ಭಾರತದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ Brisk ಇವಿ! 333KM ರೇಂಜ್ ನೀಡುತ್ತೆ ಈ ಸ್ಕೂಟರ್!
Brisk Ev :ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಹವಾ ಜೋರಾಗಿದೆ. ಎಲೆಕ್ಟ್ರಿಕ್ ವಾಹನಗಳನ್ನು ಜನರು ಹೆಚ್ಚು ಹೆಚ್ಚು ಕೊಂಡುಕೊಳ್ಳುತ್ತಿದ್ದಾರೆ. ಇದೀಗ ಕಡಿಮೆ ಬೆಲೆಯಲ್ಲಿ ದೇಶೀಯ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣ ಮಾಡಿದೆ.
ಹೈದರಾಬಾದ್ ಮೋಟಾರ್ ಶೋನಲ್ಲಿ ಬ್ರಿಸ್ಕ್ ಇವಿ (Brisk EV), ಎರಡು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ವರ್ಚುವಲ್ ರಿಯಾಲಿಟಿ ಮೂಲಕ ಪ್ರದರ್ಶಿಸಿದೆ. ಅವುಗಳೆಂದರೆ, ಆರಿಜಿನ್ (Origin) ಹಾಗೂ ಆರಿಜಿನ್ ಪ್ರೊ (Origin Pro). ಇದರಲ್ಲಿ ಸಂಪೂರ್ಣ ಚಾರ್ಜಿನಲ್ಲಿ ಆರಿಜಿನ್ ಪ್ರೊ ಗರಿಷ್ಠ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಆರಿಜಿನ್ ಪ್ರೊ (Origin Pro) ಎಲೆಕ್ಟ್ರಿಕ್ ಸ್ಕೂಟರ್ :
ಆರಿಜಿನ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಇದು ಸಂಪೂರ್ಣ ಚಾರ್ಜಿನಲ್ಲಿ ಗರಿಷ್ಠ 333 ಕಿಲೋಮೀಟರ್ ರೇಂಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸ್ಕೂಟರ್, 85 kmph ಟಾಪ್ ಸ್ವೀಡ್ ಹೊಂದಿದೆ. ಹಾಗೂ 4.8 kWh ಸ್ಥಿರ ಬ್ಯಾಟರಿ (fixed battery) ಜೊತೆಗೆ 2.1 kWh ಬದಲಾಯಿಸಬಹುದಾದ ಬ್ಯಾಟರಿ (swappable battery) ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ.
ಕೇವಲ 3.3 ಸೆಕೆಂಡುಗಳಲ್ಲಿ ಈ ಸ್ಕೂಟರ್ 0-40 kmph ವೇಗವನ್ನು ಪಡೆಲಿದ್ದು, ಇದರಲ್ಲಿ ಅಳವಡಿಸಿರುವ ಮೋಟಾರ್, 5.5 kW ಪೀಕ್ ಪವರ್ ಉತ್ಪಾದಿಸಲಿದೆ. OTA ಅಪ್ಡೇಟ್, ಬ್ಲೂಟೂತ್ ಸಂಪರ್ಕ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ರೂ.1,20,000 – ರೂ.1,40,000 ಬೆಲೆಯಲ್ಲಿ ಈ ಸ್ಕೂಟರ್ ಖರೀದಿಗೆ ಲಭ್ಯವಾಗಲಿದೆ.
ಆರಿಜಿನ್ (Origin) ಎಲೆಕ್ಟ್ರಿಕ್ ಸ್ಕೂಟರ್ :
ಇದು ಫುಲ್ ಚಾರ್ಜಿನಲ್ಲಿ 175 km ರೇಂಜ್ ನೀಡುವ ಸಾಮರ್ಥ್ಯ ಪಡೆದಿದ್ದು, 65 kmph ಟಾಪ್ ಸ್ವೀಡ್ ಹೊಂದಿದೆ. ಕೇವಲ 5 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯಲಿದೆ. ಜೊತೆಗೆ ಕೊಂಚ ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿದ್ದು, ರೂ.70,000 ದಿಂದ ರೂ.80,000 ದರದಲ್ಲಿ ಸಿಗಲಿದೆ.
ಸದ್ಯ ಬ್ರಿಸ್ಕ್ ಇವಿಯ ಇವರೆಡು ಸ್ಕೂಟರ್ ಗಳನ್ನು ಹೈದರಾಬಾದ್ ಉತ್ಪಾದನಾ ಘಟಕದಲ್ಲಿ ತಯಾರಿಸುತ್ತಿದ್ದು, ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು.
ಈ ಮೇಲಿನ ಆರಿಜಿನ್ (Origin) ಹಾಗೂ ಆರಿಜಿನ್ ಪ್ರೊ (Origin Pro) ಸ್ಕೂಟರ್ ಹೆಚ್ಚಿನ ರೇಂಜ್ ಹೊಂದಿರುವುದರಿಂದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೇಲೆ ಹೆಚ್ಚಿನ ಗ್ರಾಹಕರು ಖರೀದಿಸಬಹುದು ಎಂದು ಅಂದಾಜಿಸಲಾಗಿದೆ.