Electric car: ವಿಶ್ವದಲ್ಲೇ ಅತೀ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರು ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ
Electric cars : ಪ್ರಸ್ತುತ ಎಲೆಕ್ಟ್ರಿಕ್ ವಾಹನ(electric vehicle)ಗಳಿಗೆ ಬೇಡಿಕೆ ಹೆಚ್ಚಿದೆ. ಎಲೆಕ್ಟ್ರಿಕ್ ಕಾರು(electric car), ಸ್ಕೂಟರ್(electric scooter), ಹಾಗೆಯೇ ಇತ್ತೀಚೆಗಷ್ಟೇ ಎಲೆಕ್ಟ್ರಿಕ್ ಗೇರ್ ಬೈಕ್ (Electric Gear Bike) ಕೂಡ ಅನಾವರಣಲಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ, ಅತ್ಯುತ್ತಮ ವೈಶಿಷ್ಟ್ಯದ ಎಲೆಕ್ಟ್ರಿಕ್ ಕಾರುಗಳು ಲಗ್ಗೆ ಇಡುತ್ತಿವೆ.
ಇದೀಗ ಈ ಎಲೆಕ್ಟ್ರಿಕ್ ಕಾರುಗಳ (Electric cars)ಬಗ್ಗೆ ವರದಿಯೊಂದು ಬಿಡುಗಡೆಯಾಗಿದೆ. ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಹೆಚ್ಚು ಮಾರಾಟವಾಗುತ್ತಿದೆ. ಹಾಗಿದ್ದಾಗ ಅತೀ ಹೆಚ್ಚು ಮಾರಾಟವಾದ ಕಾರುಗಳು ಯಾವುದಿರಬಹುದು? ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮಾಹಿತಿ ಇಲ್ಲಿದೆ.
ವರದಿ ಪ್ರಕಾರ, 2022 ರ ನಾಲ್ಕನೇ ತ್ರೈಮಾಸಿಕದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟವು 53 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ. ವಿಶ್ವಾದ್ಯಂತ ಹೆಚ್ಚು ಮಾರಾಟವಾದ ಮಾಡೆಲ್ ಯಾವುದೆಂದರೆ, ಟೆಸ್ಲಾದ ಮಾಡೆಲ್ ವೈ(Tesla model Y). ಇದು ವಿಶ್ವದ ಅತ್ಯಂತ ಜನಪ್ರಿಯ ಪ್ಲಗ್-ಇನ್ ಎಲೆಕ್ಟ್ರಿಕ್ ವಾಹನವಾಗಿದ್ದು, ಫುಲ್ ಚಾರ್ಜ್‌ನಲ್ಲಿ 525 ಕಿಮೀ ದೂರ ಕ್ರಮಿಸುತ್ತದೆ. ಟೆಸ್ಲಾದ ಮಾಡೆಲ್ ವೈ ಕಾರು 2022 ರಲ್ಲಿ ವಿಶ್ವಾದ್ಯಂತ ಸುಮಾರು 771,300 ಯುನಿಟ್ ಮಾರಾಟವಾಗಿದೆ ಎಂದು ತಿಳಿದುಬಂದಿದೆ.
ಎರಡನೇ ಸ್ಥಾನವನ್ನು ಚೀನಾದ BYD ಸಾಂಗ್ ಕಾರು(BYD song china) ಪಡೆದಿದೆ. 2022ರಲ್ಲಿ ಚೀನಾ, ಯುಎಸ್ ಮತ್ತು ಜರ್ಮನಿ ಈ ಮೂರು ದೇಶಗಳು ಇವಿ ಮಾರುಕಟ್ಟೆಯಲ್ಲಿ ಟಾಪ್ 10 EV ಆಟೋಮೋಟಿವ್ ಗ್ರೂಪ್ಸ್ ಹೊಂದಿತ್ತು. ಈ ಗ್ರೂಪ್ 39 ಕ್ಕೂ ಹೆಚ್ಚು ಪ್ರಯಾಣಿಕ ಕಾರು ಬ್ರಾಂಡ್‌ಗಳನ್ನು ಹೊಂದಿತ್ತು ಎನ್ನಲಾಗಿದೆ. ಇವುಗಳು ಅತೀ ಹೆಚ್ಚು ಮಾರಾಟವಾದ ಕಾರುಗಳಾಗಿವೆ.