Maruti suzuki : ಕೇವಲ 3 ಲಕ್ಷ ರೂಪಾಯಿಗೆ ಮನೆಗೆ ತನ್ನಿ ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್‌ಜಿ ಕಾರು! ವೈಶಿಷ್ಟ್ಯತೆ ಮಾತ್ರ ಸೂಪರ್!!

Maruti suzuki swift CNG :ಜನಪ್ರಿಯ ಕಾರು(car) ತಯಾರಿಕಾ ಕಂಪನಿ ಮಾರುತಿ(maruti suzuki) ಮಾರುಕಟ್ಟೆಗೆ ಹಲವು ನೂತನ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಅತ್ಯುತ್ತಮ ಮೈಲೇಜ್ ಜೊತೆಗೆ ಭಾರೀ ಅಗ್ಗದ ಬೆಲೆಗೆ ನಾಲ್ಕು ಹೊಸ ಕಾರುಗಳನ್ನು ಪರಿಚಯಿಸಲು ಸಜ್ಜಾಗಿದೆ. ಹಾಗೆಯೇ ಕಂಪನಿಯ ಸುಜುಕಿ ಸ್ವಿಫ್ಟ್ ಸಿಎನ್‌ಜಿ(maruti suzuki swift cng) ಕಾರು ಜನಪ್ರಿಯತೆ ಪಡೆದಿದ್ದು, ಗ್ರಾಹಕರಿಗೆ ಖರೀದಿಗೆ ಕೇವಲ 3 ಲಕ್ಷ ರೂಪಾಯಿಗೆ ಲಭ್ಯವಾಗಲಿದೆ.
ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್‌ಜಿಯ ಸಂಪೂರ್ಣ ವಿವರ ಇಲ್ಲಿದೆ.

 

1.2-ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ (90PS/113Nm) ಹೊಂದಿದ್ದು, ಇದು 5-ಸ್ಪೀಡ್ AMTಯ ಗೇರ್ ಬಾಕ್ಸ್ ಪಡೆದಿದೆ. 5-ಸ್ಪೀಡ್ ಮ್ಯಾನುವಲ್ ಆಯ್ಕೆಯೊಂದಿಗೆ ಮಾತ್ರ ಈ ಕಾರು ಲಭ್ಯವಿದ್ದು, CNG ಜೊತೆಗೆ ಇದರ ಮೈಲೇಜ್ 30.90km/kg ವರೆಗೆ ಇರಲಿದೆ. ಸುಜುಕಿ ಸ್ವಿಫ್ಟ್ ಸಿಎನ್‌ಜಿಯ ಬೆಲೆ 6 ಲಕ್ಷದಿಂದ 8.98 ಲಕ್ಷದವರೆಗೆ ಇರಲಿದೆ.

ಮಾರುತಿ ಸ್ವಿಫ್ಟ್ CNG ಕಾರು VXi, ZXi ರೂಪಾಂತರಗಳಲ್ಲಿ ಲಭ್ಯವಿದೆ. ಎರಡೂ ರೂಪಾಂತರಗಳು 1.2 ಲೀಟರ್ ಕೆ ಸರಣಿಯ ಎಂಜಿನ್ ಅನ್ನು ಹೊಂದಿವೆ. VXI CNG ಯ ಎಕ್ಸ್ ಶೋ ರೂಂ ಬೆಲೆ 7.80 ಲಕ್ಷ ಆಗಿದೆ. ಲೋನ್‌ ಮೂಲಕ ಖರೀದಿಸಿದರೆ 3 ಲಕ್ಷ ರೂ.ಗಳನ್ನು ಪಾವತಿಸಿ, ಉಳಿದ ಮೊತ್ತವನ್ನು EMI ಮೂಲಕ ಪಾವತಿಸಬಹುದು.

ಮಾರುತಿ ಸ್ವಿಫ್ಟ್ ಸಿಎನ್ ಜಿ ಕಾರು(car) ಪ್ರತಿ ಕೆಜಿಗೆ 30.9 ಕಿಮೀ ಮೈಲೇಜ್ ನೀಡುತ್ತದೆ. ರಿಯರ್ ಪಾರ್ಕಿಂಗ್ ಸೆನ್ಸಾರ್, ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಮ್ಯೂಸಿಕ್ ಸಿಸ್ಟಂ, 4-ಸ್ಪೀಕರ್ ಆಡಿಯೋ ಸಿಸ್ಟಮ್, ಸಿಂಗಲ್ ಟೋನ್ ಇಂಟೀರಿಯರ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ನಂತಹ ವೈಶಿಷ್ಟ್ಯಗಳಿವೆ.

Leave A Reply

Your email address will not be published.