ಅನೈತಿಕ ಸಂಬಂಧ ಶಂಕಿಸಿ ಪತ್ನಿಗೆ ಚಾಕು ಇರಿತ..! ಶವದ ತುಂಡುಗಳನ್ನು ನೀರಿನ ಟ್ಯಾಂಕ್‌ಗೆ ಎಸೆದ ಪಾಪಿ ಪತಿ

Raipur murder :ಇತ್ತೀಚಿನ ದಿನಗಳಲ್ಲಿ ಕೊಲೆ, ಅತ್ಯಾಚಾರ ಪ್ರಕರಣ ಸಾಮಾನ್ಯವಾಗಿ ಬಿಟ್ಟಿದೆ, ಇದೀಗ ಇಲ್ಲೊಂದೆಡೆ ಬೆಚ್ಚಿಬೀಳಿಸುವ ಹತ್ಯೆ ನಡೆದಿದ್ದು, ಬಿಲಾಸ್ಪುರದ ಉಸ್ಲಾಪುರದಲ್ಲಿ ಪತಿ ತನ್ನ ಹೆಂಡತಿಯನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ (Raipur murder) ತನ್ನ ಮನೆಯ ನೀರಿನ ಟ್ಯಾಂಕ್ ನಲ್ಲಿ ಎಸೆದಿರೋ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು,ಈಗ ಪೊಲೀಸರು ಇಡೀ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

 

ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿರುವುದು ಆರೋಪಿ ಪವನ್ ಠಾಕೂರ್ ಎಂದು ಗುರುತಿಸಲಾಗಿದೆ. ತನ್ನ ಪತ್ನಿ ಸತಿ ಸಾಹು ತನ್ನೊಂದಿಗೆ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪತ್ನಿ ಅನೈತಿಕ ಸಂಬಂಧ ಶಂಕಿಸಿದ್ದಾನೆ ಎಂದು ಹೇಳಲಾಗಿದೆ.

ಇದರ ನಂತರ, ಅವನು ತನ್ನ ಹೆಂಡತಿಯನ್ನು ಕೊಲ್ಲುವ ಯೋಚನೆ ಮಾಡಿದ್ದಾನೆ. ಆರೋಪಿ ತನ್ನ ಹೆಂಡತಿಯನ್ನು ಕೊಂದು, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನಂತರ ಮನೆಯಲ್ಲಿ ಟೇರಿಸ್‌ ಮೇಲಿರುವ ನೀರಿನ ಟ್ಯಾಂಕ್ ಗೆ ಎಸೆದಿದ್ದಾನೆ. ಕೆಲ ದಿನಗಳಿಂದ ಕೆಟ್ಟ ವಾಸನೆ ಬರುತ್ತಿರೋದನ್ನು ಗಮನಿಸಿ, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಆಗ ಯುವತಿ ಶವವೂ ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾಗಿದ್ದು ತೀವ್ರ ವಿಚಾರನೇ ನಡೆಸಿದ ಬೆನ್ನಲ್ಲೆ ಆರೋಪಿ ಪವನ್ ಠಾಕೂರ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಶವವನ್ನು ಒಂದರಿಂದ ಎರಡು ತಿಂಗಳ ಹಿಂದೆ ಎಸೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ನಿಕ್ಕಿ ಯಾದವ್ ಕೊಲೆ ಪ್ರಕರಣ

ಕಳೆದ ತಿಂಗಳು, ತನ್ನ ಗೆಳತಿ ನಿಕ್ಕಿ ಯಾದವ್ ಅವರನ್ನು ಕೊಲೆ ಮಾಡಿ ಆಕೆಯ ದೇಹದ ತುಂಡುಗಳನ್ನು ಫ್ರಿಜ್ನಲ್ಲಿ ಇಟ್ಟ ಪ್ರಕರಣ ದೆಹಲಿಯಲ್ಲಿ ಬೆಳಕಿಗೆ ಬಂದಿತ್ತು. ಪ್ರಕರಣದ ಆರೋಪಿ ಸಾಹಿಲ್ ಗೆಹ್ಲೋಟ್ ನಿಕ್ಕಿ ಯಾದವ್ ಅವರನ್ನು ಕೊಂದು ಶವವನ್ನು ನೈಋತ್ಯ ದೆಹಲಿಯ ಧಾಬಾದಲ್ಲಿ ಫ್ರಿಡ್ಜ್ನಲ್ಲಿ ಇರಿಸಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಲು ಹೋಗಿದ್ದ ಎಂದು ಆರೋಪಿಸಲಾಗಿದೆ. ಅಪರಾಧ ನಡೆದ ನಾಲ್ಕು ದಿನಗಳ ನಂತರ ಫೆಬ್ರವರಿ 14 ರಂದು ಈ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಗೆಹ್ಲೋಟ್ 2020 ರ ಅಕ್ಟೋಬರ್ನಲ್ಲಿ ಯಾದವ್ ಅವರನ್ನು ರಹಸ್ಯವಾಗಿ ಮದುವೆಯಾಗಿದ್ದರು ಎಂದು ತನಿಖೆಯ ಸಮಯದಲ್ಲಿ ತಿಳಿದುಬಂದಿದೆ.

ಶ್ರದ್ಧಾ ವಾಕರ್ ಕೊಲೆ ಪ್ರಕರಣ

ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ಆರೋಪಿ ಅಫ್ತಾಬ್ ಪೂನಾವಾಲಾ (28) ತನ್ನ ಲಿವ್ ಇನ್ ಪಾರ್ಟ್ನರ್ ಶ್ರದ್ಧಾ ವಾಲ್ಕರ್ (27) ಅವರನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಆರೋಪ ಎದುರಿಸುತ್ತಿದ್ದಾನೆ. ದಕ್ಷಿಣ ದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿರುವ ಬಾಡಿಗೆ ಫ್ಲಾಟ್ನಲ್ಲಿ ಶ್ರದ್ಧಾ ವಾಲ್ಕರ್ ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಅಫ್ತಾಬ್ ಪೂನಾವಾಲಾ ಅವರನ್ನು ಕಳೆದ ವರ್ಷ ನವೆಂಬರ್ 12 ರಂದು ದೆಹಲಿ ಪೊಲೀಸರು ಬಂಧಿಸಿದ್ದರು. ಅಫ್ತಾಬ್ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದು ಆಕೆಯ ದೇಹವನ್ನು ಸುಮಾರು 35 ತುಂಡುಗಳಾಗಿ ಕತ್ತರಿಸಿ ಸುಮಾರು ಮೂರು ವಾರಗಳ ಕಾಲ ಮನೆಯಲ್ಲಿ 300 ಲೀಟರ್ ರೆಫ್ರಿಜರೇಟರ್ನಲ್ಲಿ ಇಟ್ಟಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದರು. ಅವನು ಅವುಗಳನ್ನು ಹಲವಾರು ದಿನಗಳವರೆಗೆ ಮಧ್ಯರಾತ್ರಿಯಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಎಸೆಯಲು ಹೋಗುತ್ತಿದ್ದನು. ಮೇ 18, 2022 ರಂದು ಸಂಜೆ, ಪೂನಾವಾಲಾ 27 ವರ್ಷದ ಶ್ರದ್ಧಾ ವಾಲ್ಕರ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು.

Leave A Reply

Your email address will not be published.