MS Dhoni : ಕೂಲ್‌ ಕ್ಯಾಫ್ಟನ್‌ ಧೋನಿ ಫಾಲೋ ಮಾಡುವ ಇನ್ಸ್ಟಾಗ್ರಾಂ ಫಾಲೋವರ್ಸ್‌ ಯಾರು ಗೊತ್ತೇ? ನಿಮ್ಮ ಊಹೆಗೆ ನಿಲುಕದ ಹೆಸರುಗಳು ಇವು!

MS Dhoni: ಮಹೇಂದ್ರ ಸಿಂಗ್‌ ಧೋನಿ ಟೀಮ್ ಇಂಡಿಯಾದ ಕ್ಯಾಪ್ಟನ್ ಕೂಲ್ ಅಂತಾನೆ ಫೇಮಸ್. ವಿಶ್ವ ಕ್ರಿಕೆಟ್‌ ಕಂಡ ಅಪ್ರತಿಮ ಆಟಗಾರ ಮಾತ್ರವಲ್ಲ ಎಷ್ಟೇ ಒತ್ತಡದ ಪರಿಸ್ಥಿತಿಯಲ್ಲಿಯೂ ಶಾಂತ ಚಿತ್ತತೆಯಿಂದ ಗಮನ ಸೆಳೆದ ಟೀಮ್‌ ಇಂಡಿಯಾ ಸೋಲಬೇಕಿದ್ದ ಅದೆಷ್ಟೋ ಪಂದ್ಯಗಳನ್ನು ಗೆದ್ದುಕೊಟ್ಟು ಸಾರ್ವಕಾಲಿಕ ಶ್ರೇಷ್ಠ ಫಿನಿಷರ್‌ ಎಂದೇ ಖ್ಯಾತಿ ಪಡೆದ ನಾಯಕ.

 

ನಾವು ಸಾಮಾನ್ಯವಾಗಿ ಯಾವುದೇ ಸೆಲೆಬ್ರಿಟಿಗಳು( celebrity) ಸ್ಟಾರ್ ಕ್ರಿಕೆಟರ್ ಗಳನ್ನು ಕಂಡರೂ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿರುವುದನ್ನು ಕಾಣಬಹುದು. ಆದರೆ ನಮ್ಮ ಕ್ಯಾಪ್ಟನ್ ಕೂಲ್ ಮಾತ್ರ ನಿಮಗೆ ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವುದು ಕಡಿಮೆ. ಯಾಕಂದ್ರೆ ಅವರು ಸೋಶಿಯಲ್ ಮೀಡಿಯಾ ಬಳಕೆ ಮಾಡೋದೆ ಕಮ್ಮಿಯಂತೆ. ಆದರೆ ಮಹಿ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿಯ ವಿಚಾರ ಒಂದಿದೆ. ಅದೇನು ಅಂತೀರಾ?

ಇಂದು ಟ್ವಿಟರ್, ಇನ್ಸ್ಟಾಗ್ರಾಂ (Instagram Accounts), ಫೇಸ್ ಬುಕ್ ( Facebook) ಹೀಗೆ ನಮ್ಮ ನೆಚ್ಚಿನ ನಟ ಇಲ್ಲವೇ ಸ್ಟಾರ್ ಕ್ರಿಕೆಟರ್ ಗಳ ಖಾತೆಯನ್ನು ಫಾಲೋ ಮಾಡುವ ಅವರ ಪೋಸ್ಟ್ ಗಳಿಗೆ ಲೈಕ್ , ಕಾಮೆಂಟ್ ಮಾಡುವ ಹವ್ಯಾಸ ಹೆಚ್ಚಿನವರಿಗೆ ಇದೆ. ಸೆಲೆಬ್ರಿಟಿಗಳೆಂದ ಮೇಲೆ ಹೆಚ್ಚಿನ ಫಾಲೋವರ್ಸ್ ಇರೋದು ಸಹಜ. ಅದೇ ರೀತಿ, ಮಹೇಂದ್ರ ಸಿಂಗ್​​ ಧೋನಿ (MS Dhoni)ಅವರಿಗೆ ಇನ್ಸ್ಟಾಗ್ರಾಂನಲ್ಲಿ ಬರೋಬ್ಬರಿ 40 ಮಿನಿಯನ್​​ಗೂ ಹೆಚ್ಚು ಅನುಯಾಯಿಗಳಿದ್ದಾರೆ. ಆದರೆ ಮಹೇಂದ್ರ ಸಿಂಗ್ ಧೋನಿ ಕೇವಲ ಐದು ಜನರನ್ನು ಮಾತ್ರ ಫಾಲೋ (Follow) ಮಾಡುತ್ತಿದ್ದಾರೆ. ಹಾಗಿದ್ರೆ, ಮಹೇಂದ್ರ ಸಿಂಗ್​​ ಧೋನಿ ಸಾಮಾಜಿಕ ಜಾಲತಾಣವಾದ ಇನ್ಸ್ತಾಗ್ರಂ ನಲ್ಲಿ ಅನುಸರಿಸುತ್ತಿರುವ ಐದು ಜನರು ಯಾರು ಎಂಬ ಕುತೂಹಲ ಸಹಜವಾಗಿ ಕಾಡುತ್ತದೆ.

ಕ್ಯಾಪ್ಟನ್ ಕೂಲ್ ಸಾಮಾನ್ಯವಾಗಿ ಕ್ರಿಕೆಟ್ ಪ್ಲೇ ಗ್ರೌಂಡ್ ಬಿಟ್ಟರೆ ಹೆಚ್ಚಿನ ಸಮಯವನ್ನು ಕೃಷಿ ಭೂಮಿಯಲ್ಲಿ ಕಳೆಯುತ್ತಾರೆ. ಹೀಗಾಗಿ, ಅವರು ಹೆಚ್ಚಾಗಿ ಕೃಷಿಗೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನೂ ಅವರು ಇನ್ಸ್ಟಾಗ್ರಾಂನಲ್ಲಿ ಯಾರನ್ನೆಲ್ಲ ಫಾಲೋ ಮಾಡ್ತಾರೆ ಅಂತ ಗಮನಿಸಿದರೆ, ಅವರ ನೆಚ್ಚಿನ ಪಟ್ಟಿಯಲ್ಲಿ ಕಂಡುಬರುವ ಹೆಸರುಗಳೇ ಆಗಿವೆ.

ಮಹೇಂದ್ರ ಸಿಂಗ್ ಧೋನಿಯವರ ಫಾಲೋವರ್ ಲಿಸ್ಟ್ ನಲ್ಲಿ ಮೊದಲ ವ್ಯಕ್ತಿ ಪತ್ನಿ ಸಾಕ್ಷಿ ಧೋನಿ ಆಗಿದ್ದು, ಎರಡನೇ ವ್ಯಕ್ತಿ ಮಹಿ ಮಗಳು ಝೀವಾ. ಐಪಿಎಲ್ ಸಮಯದಲ್ಲಿ ಮೈದಾನದಲ್ಲಿ ಧೋನಿಗೆ ಮಗಳ ಮೇಲೆ ಎಷ್ಟು ಪ್ರೀತಿ ಇದೆ ಎಂಬ ಸತ್ಯ ಬಟ್ಟಾ ಬಯಲಾಗಿದ್ದು ನೆನಪಿರಬಹುದು. ಎಲ್ಲರಿಗೂ ಗೊತ್ತಿರುವ ಹಾಗೆ ಧೋನಿ ಅವರು ತಮ್ಮ ಕುಟುಂಬದವನ್ನು ಹೆಚ್ಚು ಇಷ್ಟಪಡುವುದಲ್ಲದೆ ತಮ್ಮ ನಿವೃತ್ತಿಯ ಬಳಿಕ ಹೆಚ್ಚಾಗಿ ಸಾಕ್ಷಿ ಮತ್ತು ಮಗಳು ಅವರೊಂದಿಗೆ ಕಾಲ ಕಳೆಯುತ್ತಾರೆ.

ಸೆಲೆಬ್ರಿಟಿಗಳ ಬಗ್ಗೆ ಕೇಳಿದರೆ, ಮಹೇಂದ್ರ ಸಿಂಗ್ ಧೋನಿ ಒಬ್ಬ ನಟನನ್ನು ಮಾತ್ರ ಫಾಲೋ ಮಾಡುತ್ತಿದ್ದು, ಆ ನಟ ಬೇರಾರೂ ಅಲ್ಲ ಬಿಗ್ ಬಿ ಅಮಿತಾಬ್ ಬಚ್ಚನ್. ಅಮಿತಾಬ್ ಬಚ್ಚನ್ ಇನ್‌ಸ್ಟಾಗ್ರಾಮ್‌ನಲ್ಲಿ 30 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಮಹಿ ಮತ್ತೊಂದು ಖಾತೆಯನ್ನು ಫಾಲೋ ಮಾಡುತ್ತಿದ್ದು, ಕೆನಾಲ್ ಮಿಲಿಟರಿಜಾಂಡೋ ಎಂಬ ಹೆಸರಿನ ಖಾತೆಯನ್ನ ಮಹೇಂದ್ರ ಸಿಂಗ್ ಧೋನಿ ಅನುಸರಿಸುತ್ತಿದ್ದಾರೆ. ಆದರೆ ಇದು ಮಿಲಿಟರಿಗೆ ಸಂಬಂಧಿಸಿದ ಖಾತೆಯಂತೆ ಕಾಣುತ್ತದೆ. ಮಹೇಂದ್ರ ಸಿಂಗ್ ಧೋನಿ ಈಗಲೂ ಭಾರತೀಯ ಸೇನೆಯೊಂದಿಗೆ ಸಂಬಂಧ ಹೊಂದಿದ್ದು, ಈ ಖಾತೆಯನ್ನು ಯಾರು ಬಳಕೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದಿಲ್ಲ.

Leave A Reply

Your email address will not be published.