ಮದ್ಯಪಾನದ ಜೊತೆ ವಯಾಗ್ರ ಮಾತ್ರೆ ತಗೊಂಡ ವ್ಯಕ್ತಿ, ಕಾಮಾಸಕ್ತಿ ಕೆರಳೋ ಮೊದಲೇ ವ್ಯಕ್ತಿಗೇನಾಯ್ತು?
Viagra pills: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಚಾರ ಎಲ್ಲರಿಗೂ ಗೊತ್ತಿರುವಂತಹದ್ದೇ. ಆದರೆ, ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ 2 ವಯಾಗ್ರ ಮಾತ್ರೆ (viagra pills) ಸೇವಿಸಿ ಸಾವಿನ ಕದ (Death Case) ತಟ್ಟಿದ ಘಟನೆ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ.
ಮದ್ಯ ಸೇವಿಸಿದ ವ್ಯಕ್ತಿ ಸಿಲ್ಡೆನಾಫಿಲ್ನ ಎರಡು 50 ಎಂಜಿ ಮಾತ್ರೆಯನ್ನು ಸೇವಿಸಿದ್ದು, ಈ ಸಂಯೋಜನೆಯನ್ನು ವಯಾಗ್ರ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ ಎನ್ನಲಾಗಿದೆ. ಮೃತ ಪಟ್ಟ ವ್ಯಕ್ತಿ ಸ್ನೇಹಿತನನ್ನು ಭೇಟಿಯಾಗಲು ಹೋಟೆಲ್ನಲ್ಲಿ (Hotel)ತಂಗಿದ್ದ. ಮಾತ್ರೆ (tablet) ಸೇವಿಸಿದ ಪರಿಣಾಮ, ಮಾರನೇ ದಿನ ಬೆಳಗ್ಗೆ ಆಗುವಷ್ಟರಲ್ಲಿ ಆತನ ಆರೋಗ್ಯ ಹದಗೆಟ್ಟಿದೆ. ಹೀಗಾಗಿ, ವಾಂತಿ (vomit)ಕೂಡ ಅರಂಭವಾಗಿದೆ. ಇದನ್ನು ಸಾಮಾನ್ಯ ಸಮಸ್ಯೆ ಎಂದು ಭಾವಿಸಿ ಸ್ವಲ್ಪ ಹೊತ್ತಿನ ಬಳಿಕ ಸರಿ ಹೋಗಬಹುದು ಎಂದುಕೊಂಡು ಮದ್ಯ ಸೇವಿಸಿದ ವ್ಯಕ್ತಿ ಆಸ್ಪತ್ರೆಗೆ ಭೇಟಿ ನೀಡುವುದು ಬೇಡವೆಂದು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾನೆ. ಆದರೆ, ಪರಿಸ್ಥಿತಿ ಕೈ ಮೀರಿ ಹೋಗುವ ಹಾಗೇ ಅನಿಸಿದಾಗ ಸ್ನೇಹಿತರು ವ್ಯಕ್ತಿಯನ್ನು ಆಸ್ಪತ್ರೆಗೆ (Hospital) ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಿ ವ್ಯಕ್ತಿಯ ಪ್ರಾಣ ಪಕ್ಷಿ ಹಾರಿ ಹೋಗಿದ್ದನ್ನು ವೈದ್ಯರು (doctor) ಖಚಿತಪಡಿಸಿದ್ದಾರೆ.
ಮೃತ ಪಟ್ಟ ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವೇಳೆ, 300mg ರಕ್ತ ಹೆಪ್ಪುಗಟ್ಟುವಿಕೆ ಕಂಡುಬಂದಿದ್ದು, ಅಧ್ಯಯನದ ಅನುಸಾರ, ಈ ವ್ಯಕ್ತಿಯಲ್ಲಿ ಸೆರೆಬ್ರೊವಾಸ್ಕುಲರ್ ಹೆಮರೇಜ್ ಸಮಸ್ಯೆ ಕಂಡು ಬಂದಿದೆ. ಇದರಿಂದ ಮೆದುಳಿಗೆ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡು ವ್ಯಕ್ತಿ ಅಸುನೀಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಈ ವ್ಯಕ್ತಿಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ. ಆಲ್ಕೋಹಾಲ್ ಮತ್ತು ಡ್ರಗ್ಸ್ ಮಿಶ್ರಣದ ಪರಿಣಾಮ ಅಧಿಕ ರಕ್ತದೊತ್ತಡದಿಂದ ವ್ಯಕ್ತಿ ಸಾವನ್ನಪ್ಪಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದು, ವೈದ್ಯರ ಸಲಹೆಗಳಿಲ್ಲದೆ ಯಾವುದೇ ಔಷಧಗಳನ್ನು ತೆಗೆದುಕೊಳ್ಳುವುದು ಜೀವಕ್ಕೆ ಮಾರಕವಾಗಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದರು ತಪ್ಪಾಗದು.