Heat Wave : ರಾಜ್ಯದಲ್ಲಿ ಕಂಡು ಕೇಳದ ಬಿಸಿಗಾಳಿ ಎಫೆಕ್ಟ್! ಮುನ್ನೆಚ್ಚರಿಕೆಗೆ ಇಲಾಖೆ ಗೈಡ್‌ಲೈನ್ಸ್!!
Heat Wave: ಹವಾಮಾನ ವೈಪರಿತ್ಯ ಉಂಟಾಗಿ ಉಷ್ಣಾಂಶದಿಂದ ರಾಜ್ಯದಲ್ಲಿ ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳು ಕಂಡು ಬರುವ ಸಾಧ್ಯತೆಗಳಿದ್ದು, ಹೀಗಾಗಿ, ಆರೋಗ್ಯ ಇಲಾಖೆ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ (IMD)ಮಾರ್ಚ್‌ನಿಂದ ಮೇ ಋತುವಿನಲ್ಲಿ ಬಿಸಿಗಾಳಿಯು (Heat Wave) ಮಧ್ಯ ಮತ್ತು ವಾಯುವ್ಯ ಭಾರತದ ಹಲವು ಪ್ರದೇಶಗಳಲ್ಲಿ ಹೆಚ್ಚಿರುವ ಕುರಿತು ಪ್ರಕಟಣೆ ಬಿಡುಗಡೆ ಮಾಡಿದೆ. ಈಗ ಬೇಸಿಗೆಯ ರಣ ಬಿಸಿಲು ಮತ್ತು ಬಿಸಿಯ ಬೇಗೆ ಹೆಚ್ಚಿದ್ದು, ಈ ಉಷ್ಣಾಂಶದಿಂದ ಜನರಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಂಭವವಿದ್ದು, ಹೀಗಾಗಿ,ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸದೆ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಗೈಡ್‌ಲೈನ್ಸ್ ಅನ್ನು ಪ್ರಕಟಿಸಿದೆ.
ಇತ್ತೀಚೆಗೆ ಹವಾಮಾನ ಬದಲಾವಣೆ (Weather change), ವಾಯುಮಾಲಿನ್ಯಗಳಿಂದ ಶೀತಜ್ವರ ಸಾಮಾನ್ಯವಾಗಿ ಬಿಟ್ಟಿದ್ದು, ಈ ಶೀತ ಜ್ವರ (Health Problems)ಒಂದು ವಾರದ ಒಳಗೆ ಕಡಿಮೆಯಾಗುತ್ತದೆ. ಆದರೆ ಕೆಮ್ಮು 2-3 ವಾರಗಳ ಕಾಲ ಮುಂದುವರೆಯುತ್ತಿದೆ. ಹೀಗಾಗಿ, ದೀರ್ಘ ಕಾಲದ ಕೆಮ್ಮು, ಜ್ವರದ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರದೆ ಎಚ್ಚರಿಕೆ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ.
ರಾಜ್ಯದ ಕರಾವಳಿ ಮತ್ತು ರಾಜಧಾನಿಯ ಜನರಿಗೆ ಬಿಸಿಗಾಳಿ ತಟ್ಟಲಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ರಾಜ್ಯದ ಜನರಿಗೆ ಆರೋಗ್ಯ ಇಲಾಖೆ (Health Department) ಮುನ್ಸೂಚನಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಬಾಯಾರಿಕೆ ಇಲ್ಲದಿದ್ದರೂ ಕೂಡ ಪದೇ ಪದೇ ನೀರು ಕುಡಿಯುವ ಅಭ್ಯಾಸ ರೂಡಿಸಿಕೊಳ್ಳಬೇಕು.
ಅರಬ್ಬೀ ಸಮುದ್ರದ ಮೇಲೆ ಆಂಟಿಸೈಕ್ಲೋನ್ ಗಾಳಿ ಬೀಸುವ ಪರಿಣಾಮ ರಾಜ್ಯದ ಕರಾವಳಿ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಬಿಸಿಗಾಳಿ ಹೆಚ್ಚಾಗುತ್ತಿದೆ. ಇದರ ಜೊತೆಗೆ ಬೇಸಿಗೆ ಕಾಲವು ಆಗಿರುವ ಹಿನ್ನೆಲೆ ಉಷ್ಣಾಂಶದಿಂದ ಜನರಿಗೆ ನಾನಾ ರೀತಿಯಲ್ಲಿ ಅನಾರೋಗ್ಯ ಉಂಟಾಗುವ ಸಂಭವ ಕೂಡ ಹೆಚ್ಚಿದೆ. ಹೀಗಾಗಿ, ಜನರು ನಿರ್ಲಕ್ಷ್ಯ ಧೋರಣೆ ತೋರದಂತೆ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ನಡುವೆ ಗೈಡ್‌ಲೈನ್ಸ್ ಅನ್ನು ರಾಜ್ಯ ಸರ್ಕಾರ ಹೊರಡಿಸಿದ್ದು, ಬಾಯಾರಿಕೆ ಇಲ್ಲದಿದ್ದರೂ ನಿರಂತರವಾಗಿ ನೀರು ಕುಡಿಯುವ ಜೊತೆಗೆ ಹತ್ತಾರು ಸೂಚನೆಗಳನ್ನು ನೀಡಲಾಗಿದೆ.
ಆರೋಗ್ಯ ಇಲಾಖೆಯ ಗೈಡ್‌ಲೈನ್ಸ್ ನಲ್ಲಿ ಹೀಗಿದೆ?
ಪ್ರಯಾಣ ಸಮಯದಲ್ಲೂ ನೀರು ತೆಗೆದುಕೊಂಡು ಹೋಗಬೇಕು.ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಬೇಕು.ಮಧ್ಯಾಹ್ನ 12 ರಿಂದ 3ರ ವರೆಗಿನ ಬಿಸಿಲಿಗೆ ಹೊರಗಡೆ ಓಡಾಡಬಾರದು. ಕಾಟನ್ ಬಟ್ಟೆ ಧರಿಸುವುದು ಒಳ್ಳೆಯದು. ಅಡುಗೆ ಕೋಣೆಗೆ ವೆಂಟಿಲೇಷನ್ ಖಚಿತಪಡಿಸಿಕೊಳ್ಳುವುದು ಉತ್ತಮ.ಬಾಯಾರಿಕೆ ಇಲ್ಲದಿದ್ದರೂ ಪದೇ ಪದೇ ನೀರು ಕುಡಿಯಬೇಕು.
ಗರ್ಭಿಣಿ ಮಹಿಳೆಯರು, ಮಕ್ಕಳು, ಬಿಸಿಲಿಗೆ ಕೆಲಸ ಮಾಡುವ ಕಾರ್ಮಿಕರು, ಕಾರು ಚಾಲಕರು ಎಚ್ಚರಿಕೆಯಿಂದ ಇರಬೇಕು. ಮಕ್ಕಳು, ವೃದ್ಧರು, ಸಾಕು ಪ್ರಾಣಿಗಳನ್ನು ಕಾರಿನ ಒಳಗೆ ಕೂರಿಸಿ ಹೊರಗಿಂದ ಲಾಕ್ ಮಾಡಬಾರದು. ಟೀ, ಕಾಫಿ, ಮಧ್ಯ ಸೇವಿಸುವುದನ್ನು ಅವಾಯ್ಡ್ ಮಾಡಬೇಕು. ಪ್ರತಿ 20 ನಿಮಿಷಕ್ಕೊಮ್ಮೆ ಬಾಯಾರಿಕೆ ಇಲ್ಲದಿದ್ದರೂ ಹೊರಗಡೆ ಕೆಲಸ ಮಾಡುವವರು ನೀರು ಕುಡಿಯಬೇಕು. ಮನೆಯ ಕಿಟಕಿಗಳನ್ನು ಸಾಧ್ಯವಾದಷ್ಟು ಓಪನ್ ಮಾಡಬೇಕು.
ಏಪ್ರಿಲ್ ಅಂತ್ಯ ಮತ್ತು ಮೇ ಆರಂಭದಲ್ಲಿ ಪೂರ್ವ ಕರಾವಳಿ ಪ್ರದೇಶಗಳಾದ ಒಡಿಶಾ ಮತ್ತು ಆಂಧ್ರಪ್ರದೇಶಗಳಲ್ಲಿ ಬಿಸಿ ಗಾಳಿ ಬೀಸುವ ಸಂಭವ ಹೆಚ್ಚಿದೆ. ಪಶ್ಚಿಮ ಕರಾವಳಿಯ ಪ್ರದೇಶಗಳಲ್ಲಿ ಮಾರ್ಚ್‌ನಲ್ಲಿ ಬಿಸಿ ಗಾಳಿ ಬೀಸುತ್ತಿದೆ. ಫೆಬ್ರವರಿಯಲ್ಲಿ ಆಂಟಿಸೈಕ್ಲೋನ್‌ನಿಂದ ಪಶ್ಚಿಮ ಕರಾವಳಿಯಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದ್ದು, ಮಾ.7ರಿಂದ ರಾಜ್ಯದ ಕರಾವಳಿ ಪ್ರದೇಶದಲ್ಲಿ ಬಿಸಿ ಗಾಳಿ ಕಡಿಮೆಯಾಗುವ ನಿರೀಕ್ಷೆಯಿದ್ದು ಹವಾಮಾನಶಾಸ್ತ್ರಜ್ಞ ಮಹೇಶ್ ಪಲಾವತ್ ಹೇಳಿದ್ದಾರೆ.
ದೇಶದಲ್ಲಿ ಮೊದಲ ಬಾರಿಗೆ ಈ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಎರಡು ಜಿಲ್ಲೆಗಳಾದ ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿಗಾಳಿಯ ಎಫೆಕ್ಟ್ ಕರಾವಳಿ ಪ್ರದೇಶದ ಶುಕ್ರವಾರದಿಂದ ಸೋಮವಾರದವರೆಗೂ ಇರಲಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮತ್ತು ಹೊನ್ನಾವರದಲ್ಲಿ 39 ರಿಂದ 40.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಸಾಮಾನ್ಯ ತಾಪಮಾನಕ್ಕಿಂತ 6 ಡಿಗ್ರಿ ಸೆಲ್ಸಿಯಸ್ ಹೆಚ್ಚಿದೆ. ಮಾ.4ರಂದು ದೇಶದ ವಿವಿಧ ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.