Vidhana soudha: ವಿಧಾನಸೌಧಕ್ಕೆ ‘ಕ್ವಾಟ್ರು’ ಜೊತೆ ಬಂದ ಪೊಲೀಸ್! ಗೇಟಲ್ಲೇ ಕೈ ಜಾರಿ ಬಿದ್ದು, ಕ್ವಾಟ್ರು ಪೀಸ್ ಪೀಸ್!
Vidhana soudha: ರಾಜ್ಯದ ಶಕ್ತಿ ಕೇಂದ್ರ ಅಂದ್ರೆ ಅದು ಬೆಂಗಳೂರಿನ (Bangalore) ವಿಧಾನಸೌಧ (Vidhana soudha) ಕರ್ನಾಟಕ (Karnataka)ದ ಪ್ರತಿಯೊಂದು ವಿಚಾರಗಳು, ಸಮಸ್ಯೆಗಳು ಇಲ್ಲಿ ಚರ್ಚೆಯಾಗಿ ಪರಿಹಾರ ಕಂಡುಕೊಳ್ಳುವ ಪವಿತ್ರ ತಾಣವದು. ನಮ್ಮ ನಾಯಕರೆಲ್ಲರೂ ಇಲ್ಲೇ ಕೂತಿರುತ್ತಾರೆ. ಹೀಗಾಗಿ ಇಲ್ಲಿ ಭಾರೀ ಬಂದೋಬಸ್ತ್ ಇರುತ್ತದೆ. ಆದರೆ ಇಲ್ಲೊಬ್ಬ ಪೋಲೀಸ್(Police) ಪೇದೆಯೊಬ್ಬ, ಎಲ್ಲರ ಕಣ್ತಪ್ಪಿಸಿ ಈ ವಿಧಾನಸೌದ ಒಳಕ್ಕೆ ‘ಕ್ವಾಟ್ರು ಬಾಟ್ಲಿ’ (Drinks) ತೆಗೆದುಕೊಂಡು ಹೋಗ್ತಾ, ಅದು ಕೈ ಜಾರಿ ಬಿದ್ದು ಒಡೆದು ಚೂರಾಗಿ ಎಲ್ಲರೆದುರು ಪಜೀತಿಗೆ ಸಿಲುಕಿದ್ದಾನೆ.
ಹೌದು. ವಿಧಾನಸೌಧದ ಕೆಂಗಲ್ ಗೇಟ್ (Kengal Gate) ಬಳಿ ಪೊಲೀಸಪ್ಪನ ಎಣ್ಣೆ ಬಾಟ್ಲಿ ಒಡೆದು ದೊಡ್ಡ ರಾದ್ಧಾಂತವಾಗಿದೆ. ವಿಧಾನಸೌಧ ಒಳಗಡೆಯಿಂದ ಹೊರೆಗೆ ಹೋಗುತ್ತಿದ್ದ ಮಫ್ತಿಯಲ್ಲಿದ್ದ ಪೊಲೀಸ್ ಪೇದೆ, ತನ್ನ ಬ್ಯಾಗಿನಲ್ಲಿ ಮದ್ಯದ ಬಾಟ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಹೀಗೆ ಹೊರಗೆ ಹೋಗುವಾಗ ಬಾಟ್ಲಿ ಕೈ ಜಾರಿ ಬಿದ್ದಿದೆ. ಬಿದ್ದ ಕೂಡಲೇ ಅದು ಒಡೆದು ಪೀಸ್ ಪೀಸ್ ಆಗಿದೆ. ಆತುರವಾಗಿ ಚೂರಾದ ಬಾಟ್ಲಿ ಪೀಸ್ ಎತ್ತಿಕೊಂಡು ಪೇದೆ ಅಲ್ಲಿಂದ ಪರಾರಿಯಾಗಿದ್ದಾರೆ.
ಅಲ್ಲದೆ, ಇತ್ತ ವಿಚಾರ ತಿಳಿಯುತ್ತಿದ್ದಂತೆಯೇ ಮಾಧ್ಯಮ(Media) ದವರು ಸ್ಥಳಕ್ಕೆ ತೆರಳಿದ್ದು, ಕ್ಯಾಮೆರಾ ಕಂಡ ಕೂಡಲೇ ಆ ಮಧ್ಯಪ್ರಿಯ ಪೊಲೀಸ್ ಪೇದೆ ವಿಧಾನಸೌಧದಿಂದಲೇ ಎಸ್ಕೇಪ್ ಆಗಿದ್ದನೆ. ಆದರೆ ವಿಧಾನಸೌಧ ಭದ್ರತೆ ಪೊಲೀಸರು, ಬಾಟ್ಲಿ ತಂದ ಆ ಪೊಲೀಸ್ ಪೇದೆ ಯಾರು ಅಂತ ಮಾಹಿತಿ ನೀಡಿಲ್ಲ.
ಇನ್ನು ಇಷ್ಟೆಲ್ಲಾ ಭಧ್ರತೆಗಳಿದ್ದರೂ ವಿಧಾನಸೌಧದೊಳಕ್ಕೆ ಮದ್ಯದ ಬಾಟ್ಲಿ ಬಂದಿದ್ದು ಹೇಗೆ?, ಭದ್ರತೆ ತಪ್ಪಿಸಿ ಮದ್ಯದ ಬಾಟ್ಲಿ ವಿಧಾನಸೌಧದ ಒಳಗೆ ಹೋಗಿದ್ದು ಹೇಗೆ?, ವಿಧಾನಸೌಧದ ಒಳಗಿಂದ ಮದ್ಯದ ಬಾಟ್ಲಿ ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದರು?, ಯಾರಾದರೂ ತರಲು ಹೇಳಿದ್ದಾರೆ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಭದ್ರತೆ ಒದಗಿಸೋ ಪೊಲೀಸರೇ ಹೀಗೆ ಮಾಡಿದ್ರೆ ವಿಧಾನಸೌಧಕ್ಕೆ ರಕ್ಷಣೆ ಹೇಗೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.