ISIS: ಮಂಗಳೂರು ಕುಕ್ಕರ್ ಬಾಂಬ್, ಕೊಯಮತ್ತೂರು ಕಾರ್ ಬಾಂಬ್ ಧಾಳಿಗೆ ಮೇಜರ್ ಟ್ವಿಸ್ಟ್! ಸ್ಪೋಟಕ್ಕೆ ನಾವೇ ಕಾರಣ ಎಂದ ISIS!
ISIS :ಕಳೆದ ವರ್ಷ ಅಕ್ಟೋಬರ್(October) 23 ರಂದು ಕೊಯಮತ್ತೂರಿ(Koyamattur)ನಲ್ಲಿ ನಡೆದ ಕಾರ್ ಬಾಂಬ್(Car Bomb) ಸ್ಪೋಟ ಮತ್ತು ನವೆಂಬರ್ 19 ರಂದು ಮಂಗಳೂರಿನ ಆಟೋರಿಕ್ಷಾದಲ್ಲಿ ಉಂಟಾದ ಕುಕ್ಕರ್ ಸ್ಫೋಟ ವಿಚಾರಗಳು ಇಡೀ ದೇಶದಲ್ಲಿ ಭಾರೀ ಸಂಚಲನ ಉಂಟುಮಾಡಿತ್ತು. ಇದರ ಹಿನ್ನೆಲೆಯಲ್ಲಿ ಕೆಲವು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೀಗ ಈ ಎರಡು ಪ್ರಕರಣಗಳಿಗೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಸಹ ಸಂಘಟನೆಯಾದ ಖೊರಾಸನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ (ISIS) (ಐಎಸ್ಕೆಪಿ)ಈ ದಾಳಿಗಳ ಹೊಣೆ ಹೊತ್ತಿದೆ.
ಹೌದು, ಮಂಗಳೂರಿನ(Manglore) ಕದ್ರಿ ದೇವಾಲಯದ ಮೇಲೆ ದಾಳಿ ಮಾಡುವ ಉದ್ದೇಶದಿಂದ ಶಂಕಿತ ಉಗ್ರ ಶಾರೀಕ್(Sharik) ಕುಕ್ಕರ್ ನಲ್ಲಿ ಬಾಂಬ್ ಇಟ್ಟುಕೊಂಡು ಹೋಗುತ್ತಿದ್ದಾಗ ಕಂಕನಾಡಿ ಬಳಿ ಅಚಾನಕ್ ಆಗಿ ಸ್ಫೋಟವಾಗಿ ದೊಡ್ಡ ಅನಾಹುತ ತಪ್ಪಿತ್ತು. ಇನ್ನು ತಮಿಳುನಾಡಿನ(Tamilnadu) ಕೊಯಮತ್ತೂರು ಬಳಿ ಸಹ ಸ್ಫೋಟ ನಡೆಸಿತ್ತು. ಈ ಘಟನೆಗಳಾಗಿ ಹಲವು ತಿಂಗಳ ಬಳಿಕ ಖೊರಸಾನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ (ಐಎಸ್ಕೆಪಿ) ತನ್ನ ಮುಖವಾಗಿ ‘ವಾಯ್ಸ್ ಆಫ್ ಖೊರಸಾನ್’ ಪತ್ರಿಕೆಯ ಮೂಲಕ ಇದು ತಾವೇ ಮಾಡಿದ ಕೃತ್ಯ ಎಂದು ಒಪ್ಪಿಕೊಂಡಿದೆ. ತಮ್ಮ ಭಯೋತ್ಪಾದಕರು ದಕ್ಷಿಣ ಭಾರತದಲ್ಲಿ ಸಕ್ರಿಯರಾಗಿದ್ದು, ಕಳೆದ ವರ್ಷ ನಡೆದ ಎರಡು ಬ್ಲಾಸ್ಟ್ಗಳಲ್ಲಿ ಇವರು ಭಾಗಿಯಾಗಿದ್ದಾರೆ ಎಂದು ಬರೆದುಕೊಂಡಿದೆ.
ಐಎಸ್ಕೆಪಿ(ISKP) ಸಂಗಟನೆಯು ತಾನು ಎಸಗುವ ಕೃತ್ಯಗಳನ್ನು ಹಾಗೂ ಹಿಂಸಾ ಆಲೋಚನೆಗಳನ್ನು ಪ್ರಚಾರ ಮಾಡಲು ಈ ವಾಯ್ಸ್ ಆಫ್ ಖೊರಸಾನ್(Voice Of Korose) ಎಂಬ ಮ್ಯಾಗಝೀನನ್ನು ಬಳಸಿಕೊಳ್ಳುತ್ತದೆ. ಸದ್ಯ ಈ ಮ್ಯಾಗಝಿನ್ ನ 68 ಪುಟಗಳ 23ನೇ ದೀರ್ಘ ಆವೃತ್ತಿಯು ಪ್ರಕಟವಾಗಿದ್ದು, ಅದರಲ್ಲಿ ಈ ವಿವರಗಳನ್ನು ದಾಖಲು ಮಾಡಿದೆ. ಸಂಪೂರ್ಣವಾಗಿ ಇಂಗ್ಲೀಷ್ನಲ್ಲಿ ಪ್ರಕಟಿಸಿದೆ. ಅಲ್ಲದೆ ‘ಮಂಗಳೂರಿನ ಕದ್ರಿಯಲ್ಲಿರುವ ಹಿಂದೂ ದೇವಾಲಯದ ಮೇಲೆ ದಾಳಿ ಮಾಡಲು ನಮ್ಮ ಸಹೋದರ ಪ್ರಯತ್ನಿಸಿದ್ದನು. ಆದರೆ ಅದು ವಿಫಲವಾಗಿದೆ. ಆದರೆ ನಮ್ಮ ಕಾರ್ಯಾಚರಣೆಗಳನ್ನು ನಿಲ್ಲಿಸುವುದಿಲ್ಲ. ರಾಜ್ಯ, ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ಣು ತಪ್ಪಿಸಿ ದಾಳಿ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ’ ಎಂದು ಉಗ್ರರು ಎಚ್ಚರಿಕೆ ನೀಡಿದ್ದಾರೆ.
ಇದರೊಂದಿಗೆ ಹಿಂದುಗಳು, ಹಿಂದೂ ಸಂಘಟನೆಯ, BJP ಮತ್ತು ಭಾರತೀಯ ಸೇನೆಯ ವಿರುದ್ಧ ಐಎಸ್ಕೆಪಿ ವಿಷಕಾರಿದೆ. ದಕ್ಷಿಣ ಭಾರತದ ಮುಜಾಹಿದ್ದೀನ್ಗಳು ಇವರ ವಿರುದ್ಧ ಯುದ್ಧ ಸಾರಬೇಕು, ಹಿಂದುಗಳನ್ನು ಅಲ್ಲಾ ಹಾಗೂ ಪ್ರವಾದಿಯ ವಿರೋಧಿಗಳು ಎಂದು ಮೊದಲಿನಿಂದಲೂ ಉಲ್ಲೇಖ ಮಾಡಲಾಗುತ್ತಿದ್ದು, ಇವರ ವಿರುದ್ಧ ಸೇಡು ತೀರಿಸಿಕೊಳ್ಳಬೇಕು, ಕಾಶ್ಮೀರ (ಮುಸ್ಲಿಂಮೇತರರನ್ನು ಗುರಿಯಾಗಿಸಿ), ಬಾಬ್ರಿ ಮಸೀದಿ ಹಾಗೂ ಗುಜರಾತ್ ಗಲಭೆಗಳಿಗೆ ಸೇಡು ತೀರಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಇನ್ನು ತಮ್ಮ ಭಯೋತ್ಪಾದಕರು ದಕ್ಷಿಣ ಭಾರತದಲ್ಲಿ ಸಕ್ರಿಯರಾಗಿದ್ದು, ಕಳೆದ ವರ್ಷ ನಡೆದ ಎರಡು ಬ್ಲಾಸ್ಟ್ಗಳಲ್ಲಿ ಇವರು ಭಾಗಿಯಾಗಿದ್ದಾರೆ ಎಂದು ಈ ಪತ್ರಿಕೆಯಲ್ಲಿ ಉವ್ಲೇಖಿಸಿದ್ದರೂ, ದಕ್ಷಿಣದ ಯಾವ ರಾಜ್ಯದಲ್ಲಿ ಅದರ ‘ಮುಜಾಹಿದ್ದೀನ್ಗಳು’ ಸಕ್ರಿಯವಾಗಿದ್ದಾರೆ ಎನ್ನುವುದನ್ನು ನಿರ್ದಿಷ್ಟವಾಗಿ ಹೇಳಿಲ್ಲ. ಈಗಿರುವ ಅಂದಾಜಿನ ಪ್ರಕಾರ ಕೇರಳದಲ್ಲಿ ಇವರ ಸಂಖ್ಯೆ ಹೆಚ್ಚಾಗಿದ್ದು, ಕರ್ನಾಟಕ ಹಾಗೂ ತಮಿಳುನಾಡಿನ ಕೆಲವು ಭಾಗಗಳಲ್ಲಿ ಇವರು ಕೃತ್ಯಗಳನ್ನು ಎಸಗಬಹುದು ಎನ್ನಲಾಗಿದೆ.
ಐಸಿಸ್ ಬಗ್ಗೆ ಮೃದು ಧೋರಣೆ ಹೊಂದಿರುವ ಶಂಕಿತ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೇರಳ, ತಮಿಳುನಾಡು ಮತ್ತು ಕರ್ನಾಟಕದಲ್ಲಿ 60 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ನಡೆಸಿದ ಎರಡು ವಾರಗಳ ನಂತರ ಈ ವಿಚಾರ ಪ್ರಕಟವಾಗಿದೆ.