Island Purchase: ನೀವೂ ದ್ವೀಪ ಖರೀದಿಸಬಹುದು! ಇಲ್ಲಿನ ದ್ವೀಪಗಳು ಮಾರಾಟಕ್ಕಿದೆ; ಫೆಸಿಲಿಟೀಸ್ ಸೂಪರ್!!

Island Purchase: ಕೆಲವರಿಗೆ ಒಂದೇ ಸ್ಥಳದಲ್ಲಿ ಜೀವನ ನಡೆಸಿ ಬೇಸರವೆನಿಸಿರುತ್ತದೆ. ಪ್ರಪಂಚದ ಮೂಲೆ ಮೂಲೆಗೂ ಸುತ್ತಾಡುವ ಆಸೆ ಇನ್ನೂ ಕೆಲವರದು. ಅದಕ್ಕೆಂದೇ ಇತ್ತೀಚೆಗೆ ಟೂರ್ ಪ್ಯಾಕೇಜ್ ಕೂಡ ಲಭ್ಯವಿದೆ. ಪ್ರೇಕ್ಷಣೀಯ ಸ್ಥಳ, ದ್ವೀಪಗಳಿಗೆಲ್ಲಾ ಭೇಟಿ ನೀಡಿ, ಸ್ಥಳದ ಸೊಬಗನ್ನು ಆನಂದಿಸಬಹುದು. ಆದರೆ ನಿಮಗೆ ಅನಿಸಿರಬಹುದು ದ್ವೀಪದಲ್ಲೇ ಮನೆಯಿದ್ದರೆ ಚೆನ್ನಾಗಿತ್ತು. ದ್ವೀಪ (Island) ಸುಂದರವಾಗಿದೆ ಇಲ್ಲೇ ಜೀವನಪೂರ್ತಿ ಇದ್ದಿದ್ದರೆ ಒಳ್ಳೆಯದಿತ್ತು ಎಂದು. ಅದಕ್ಕೇನಂತೆ ಅಲ್ಲೇ ವಾಸಿಸಬಹುದು. ಹೌದು, ಇಲ್ಲೊಂದು ದ್ವೀಪ ಮಾರಾಟಕ್ಕಿದೆ (Island Purchase). ಯಾವ ದ್ವೀಪ? ವಿಶೇಷತೆ ಏನಿದೆ ನೋಡೋಣ?

 

ಪ್ರಪಂಚದಾದ್ಯಂತ ದ್ವೀಪಗಳನ್ನು ಖರೀದಿ ಮತ್ತು ಮಾರಾಟ ಮಾಡಲಾಗುತ್ತದೆ. ಕೆಲವೆಡೆ ದ್ವೀಪಗಳನ್ನು ಬಾಡಿಗೆಗೆ ಕೂಡ ನೀಡಲಾಗುತ್ತದೆ. ಹಲವು ಕಂಪನಿಗಳು ಆನ್‌ಲೈನ್‌(online)ನಲ್ಲಿ ದ್ವೀಪಗಳನ್ನು ಮಾರಾಟ ಮಾಡುತ್ತವೆ. ಇದೀಗ ಥೈಲ್ಯಾಂಡ್(Thailand) ಬಳಿಯ ರಂಗಾಯಿ ದ್ವೀಪ(rangyai island) ಮಾರಾಟ ಮಾಡಲಾಗುತ್ತಿದೆ. ಇದರ ಬೆಲೆ US$ 160 ಮಿಲಿಯನ್ ಅಂದ್ರೆ ರೂ. 1307 ಕೋಟಿ ಆಗಿದೆ. ಇದು ಪ್ರದೇಶದ ಅತಿದೊಡ್ಡ ದ್ವೀಪವಾಗಿದೆ. 110 ಎಕರೆ ಪೂರ್ಣ ರಂಗಾಯಿ ದ್ವೀಪವೇ ಇದೆ.

ದ್ವೀಪ ಅಂದ್ರೆ ಸೌಲಭ್ಯಗಳಿರುತ್ತವೋ? ಇಲ್ಲವೋ? ಎಂಬ ಯೋಚನೆ ಇರಬಹುದು. ಆದರೆ ರಂಗಾಯಿ ದ್ವೀಪದಲ್ಲಿ ವಿದ್ಯುತ್(current) ಸರಬರಾಜಿನಿಂದ ಹಿಡಿದು ಸಂಕೇತದವರೆಗೆ ಎಲ್ಲವೂ ಇದೆ. ಈ ದ್ವೀಪ ಫುಕೆಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(airport)ದಿಂದ 20 ನಿಮಿಷಗಳ ದೂರದಲ್ಲಿದೆ. ದೋಣಿಯ ಮೂಲಕ ದ್ವೀಪವನ್ನು ತಲುಪಬಹುದು. ತುಂಬಾ ಸುಂದರವಾದ ಸ್ಥಳ. ನಿಶ್ಶಬ್ದವಾದ, ಶಾಂತಿಯುತ ವಾತಾವರಣ. ಮನಸ್ಸಿಗೆ ಹಾಯೆನಿಸುವುದಂತು ಖಂಡಿತ!!

ಇದೊಂದೇ ಅಲ್ಲ, ಯುರೋಪಿನ ಪ್ಯಾಟ್ರೋಕ್ಲಸ್ ದ್ವೀಪ ಕೂಡ ಮಾರಾಟಕ್ಕಿದೆ. ಈ ದ್ವೀಪ 643 ಎಕರೆಗಳಲ್ಲಿ ವಿಸ್ತಾರವಾಗಿ ಹರಡಿದೆ. ಇದು ಅಥೆನ್ಸ್ ಬಳಿ ಇದೆ. ಈ ದ್ವೀಪದಲ್ಲಿ ಸಾಗುವಳಿ ಭೂಮಿ ಕೂಡ ಇದೆಯಂತೆ. ಆಲಿವ್ ಮತ್ತು ಪೈನ್ ಹೊರತುಪಡಿಸಿ 5 ಸಾವಿರಕ್ಕೂ ಅಧಿಕ ಮರಗಳು ಈ ದ್ವಿಪದಲ್ಲಿದೆ. ಅಷ್ಟೇ ಅಲ್ಲ ಇಲ್ಲಿನ ಹವಾಮಾನ ವರ್ಷವಿಡೀ ಹಿತಕರವಾಗಿರುತ್ತದೆ ಎಂದು ಹೇಳಲಾಗಿದೆ. ಇಲ್ಲಿಯ ವಾತಾವರಣ ಮನಸ್ಸಿಗೆ ಖುಷಿ ಕೊಡುತ್ತದೆ.

ನಿಮಗೆ ಗೊತ್ತಾ? ಹಾಲಿವುಡ್(Hollywood), ಬಾಲಿವುಡ್(Bollywood) ಸೆಲೆಬ್ರಿಟಿಗಳ ಬಳಿ ದ್ವೀಪಗಳಿವೆ. ಮಿಕಾ(mica), ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez), ಶಾರುಖ್ ಖಾನ್(Shah Rukh Khan) ಇವರು ತಮ್ಮದೇ ಆದ ದ್ವೀಪಗಳನ್ನು ಹೊಂದಿದ್ದಾರೆ. ಈಗ ನೀವೂ ಕೂಡ ಹಣವಿದ್ದರೆ ದ್ವೀಪ ಖರೀದಿಸಬಹುದು. ಅದ್ಭುತ ವಾತಾವರಣದ ಸೊಬಗನ್ನು ಆನಂದಿಸಬಹುದು. ಫೆಸಿಲಿಟೀಸ್ ಕೂಡ ಸೂಪರ್ ಆಗೇ ಇರಲಿದೆ.

Leave A Reply

Your email address will not be published.