Women’s Day 2023 : ಮಹಿಳೆಯರೇ ನಿಮಗಿದೋ ಗುಡ್‌ನ್ಯೂಸ್‌, ಬಂಪರ್‌ ಆಫರ್‌ ನೀಡಿದ ಪ್ರವಾಸೋದ್ಯಮ ಇಲಾಖೆ, ಏನದು? ಇಲ್ಲಿದೆ ಡಿಟೇಲ್ಸ್‌!

Share the Article

Women’s Day 2023: ಮಹಿಳೆಯರೇ ಗಮನಿಸಿ!! ಮಹಿಳೆಯರಿಗೆ ಭರ್ಜರಿ ಬಂಪರ್ ಆಫರ್!! ಯಾರಿಗುಂಟು ಯಾರಿಗಿಲ್ಲ ಅನ್ನುವಂತಹ ಕೊಡುಗೆಗಳು ನಿಮಗಾಗಿ ಎದುರು ನೋಡುತ್ತಿದೆ. ಮತ್ತೇಕೆ ತಡ!! ನೀವು ಈ ಆಫರ್ ಗಳ ಪ್ರಯೋಜನ ನಿಮ್ಮದಾಗಿಸಿಕೊಳ್ಳಿ..

ಮಹಿಳೆಯರ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಸೂಪರ್ ಡೂಪರ್ ಕೊಡುಗೆಗಳಿದ್ದು,ಅಷ್ಟಕ್ಕೂ ಏನು ಆಫರ್ ಅಂತ ಯೋಚಿಸುತ್ತಿದ್ದೀರಾ?? ಎಲ್ಲರಿಗೂ ಗೊತ್ತಿರುವ ಹಾಗೆ ಮಾರ್ಚ್​ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸುವುದು ವಾಡಿಕೆ. ಮಹಿಳಾ ದಿನಾಚರಣೆಯ ಪ್ರಯುಕ್ತ(Women’s Day 2023) ಎಲ್ಲೆಡೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮಹಿಳಾ ದಿನಾಚರಣೆ ಪ್ರಯುಕ್ತ ನಾನಾ ರೀತಿಯ ಆಫರ್ ಗಳನ್ನು ನೀಡಲಾಗುತ್ತದೆ. ಅದೇ ರೀತಿ, ಕರ್ನಾಟಕ ಸರ್ಕಾರದ ಮಯೂರ ಗ್ರೂಪ್ ಆಫ್ ಹೊಟೇಲ್ಗಳಲ್ಲಿ ರೂಮ್ ಬುಕ್ಕಿಂಗ್ ಗಳಿಗೆ ಬರೋಬ್ಬರಿ ಶೇಕಡಾ 50 ರಷ್ಟು ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಇದಲ್ಲದೆ, ಮಹಿಳೆಯರಿಗೆ ಫುಡ್​ಗಳ ಮೇಲೆ ಶೇಕಡಾ 20 ರಷ್ಟು ರಿಯಾಯಿತಿ ಕೂಡ ದೊರೆಯಲಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ)( Karnataka State Tourism Development Corporation)ಮಹಿಳೆಯರಿಗೆ ಮಾರ್ಚ್ 6 ರಿಂದ ಮಾರ್ಚ್ 10ರ ವರೆಗೆ ವುಮೆನ್ಸ್​ ಡೇ ಸ್ಪೆಷಲ್ ಗಾಗಿ ವಿಶೇಷ ಕೊಡುಗೆ ನೀಡಿದ್ದು, ಭೋಜನ ಪ್ರಿಯರಿಗೆ ಸಿಹಿ ಸುದ್ದಿ ಕಾದಿದೆ. 10 ನೇ ತಾರೀಖಿನೊಳಗೆ ಈ ಹೊಟೇಲ್​ಗಳಿಗೆ ಭೇಟಿ ನೀಡಿ ನಿಮಗೆ ಬೇಕಾದ ತಿಂಡಿ ತಿನಿಸುಗಳನ್ನು ಸೇವಿಸುವ ಸುವರ್ಣ ಅವಕಾಶ ಕಲ್ಪಿಸಲಾಗಿದೆ.

ಮಯೂರ ಹೋಟೆಲ್ ಗಳು ಮೈಸೂರು, ಶ್ರೀರಂಗಪಟ್ಟಣ, ಮಡಿಕೇರಿ, ಹಂಪಿ, ಆಲಮಟ್ಟಿ, ನಂದಿ ಬೆಟ್ಟ, ವಿಜಯಪುರ ಮತ್ತು ಊಟಿಯಲ್ಲಿದ್ದು, ಸೋಲೋ, ಫ್ಯಾಮಿಲಿ ಹಾಗೆಯೇ ಸ್ನೇಹಿತರೊಂದಿಗೆ ಪ್ರಯಾಣಿಸುವ ಮಹಿಳಾ ಪ್ರವಾಸಿಗರಿಗೆ ಮಾರ್ಚ್​ 06 ರಿಂದ 10 ರವರೆಗೆ 50% ರಿಯಾಯಿತಿ ಆಫರ್ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಮಹಿಳಾ ಪ್ರವಾಸಿಗರು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಲು ಕೆಎಸ್ಟಿಡಿಸಿ ಮನವಿ ಮಾಡಿದೆ. ನೀವು ಕೂಡ ಈ ಬೊಂಬಾಟ್ ಭೋಜನದ ಸವಿಯನ್ನು ಮಯೂರ ಹೋಟೆಲ್ಗೆ ಭೇಟಿ ನೀಡಿ ಆಫರ್ ನಲ್ಲಿ ಸೇವಿಸಬಹುದು. ಇದು ಕೇವಲ ನಿಗದಿತ ಸಮಯಕ್ಕೆ ಮಾತ್ರ ಅನ್ವಯವಾಗುತ್ತದೆ ಎಂಬುದನ್ನು ನೆನಪಿಡಿ.

Leave A Reply