನೀಡಿ, ವಿಶ್ವ ಹಿಂದೂ ಪರಿಷತ್ ಹಾಗೂ ಆರ್‌ಎಸ್‍ಎಸ್ ‘ನ್ನು ಮುಸ್ಲಿಂ ವಿರೋಧಿ ಎಂದು ಆರೋಪಿಸಲಾಗುತ್ತದೆ. ಆದರೆ ನಾವು ಇಲ್ಲಿ ಮುಸ್ಲಿಂ ಜೋಡಿಯ ವಿವಾಹ ನೆರವೇರಿಸುವ ಮೂಲಕ ಸನಾತನ ಧರ್ಮವು ಯಾವಾಗಲೂ ಎಲ್ಲರನ್ನು ಕೂಡಾ ಪ್ರೇರೆಪಿಸುತ್ತದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದರು.
ಈ ಭಾವೈಕ್ಯದ ವಿವಾಹ ಸಂದರ್ಭದಲ್ಲಿ ಹಿಂದೂ ಭಕ್ತರಗಳು, ಮೌಲ್ವಿಗಳು, ವಕೀಲರು, ಅತಿಥಿಗಳು ದೇವಾಲಯದ ಆವರಣದಲ್ಲಿ ಸೇರಿದ್ದರು. ಸಹೋದರತ್ವದ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಮದುವೆಯನ್ನು ದೇವಸ್ಥಾನದ ಆವರಣದಲ್ಲಿ ಮಾಡಲಾಗಿತ್ತು ಎಂದು ವಧುವಿನ ತಂದೆ ತಿಳಿಸಿದ್ದಾರೆ.