ವಿದ್ಯಾ ಬುದ್ಧಿ ಕಲೀರಪ್ಪಾ ಅಂತ ಕಾಲೇಜು ಕಳಿಸಿದ್ರೆ, ಇವರುಗಳು ಈ ರೀತಿ ಮಾಡೋದಾ?
school students: ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಆಶ್ಚರ್ಯಕರ ಘಟನೆಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲೂ ಇತ್ತೀಚೆಗೆ ಶಾಲಾ ವಿದ್ಯಾರ್ಥಿಗಳ(students) ಅಸಭ್ಯ ವರ್ತನೆಯ ಪ್ರಕರಣಗಳು ಹೆಚ್ಚಾಗಿವೆ. ಇದೀಗ ಅಂತಹದೇ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು(Viral video of school students), ಸೋಷಿಯಲ್ಸ್ ಇದೆಂಥಾ ವಿದ್ಯಾರ್ಥಿಗಳು, ಶಿಕ್ಷಣ ಕಲಿಯುವ ಬದಲು ಇನ್ನೇನೋ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಈ ಇಬ್ಬರು ಹುಡುಗ ಮತ್ತು ಹುಡುಗಿ ಏನು ಮಾಡಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಸ್ಟೋರಿ.
ಕುಂಕುಮಕ್ಕೆ ಅದರದೇ ಆದ ಮಹತ್ವವಿದೆ. ಅದನ್ನು ಹಣೆಗೆ ಗಂಡನಾದವನು ಮಾತ್ರ ಇಡುತ್ತಾನೆ. ಮದುವೆಯ ಸಂದರ್ಭದಲ್ಲಿ ತಾಳಿಯ ಜೊತೆಗೆ ಕುಂಕುಮ ಕೂಡ ಹೆಣ್ಣಿನ ಹಣೆಗೆ ಇಡಲಾಗುತ್ತದೆ. ಆದರೆ ಇಂದಿನ ಕಾಲದಲ್ಲಿ ಮದುವೆ, ಹೆಣ್ಣು-ಗಂಡಿನ ಸಂಬಂಧಕ್ಕೆ ಅರ್ಥವೇ ಇಲ್ಲದಂತಾಗಿದೆ. ಇಲ್ಲೊಬ್ಬ ಶಾಲಾ ಯುವಕ ಶಾಲಾ ಸಮವಸ್ತ್ರದಲ್ಲಿ ನಡುರಸ್ತೆಯಲ್ಲಿ ತನ್ನ ಪ್ರೇಯಸಿಗೆ ಹೋಳಿ(Holi)ಯ ನೆಪದಲ್ಲಿ ಸಿಂಧೂರವಿಟ್ಟಿದ್ದಾನೆ. ಬಣ್ಣದಲ್ಲೇ ಹುಡುಗಿಯ ಹಣೆಗೆ ಕುಂಕುಮವಿಟ್ಟಿದ್ದಾನೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋ ಮಾಡುತ್ತಿದ್ದರೂ, ಸಮಾಜದ ಪರಿವೆ ಇಲ್ಲದೆ, ನಡುರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ. ಮದುವೆ(marriage) ಹೆಣ್ಣು-ಗಂಡಿನ ಜೀವನದ ಅಮೂಲ್ಯವಾದ ಕ್ಷಣವಾಗಿದೆ. ಆದರೆ ಈ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಶಿಕ್ಷಣ(education) ಕಲಿಯುವ ಬದಲು ನಡುರಸ್ತೆಯಲ್ಲಿ ರೋಮಾನ್ಸ್(romance) ಮಾಡುತ್ತಿದ್ದಾರೆ. ಹೆತ್ತವರು ಅದೆಷ್ಟೋ ಕನಸುಗಳ ಮೂಟೆ ಹೊತ್ತು, ಮಕ್ಕಳು ಸಮಾಜದಲ್ಲಿ ಘನತೆ, ಗೌರವ ಗಳಿಸಲಿ, ವಿದ್ಯಾಭ್ಯಾಸ ಪಡೆಯಲಿ ಎಂದು ಶಾಲೆಗೆ ಕಳಿಸಿದರೆ ಈ ವಿದ್ಯಾರ್ಥಿಗಳು ಪರೋಕ್ಷವಾಗಿ ಮದುವೆಯಾಗಲು ಹೊರಟಿದ್ದಾರೆ.
ವಿದ್ಯಾರ್ಥಿಗಳ ಮಿತಿ ಮೀರಿದ ವರ್ತನೆಯ ವಿಡಿಯೋವನ್ನು ಫಂಟಾಪ್ ಎಂಬ ಇನ್‌ಸ್ಟಾಗ್ರಾಮ್(instagram) ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಈ ವಿಡಿಯೋ ಭಾರೀ ವೈರಲ್(viral) ಆಗುತ್ತಿದೆ. ಸೋಷಿಯಲ್ಸ್ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
https://www.instagram.com/reel/CbM3hBQgEIu/?utm_source=ig_web_copy_link