ಮಂಗಳೂರು : ಕುಕ್ಕರ್ ಬಾಂಬ್ ಸ್ಫೋಟ ,ಹೊಣೆ ಹೊತ್ತುಕೊಂಡ ISIS
Mangalore cooker blast :ಮಂಗಳೂರು: 2022ರ ನವೆಂಬರ್ ನಲ್ಲಿ ಮಂಗಳೂರಿನ ಕಂಕನಾಡಿಯಲ್ಲಿ ನಡೆದಿದ್ದ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಪೋಟ (Mangalore cooker blast) ಪ್ರಕರಣದ ಹೊಣೆಯನ್ನು ಉಗ್ರ ಸಂಘಟನೆ ಐಸಿಸ್ (ISIS) ಹೊತ್ತುಕೊಂಡಿದೆ ಎಂದು ವರದಿ ತಿಳಿಸಿದೆ.
ತಮಿಳುನಾಡಿನ ಕೊಯಂಬತ್ತೂರು ಮತ್ತು ಕರ್ನಾಟಕದ ಮಂಗಳೂರಿನಲ್ಲಿ ನಡೆದ ಸ್ಫೋಟವನ್ನೂ ಐಸಿಸ್‌ಗೆ ಸೇರಿದ ಉಗ್ರರು ನಡೆಸಿದ್ದರು ಎಂದು ಹೇಳಿದೆ.
ಇಸ್ಲಾಮಿಕ್ ಸ್ಟೇಟ್ ವಿಲಾಯಾ ಖೋರಾಸಾನ್ ತನ್ನ ವಾಯ್ಸ್ ಆಫ್ ಖೋರಾಸಾನ್ ನಿಯತಕಾಲಿಕೆಯ 23ನೇ ಸಂಚಿಕೆಯಲ್ಲಿ, ಕಳೆದ ವರ್ಷ ಕರ್ನಾಟಕದ ಮಂಗಳೂರಿನಲ್ಲಿ ನಡೆದ ಸ್ಫೋಟವನ್ನು ಐಎಸ್ ಅಂಗಸಂಸ್ಥೆ ಉಗ್ರಗಾಮಿಗಳು ನಡೆಸಿದೆ ಎಂದು ಹೇಳಿಕೊಂಡಿದೆ.
ಮಂಗಳೂರಿನಲ್ಲಿ ನಡೆದ ಸ್ಫೋಟವು ಆಕಸ್ಮಿಕವಲ್ಲ. ಇದು ‘ಭಯೋತ್ಪಾದನಾ ಕೃತ್ಯ’ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆ ಸಮಯದಲ್ಲೇ ಸ್ಪಷ್ಟಪಡಿಸಿದ್ದರು.
ಘಟನೆಯಲ್ಲಿ ಉಗ್ರ ಶಾಕೀರ್ ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಆರೋಪಿ ಶಾಕೀರ್ ಜತೆ ನಿಕಟ ಸಂಬಂಧ ಹೊಂದಿದ್ದ ಆರೋಪದಲ್ಲಿ ತನಿಖಾ ಅಧಿಕಾರಿಗಳು ನಗರದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ವಶಕ್ಕೆ ಪಡೆದಿದ್ದರು.