ಮದ್ಯದ ಬಿಲ್ ಜಾಸ್ತಿಯಾಯಿತೆಂದು ಗೊಣಗಬೇಡಿ, ರಾಯಲ್ ಸ್ಟಾಗ್’ಗೆ 17 ರೂ., ಬ್ಲೆಂಡರ್ಸ್ ಪ್ರೈಡ್’ಗೆ 39 ರೂ. ಬೆಲೆ, ಎಲ್ಲಿ ಗೊತ್ತಾ ?
Alchohol : ಮದ್ಯ ಪ್ರಿಯರೇ ಗಮನಿಸಿ, ಎಣ್ಣೆ ಬೆಲೆ ಹೆಚ್ಚಾಯಿತು ಎಂದು ನೀವು ಬೇಜಾರ್ ಮಾಡಿಕೊಂಡಿದ್ದರೆ ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ ನೋಡಿ. ರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯ ಅಬಕಾರಿ ಮದ್ಯ ನೀತಿಯನ್ನು ಹಿಂತೆಗೆದುಕೊಂಡ ಬಳಿಕ, ದೆಹಲಿಯ ನಾಗರಿಕರು ಮದ್ಯದ ರೇಟ್ ಕೇಳಿ ದಂಗಾಗಿ ಬಿಟ್ಟಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಮದ್ಯದ ಬೆಲೆ ಕೇಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ !
ಮದ್ಯ ಅಂದರೆ ಮನೆ ಮಾರಿಯಾದ್ರೂ ಕೊಳ್ಳೋ ಜನರು ಇರ್ತಾರೆ. ದುಡ್ಡು ಎಷ್ಟೇ ಇರಲಿ, ಸಂಜೆಯ ಹೊತ್ತಿಗೆ ಒಂದು ಎರಡು ಮೂರು- ಹೀಗೆ ಶಕ್ತ್ಯಾನುಸಾರ ಮತ್ತು ಇಚ್ಛಾನುಸಾರ ಪೆಗ್ ಹಾಕದೆ ಹೋದರೆ ಕೆಲವರಿಗೆ ಅವತ್ತು ರಾತ್ರಿಯಾಗುವುದಿಲ್ಲ. ಆ ಮಟ್ಟಿಗೆ ಇದೆ ಮದ್ಯದ ಕರಾಮತ್ತು. ಸಾಮಾನ್ಯವಾಗಿ ದುಬಾರಿಯಾಗಿಯೇ ಇರುವ ಮದ್ಯ ಏಕಾಏಕಿ ಬಲು ಚೀಪ್ ಆಗಿ, ಒಂದು ಪೆಪ್ಸಿ ಬಾಟಲಿನ ರೇಟಿನಲ್ಲಿ ದೊರೆತರೆ ?! ಅಮಲುಕಾರರ ಆನಂದಕ್ಕೆ ಇನ್ನೇನು ಬೇಕು ಹೇಳಿ ?
ಟ್ವಿಟರ್ನಲ್ಲಿ (Twitter) ನೆಟ್ಟಿಗರೊಬ್ಬರು ಮದ್ಯದ ಬ್ರಾಂಡ್ಗಳ ಬೆಲೆಯನ್ನು ಶೇರ್ ಮಾಡಿದ್ದು, ಅಲ್ಲಿ ಪ್ರತಿ ಪಾನೀಯಕ್ಕೆ 100 ರೂ.ಗಿಂತಲು ಕಡಿಮೆ ಎಂದರೆ ಯಾರಿಗೆ ತಾನೇ ಅಚ್ಚರಿಯಾಗದೆ ಇರಲು ಸಾಧ್ಯ!! ಹಾಗಿದ್ರೆ ಕಡಿಮೆ ಬೆಲೆಗೆ ಎಲ್ಲಿ ಮದ್ಯ ಸಿಗುತ್ತೆ? ಅನ್ನೋ ಪ್ರಶ್ನೆ ಕುತೂಹಲ ನಿಮಗೆ ಸಹಜವಾಗಿ ಮೂಡಿರಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ. ದೆಹಲಿಯ ಅತ್ಯಂತ ಜನಪ್ರಿಯ ಆಲ್ಕೋಹಾಲ್ (Alchohol) ಬ್ರಾಂಡ್ಗಳಲ್ಲಿ ಒಂದಾಗಿರುವ ರಾಯಲ್ ಸ್ಟಾಗ್ ನ ಬೆಲೆ 17 ರೂ. ಮತ್ತು ಬ್ಲೆಂಡರ್ಸ್ ಪ್ರೈಡ್ 39 ರೂಪಾಯಿಗೆ ಸಿಗುತ್ತದೆ ಅಂದರೆ ಯಾರಿಗಾದರು ಶಾಕ್ ಆಗದಿರದು.
ಟ್ವಿಟ್ಟರ್ ಬಳಕೆದಾರರಾದ ಅನಂತ್ ಎಂಬವರು ಬಾರ್ ಒಂದರ ಮೆನು ಕಾರ್ಡ್ ಅನ್ನು (Menu Card) ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ. ದೆಹಲಿಯ ನೌಕಾಪಡೆಯ ಅಧಿಕಾರಿಯ ಮೆಸ್‌ನ ಬಾರ್ ಮೆನು ಕಾರ್ಡ ನಲ್ಲಿ ಮದ್ಯದ ಬೆಲೆ ಅತ್ಯಂತ ಕಡಿಮೆಯಾಗಿದ್ದು ನೋಡುಗರಿಗೆ ಆಶ್ಚರ್ಯ ಮೂಡಿಸಿದೆ. ಇಷ್ಟು ಕಡಿಮೆಗೆ ಮದ್ಯ ಸಿಗುವುದು ನಿಜಾನಾ? ಎಂಬ ಪ್ರಶ್ನೆ ಮೂಡಿದ್ದು ಜೊತೆಗೆ, ಮದ್ಯಪ್ರಿಯರ ದವಡೆಯಲ್ಲಿ ಆಸೆಯಿಂದ ಎಂಜಲು ಜಿನುಗಲು ಶುರುವಾಗಿದೆ. ಕಾರಣ ಅತ್ಯಂತ ದುಬಾರಿ ಎನಿಸಿರುವ, ಮಾಲ್ಟ್ ಬೆರೆಸಿ ತಯಾರಿಸಿದ ಮೆತ್ತಗಿನ ವಾಸನೆಯ, ಕಮ್ಮಗಿನ ಪರಿಮಳದ ಈ ವೈನುಗಳ ಸವಿ ಮತ್ತು ಅದು ನೀಡುವ ಆನಂದ ಅನುಭವಿಸಿದವರಿಗೇ ಗೊತ್ತು. ಅಂತಹಾ ಬ್ರಾಂಡುಗಳು ಈಗ ಜುಜುಬಿ ಬೆಲೆನಲ್ಲಿ ಅಲ್ಲಿ ದೊರೆಯುತ್ತಿವೆಯಂತೆ.
ದೆಹಲಿಯ ನೌಕಾಪಡೆಯ ಅಧಿಕಾರಿಯ ಬಾರ್ ನ ಮೆನು ಕಾರ್ಡ್ ಅನುಸಾರ, ಜನಪ್ರಿಯ ಬ್ರ್ಯಾಂಡ್ಗಳ (alchohol) ಬೆಲೆಗಳು ಆಶ್ಚರ್ಯ ಮೂಡಿಸುತ್ತಿವೆ. ಇಲ್ಲಿ ಕಿಂಗ್ಫಿಶರ್ ಬಿಯರ್ ಗೆ ಕೇವಲ 44 ರೂಪಾಯಿ, ಬಡ್ವೈಸರ್ ಬೀರಿಗೆ 59 ರೂಪಾಯಿ ಮತ್ತು ಅತ್ಯಂತ ಜನಪ್ರಿಯ ಹಾಗೂ ಕಾಸ್ಟ್ಲಿ ವಿಸ್ಕಿ ಬ್ಲ್ಯಾಕ್ ಡಾಗ್ ಗೆ 72 ರೂಪಾಯಿ ಮಾತ್ರ ಬೆಲೆ ನಿಗದಿ ಮಾಡಲಾಗಿದೆ. ಅತ್ಯಂತ ದುಬಾರಿ ಮದ್ಯ ಎಂದೇ ಖ್ಯಾತಿ ಇರುವ ಟೀಚರ್ಸ್ ವಿಸ್ಕಿಗೆ ಇಲ್ಲಿ ಕೇವಲ 124 ರೂಪಾಯಿ ಎಂದು ಬಿಲ್ (Bill) ನಲ್ಲಿ ಉಲ್ಲೇಖಿಸಲಾಗಿದೆ. ಇನ್ನು ನೆಟ್ಟಿಗರಾದ ಅನಂತ್ ಶೇರ್ ಮಾಡಿರುವ ಫೋಟೋ ನೋಡಿ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟು ಕಡಿಮೆ ಬೆಲೆಗೆ ಮದ್ಯ ಸಿಗುವುದನ್ನ ಕೇಳಿದ ಮದ್ಯ ಪ್ರಿಯರು ಫುಲ್ ಖುಷ್ ಆಗಿದ್ದು, ನಾವು ಕೂಡ ಅಲ್ಲಿಗೆ ಹೋಗಿ ಕೈಗೆ ಸಿಕ್ಕಷ್ಟು ಬಾಕ್ಸ್ ಗಳನ್ನು ಬಾಚಿಕೊಂಡು ಹಲವು ತಿಂಗಳಿಗಾಗುವಷ್ಟು ಪೇರಿಸಿಟ್ಟುಕೊಳ್ಳಲು ಅಣಿಯಾಗಿದ್ದಾರೆ.
My Bangalore brain cannot comprehend these prices pic.twitter.com/g9SrzWfcA4
— Anant (@AnantNoFilter) February 4, 2023
ಇದನ್ನೂ ಓದಿ :Smartphone ಖರೀದಿ ಮಾಡಿ, ಬಿಯರ್ ಉಚಿತವಾಗಿ ಪಡೆದುಕೊಳ್ಳಿ ! ಆಫರ್ ಕೊಟ್ಟವ ನಂತರ ಏನಾದ?