ವಾಹನ ಸವಾರರಿಗೆ ಶಾಕ್!ಏಪ್ರಿಲ್ 1ರಿಂದ ಹೈವೇ ಟೋಲ್ ದರ ಏರಿಕೆ ಬಿಸಿ?!
Toll Free Hike:ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು ಇರೋದು ಇಂದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಚ್ಚಳ ಕಂಡುಬರುತ್ತಿರುವ ಹಿನ್ನೆಲೆ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆಯ ಬಿಸಿ ಜನರನ್ನು ತಟ್ಟುತ್ತಿದ್ದು, ಈ ನಡುವೆ ಜನರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಡುವೆ ಏಪ್ರಿಲ್ 1 ರಿಂದ ಹೈವೇ ಟೋಲ್ ದರ ಶೇಕಡಾ.5 ರಿಂದ ಶೇ.10 ರಷ್ಟು ದರ ಹೆಚ್ಚಳವಾಗಲಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಮಾಸಿಕ ಪಾಸ್ ದರವೂ ಶೇ.10 ಏರಿಕೆಯಾಗಲಿದೆ ಎನ್ನಲಾಗುತ್ತಿದ್ದು, ಹೀಗಾಗಿ ಗಾಯದ ಮೇಲೆ ಬರೆ ಎಳೆದಂತಹ ಸ್ಥಿತಿ ನಿರ್ಮಾಣವಾಗಿದೆ.
2022ರಲ್ಲಿ ಶೇ.10 ರಿಂದ 15 ರಷ್ಟು ದರ ಏರಿಕೆಯಾಗಿದ್ದು, ಈ ವೇಳೆ ಎಲ್ಲ ವಾಹನಗಳಿಗೆ 10 ರಿಂದ 60 ರೂ. ನಡುವೆ ದರ ಹೆಚ್ಚಳವಾಗಿದೆ. ಪ್ರತಿ ಕಿ.ಮೀ.ಗೆ 2.19 ರೂ. ನಂತೆ ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ (ದರಗಳು ಮತ್ತು ಸಂಗ್ರಹಣೆ) ನಿಯಮ-2008ರ ಪ್ರಕಾರ ಸುಂಕದ ಪರಿಷ್ಕರಣೆ ಮಾಡಲಾಗುತ್ತಿದ್ದು, ಕಾರುಗಳು ಮತ್ತು ಲಘು ವಾಹನಗಳಿಗೆ ಪ್ರತಿ ಟ್ರಿಪ್‌ಗೆ ಶೇ. 5ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ ಎನ್ನಲಾಗಿದೆ. ಇದರ ಜೊತೆಗೆ ಭಾರಿ ವಾಹನಗಳ ಟೋಲ್ ತೆರಿಗೆ ಶೇ.10ರಷ್ಟು ಏರಿಕೆ ಕಾಣಲಿದೆ ಎನ್ನಲಾಗಿದೆ. ಈಗಾಗಲೇ ಬೆಲೆ ಏರಿಕೆಯ ಬಿಸಿಯಿಂದ ಕಂಗೆಟ್ಟಿರುವ ಜನತೆಗೆ ಏಪ್ರಿಲ್ 1ರಿಂದ ಶಾಕ್ ಕಾದಿದ್ದು, ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್ ವೇಗಳಲ್ಲಿನ ಟೋಲ್ ದರ ಶೇ.5 ರಿಂದ 10 ರಷ್ಟು ಹೆಚ್ಚಾಗುವ( Toll Free Hike)ಸಾಧ್ಯತೆ ದಟ್ಟವಾಗಿದೆ.
ಫಾಸ್ಟ್‌ಟ್ಯಾಗ್ ಎಂಬುದು ವಾಹನವು ಚಲಿಸುತ್ತಿರುವಾಗ ನೇರವಾಗಿ ಟೋಲ್ ಪಾವತಿಗಳನ್ನು ಮಾಡಲು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ತಂತ್ರಜ್ಞಾನವನ್ನು ಬಳಕೆ ಮಾಡುವ ಸಾಧನವಾಗಿದೆ. ಫಾಸ್ಟ್‌ಟ್ಯಾಗ್ (RFID ಟ್ಯಾಗ್) ಅನ್ನು ವಾಹನದ ವಿಂಡ್‌ಸ್ಕ್ರೀನ್‌ನಲ್ಲಿ ಅಂಟಿಸಲಾಗುತ್ತದೆ. ಇದರ ಜೊತೆಗೆ ಗ್ರಾಹಕರು ಅದರೊಂದಿಗೆ ಲಿಂಕ್ ಮಾಡಲಾದ ಖಾತೆಯಿಂದ ನೇರವಾಗಿ ಟೋಲ್ ಪಾವತಿ ಮಾಡಬಹುದಾಗಿದೆ. ರಾಷ್ಟ್ರೀಯ ಹೆದ್ದಾರಿಗಳ (National Highways) ಶುಲ್ಕದ ಅಡಿಯಲ್ಲಿ (ದರಗಳು ಮತ್ತು ಸಂಗ್ರಹಣೆ ನಿಯಮಗಳ ನಿರ್ಣಯ, 2008), ಸೇವೆಯ ರಸ್ತೆ ಅಥವಾ ಪರ್ಯಾಯ ಮಾರ್ಗವು ಬಳಕೆಗೆ ಅವಕಾಶವಿಲ್ಲ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) 2022 ರಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಶುಲ್ಕ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಒಟ್ಟು ಟೋಲ್ ಸಂಗ್ರಹವು ದಿನಕ್ಕೆ ಸರಾಸರಿ 50,855 ಕೋಟಿ ಇಲ್ಲವೇ 139.32 ಕೋಟಿ ರೂ. ಎಂಬುದಾಗಿ ಮಾಹಿತಿ ನೀಡಿದೆ. 2022ರ ಆರ್ಥಿಕ ವರ್ಷದಲ್ಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ 33,881.22 ಕೋಟಿ ರೂಪಾಯಿ ಟೋಲ್ ಸಂಗ್ರಹಿಸಲಾಗಿದ್ದು, ಈ ನಡುವೆ ಟೋಲ್ ಪ್ಲಾಜಾ (Toll Plaza) ಸುತ್ತಲಿನ 20 ಕಿ.ಮೀ. ವ್ಯಾಪ್ತಿಯ ವಾಸಿಗಳಿಗೆ ನೀಡಲಾಗುವ ಮಾಸಿಕ ಪಾಸ್ (Monthly Pass) ದರವನ್ನು ಸಹ ಶೇ.10 ರಷ್ಟು ಏರಿಕೆ ಮಾಡುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ.ರಾಷ್ಟ್ರೀಯ ರಸ್ತೆಗಳ ಶುಲ್ಕ ನಿಯಮಗಳು (National Roads Fee Regulations) 2008 ರ ಪ್ರಕಾರ, ಬಳಕೆದಾರರ ಶುಲ್ಕ ಪ್ಲಾಜಾದ ನಿರ್ದಿಷ್ಟ ವ್ಯಾಪ್ತಿಯೊಳಗೆ ವಾಸಿಸುವ ಜನರಿಗೆ ಯಾವುದೇ ವಿನಾಯಿತಿ ಲಭ್ಯವಾಗದು.
ವಾಣಿಜ್ಯೇತರ ಬಳಕೆಗಾಗಿ ನೋಂದಾಯಿಸಲಾದ ವಾಹನವನ್ನು (Registered Vehicles) ಹೊಂದಿರುವ ಮತ್ತು ಟೋಲ್ ಪ್ಲಾಜಾದಿಂದ 20 ಕಿಲೋಮೀಟರ್‌ಗಳ ಒಳಗೆ ವಾಸಿಸುವ ವ್ಯಕ್ತಿಯು ಶುಲ್ಕ ಪ್ಲಾಜಾ ಮೂಲಕ ಅನಿಯಮಿತ ಪ್ರಯಾಣಕ್ಕಾಗಿ 2022-23 ರ ಹಣಕಾಸು ವರ್ಷದಲ್ಲಿ ತಿಂಗಳಿಗೆ 315 ರೂ. ದರದಲ್ಲಿ ಮಾಸಿಕ ಪಾಸ್ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.